ಸಮಕಾಲೀನ ಜಗತ್ತಿನ ಸೋಷಿಯಲ್‌ ಮೀಡಿಯಾ ಸುತ್ತಮುತ್ತ ಹೆಣೆದಿರುವ Escaype Live ಸರಣಿಯ ಟ್ರೈಲರ್‌ ಬಿಡುಗಡೆಯಾಗಿದೆ. ಆರು ಮಹತ್ವಾಕಾಂಕ್ಷಿಗಳ ಬದುಕಿನ ಜರ್ನೀ ಹೇಳುವ ಸರಣಿ ಮೇ 20ರಿಂದ Disneyplus hotstarನಲ್ಲಿ ಸ್ಟ್ರೀಮ್‌ ಆಗಲಿದೆ.

ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿರುವ Escaype Live ವೆಬ್‌ ಸರಣಿಯ ಪ್ರಮುಖ ಪಾತ್ರಗಳಲ್ಲಿ ಸಿದ್ದಾರ್ಥ್‌, ಜಾವೆದ್‌ ಜಾಫರಿ, ಶ್ವೇತಾ ತಿವಾರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. Escaype Live ಸೋಷಿಯಲ್‌ ಮೀಡಿಯಾ app ಮೂಲಕ ಹಣ ಗಳಿಸಲು ಪೈಪೋಟಿಗೆ ಬೀಳುವ ಆರು ಮಹತ್ವಾಕಾಂಕ್ಷಿಗಳ ಕತೆಯಿದು. ಇವರ ಕತೆ ಹೇಳುತ್ತಲೇ ಸರಣಿಯ ನಿರ್ದೇಶಕ ಸಿದ್ದಾರ್ಥ್‌ ಕುಮಾರ್‌ ಅವರು ಸೋಷಿಯಲ್‌ ಮೀಡಿಯಾದ ಪ್ರಭಾವ, ಅದರ ಸೈಡ್‌ ಎಫೆಕ್ಟ್‌ಗಳನ್ನೂ ಇಲ್ಲಿ ನಿರೂಪಿಸುತ್ತಿದ್ದಾರೆ. “ಸರಣಿಯ ಚಿತ್ರಕಥೆ ಮತ್ತು ನನ್ನ ಪಾತ್ರದ ಚಿತ್ರಣ ನನ್ನನ್ನು ಇದರಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿತು. ಇದು ಸೋಷಿಯಲ್‌ ಮೀಡಿಯಾಗೆ ಸಂಬಂಧಿಸಿದ ಕತೆ. ಈ ಮಾಧ್ಯಮದಲ್ಲಿ ಎಲ್ಲರೂ ಸರ್ವಸ್ವತಂತ್ರರು. ಇಲ್ಲಿ ಯಾವುದು ಸರಿ, ಯಾವುದು ತಪ್ಪು ಎನ್ನುವುದಕ್ಕೆ ನಿರ್ದಿಷ್ಟ ಮಾನದಂಡಗಳಿಲ್ಲ. ದೊಡ್ಡ ಸಂಖ್ಯೆಯಲ್ಲಿ ಫೇಕ್‌ ಐಡಿಗಳಿರುತ್ತವೆ. ಜನರು ಮುಖವಾಡ ತೊಟ್ಟು ಬರುತ್ತಾರೆ. ಸರಣಿಯಲ್ಲಿ ಈ ಅಂಶಗಳ ಮೇಲೆ ಬೆಳಕು ಚೆಲ್ಲಲಾಗಿದೆ” ಎನ್ನುತ್ತಾರೆ ನಟ ಸಿದ್ದಾರ್ಥ್‌.

ನಿರ್ದೇಶಕ ಸಿದ್ದಾರ್ಥ್‌ ಕುಮಾರ್‌, “ಸೋಷಿಯಲ್‌ ಮೀಡಿಯಾ ಜಗತ್ತಿನ ಭ್ರಮೆಯಲ್ಲಿ ತೇಲುತ್ತಿರುವವರು ಈ ಸರಣಿ ಮೂಲಕ ಎಚ್ಚೆತ್ತುಕೊಳ್ಳಬಹುದು. ತಾವು ಮಾಡುತ್ತಿರುವುದು ಸರಿಯೋ, ತಪ್ಪೋ ಎನ್ನುವ ಗೊಂದಲದಲ್ಲಿರುವ ಮಂದಿಗೆ ಇಲ್ಲಿ ಉತ್ತರ ಸಿಗಲಿದೆ” ಎಂದಿದ್ದಾರೆ. ಸ್ವಸ್ತಿಕಾ ಮುಖರ್ಜಿ, ಪ್ಲಬಿತಾ ಬೋರ್ತಾಕೂರ್‌, ವಲುಶ್ಚಾ ಡಿ ಸೋಜಾ, ಋತ್ವಿಕ್‌ ಸಾಹೋರ್‌, ಸುಮೇಧಾ ಮುದ್ಗಾಲ್ಕರ್‌, ಗೀತಿಕಾ ವಿದ್ಯಾ ಓಹ್ಲಾನ್‌ ಇತರರು ಸರಣಿಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಯಮಿಶ್ರಾ ಮತ್ತು ಸಿದ್ದಾರ್ಥ ಕುಮಾರ್‌ ಚಿತ್ರಕಥೆ ರಚಿಸಿರುವ ಸರಣಿ One Life Studioದಿಂದ ನಿರ್ಮಾಣಗೊಂಡಿದೆ. ಮೇ 20ರಿಂದ Disneyplus hotstarನಲ್ಲಿ ಸರಣಿ ಸ್ಟ್ರೀಮ್‌ ಆಗಲಿದೆ.

Previous article‘ಬಯಲುಸೀಮೆ’ ಆಡಿಯೋ ಬಿಡುಗಡೆ; ಪೊಲಿಟಿಕಲ್‌ ಕ್ರೈಂ-ಥ್ರಿಲ್ಲರ್‌ ಸಿನಿಮಾ
Next articleOTT ಗೆ ಬಂದ ‘ಗಂಗೂಬಾಯಿ ಕಥೈವಾಡಿ’; ಮೇಕಿಂಗ್‌ ವೀಡಿಯೋ ರಿಲೀಸ್‌ ಮಾಡಿದ ಚಿತ್ರತಂಡ

LEAVE A REPLY

Connect with

Please enter your comment!
Please enter your name here