ಪವನ್‌ ಶಂಕರ್‌ ಮತ್ತು ಸಹನಾ ಸುಧಾಕರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಯಥಾಭವ’ ಸಿನಿಮಾದ ಟೀಸರ್‌ ಆಗಸ್ಟ್‌ 25ರಂದು ಬಿಡುಗಡೆಯಾಗಲಿದೆ. ಗೌತಮ್‌ ಬಸವರಾಜು ಕತೆ, ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶಿಸಿರುವ ಚಿತ್ರವಿದು.

ಗೌತಮ್ ಬಸವರಾಜು ಕತೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ‘ಯಥಾಭವ’ ಕೋರ್ಟ್‌ ರೂಂ ಡ್ರಾಮಾ ‘ಯಥಾಭವ’ ಚಿತ್ರದ ಟೀಸರ್‌ ಆಗಸ್ಟ್‌ 25ರಂದು ಬಿಡುಗಡೆಯಾಗಲಿದೆ. ಪವನ್ ಶಂಕರ್ ಮತ್ತು ಸಹನಾ ಸುಧಾಕರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರವಿದು. ಹಿರಿಯ ನಟ ರಾಕ್‌ಲೈನ್ ಸುಧಾಕರ್ ಅವರ ಪುತ್ರ ಗೌತಮ್ ಸುಧಾಕರ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಬಾಲ ರಾಜವಾಡಿ, ಗೋಪಾಲಕೃಷ್ಣ ದೇಶಪಾಂಡೆ, ಮಾಸ್ಟರ್ ಶಮಂತ್, ನೀನಾಸಂ ಆನಂದ್, ಉಮಾ ಹೆಬ್ಬಾರ್, ಮಹೇಶ್ ಕಾಳಿ ಇದ್ದಾರೆ. ಉತ್ಸವ್ ಶ್ರೇಯಸ್ ಸಂಗೀತ ಸಂಯೋಜಿಸಿರುವ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸುರೇಶ್ ರೆಡ್ಡಿ ಹಾಗೂ ಅಭಿಷೇಕ್ ಅಕ್ಕಣ್ಣನವರ್ ಈ ಹಾಡುಗಳನ್ನು ಬರೆದಿದ್ದಾರೆ. Macht Entertainments ಬ್ಯಾನರ್‌ ಅಡಿಯಲ್ಲಿ ಸುಜಾತ ಕುಮಾರಿ ಮತ್ತು ಅನಿಲ್ ಕುಮಾರ್ ಬಿ ಎನ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ಹರ್ಷ್ ಮಿಶ್ರ ಛಾಯಾಗ್ರಹಣ, ಹರೀಶ್ ಚೌಧರಿ ಸಂಕಲನ, ಕುಂಗ್ಫು ಚಂದ್ರು ಸಾಹಸ ನಿರ್ದೇಶನ, ಸುಚಿತ್ ಚವ್ಹಾಣ್, ನೃತ್ಯ ನಿರ್ದೇಶನ, ಸ್ಮಿತ ಕುಲಕರ್ಣಿ ಕಲಾ ನಿರ್ದೇಶನ ಹಾಗೂ ನಿರ್ಮಲ್ ಜೋಶಿ ಸಹನಿರ್ದೇಶನವಿದೆ.

Previous article‘ರಾಮಚಂದ್ರ Boss & Co’ ಟ್ರೈಲರ್‌ | ನಿವಿನ್‌ ಪೌಲಿ ನಟನೆಯ ಸಿನಿಮಾ ಆಗಸ್ಟ್‌ 25ಕ್ಕೆ
Next articleಸಿದ್ದಾರ್ಥ್‌ ‘ಚಿತ್ತಾ’ ಪೋಸ್ಟರ್‌ ಬಿಡುಗಡೆ ಮಾಡಿದ ವಿಜಯ್‌ ಸೇತುಪತಿ | ಸೆಪ್ಟೆಂಬರ್‌ 28ಕ್ಕೆ ಸಿನಿಮಾ

LEAVE A REPLY

Connect with

Please enter your comment!
Please enter your name here