ವಕ್ಕಂತಂ ವಂಶಿ ನಿರ್ದೇಶನದ ‘ಎಕ್ಸ್‌ಟ್ರಾ ಆರ್ಡಿನರಿ ಮ್ಯಾನ್‌’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ನಿತಿನ್‌ ಮತ್ತು ಶ್ರೀಲೀಲಾ ಮುಖ್ಯಪಾತ್ರಗಳಲ್ಲಿ ನಟಿಸಿರುವ ಚಿತ್ರವಿದು. ಡಿಸೆಂಬರ್ 8, 2023ರಂದು ಸಿನಿಮಾ ತೆರೆಕಾಣಲಿದೆ.

ನಿತಿನ್‌ ಮತ್ತು ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಎಕ್ಸ್‌ಟ್ರಾ ಆರ್ಡಿನರಿ ಮ್ಯಾನ್’ (Extra Ordinary Man) ತೆಲುಗು ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ವಕ್ಕಂತಂ ವಂಶಿ ನಿರ್ದೇಶಿಸಿದ್ದಾರೆ. ಚಿತ್ರದ ಟೀಸರ್‌ನಲ್ಲಿ ನಿತಿನ್‌ ಆಕ್ಷನ್ ಹೀರೋ ಆಗಿ ಗೋಚರಿಸುತ್ತಾರೆ. ಆದರೆ ತಾನು ಆರ್ಡಿನರಿ ಮ್ಯಾನ್‌ ಎಂದು ನಿತಿನ್‌, ರಫಿಗೆ ಹೇಳುತ್ತಾರೆ. ‘ನಾನು ಒಬ್ಬ ಜೂನಿಯರ್‌ ಆರ್ಟಿಸ್ಟ್‌. ಬಾಹುಬಲಿ ಸಿನಿಮಾ ನೋಡಿದ್ದೀಯ? ಅದರಲ್ಲಿ ಬರುವ ದಂಡಾಲಯ್ಯ ಹಾಡಿನಲ್ಲಿ ಸಾಮಾನ್ಯ ಮನುಷ್ಯನಾಗಿ ನಾನು ನಟಿಸಿದ್ದೇನೆ’ ಎಂದು ‘ಬಾಹುಬಲಿ’ಚಿತ್ರದ ಹಾಡನ್ನು ಸಹ ಉಲ್ಲೇಖಿಸಲಾಗಿದೆ.

ತಂದೆಯಿಂದ ನಿತಿನ್‌ ಸದಾ ಅಪಹಾಸ್ಯಕ್ಕೆ ಈಡಾಗುತ್ತಿರುತ್ತಾನೆ. ಶ್ರೀಲೀಲಾ, ನಿತಿನ್‌ನನ್ನು ಯಾವುದೋ ಸಿನಿಮಾದಲ್ಲಿ ನೋಡಿದ್ದೇನೆ ಎಂದು ನೆನಪಿಸಿಕೊಳ್ಳುತ್ತಿರುತ್ತಾಳೆ. ಚಿತ್ರದ ಟೀಸರ್ ಆಕ್ಷನ್-ಥ್ರಿಲ್ಲರ್‌ ಹಾಗೂ ಹಾಸ್ಯಮಯವಾಗಿ ಮೂಡಿಬಂದಿದೆ. ಸಿನಿಮಾದಲ್ಲಿ ಡಾ ರಾಜಶೇಖರ್, ಸುದೇವ್ ನಾಯರ್, ರಾವ್ ರಮೇಶ್, ರೋಹಿಣಿ, ಬ್ರಹ್ಮಾಜಿ, ಅಜಯ್, ಹರ್ಷ ವರ್ಧನ್, ಅನ್ನಪೂರ್ಣಮ್ಮ, ಪವಿತ್ರ ನರೇಶ್, ರವಿವರ್ಮ, ಹೈಪರ್ ಆದಿ, ವೆಂಕಟೇಶ್ ಮುಮ್ಮಿಡಿ, ಜಗದೀಶ್, ಸೋನಿಯಾ ಸಿಂಗ್, ಸತ್ಯಶ್ರೀ, ಹರಿತೇಜಾ, ಶ್ರೀಕಾಂತ್ ಅಯ್ಯಂಗಾರ್‌, ರೂಪಾ ಲಕ್ಷ್ಮಿ, ಪೃಥ್ವಿ, ಶಿವ ರಾಮಚಂದ್ರವರಪು ಪ್ರಮುಖ ಪಾತ್ರಗಳಲ್ಲಿದ್ದಾರೆ. Sreshth Movies ಬ್ಯಾನರ್‌ ಅಡಿಯಲ್ಲಿ ಸುಧಾಕರ್ ರೆಡ್ಡಿ ಮತ್ತು ನಿಕಿತಾ ರೆಡ್ಡಿ ಚಿತ್ರ ನಿರ್ಮಿಸಿದ್ದಾರೆ. ಚಲನಚಿತ್ರಕ್ಕೆ ಪ್ರವೀಣ್‌ ಪುಡಿ ಸಂಕಲನ, ಹ್ಯಾರಿಸ್‌ ರಾಜ್‌ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾ ಡಿಸೆಂಬರ್ 8, 2023ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here