ಮೊನ್ನೆ ಡಿಸೆಂಬರ್‌ 15ರಂದು ಮುಂಬೈನಲ್ಲಿ filmfare OTT ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ‘ಪಾತಾಳ್‌ ಲೋಕ್‌’ ಸೀಸನ್‌ 2 ಮತ್ತು ‘ಬ್ಲಾಕ್‌ ವಾರಂಟ್‌’ ಸರಣಿಗಳು ವಿವಿಧ ವಿಭಾಗಗಳಲ್ಲಿ ಹೆಚ್ಚು ಪ್ರಶಸ್ತಿ ಗಳಿಸಿದವು.

2025ರ filmfare OTT ಪ್ರಶಸ್ತಿ ಸಮಾರಂಭ ಮೊನ್ನೆ ಡಿಸೆಂಬರ್‌ 15ರಂದು ಮುಂಬೈನಲ್ಲಿ ಆಯೋಜನೆಗೊಂಡಿತ್ತು. ಭಿನ್ನ ಜಾನರ್‌ನ ಓಟಿಟಿ ಕಂಟೆಂಟ್‌ ಗುರುತಿಸಿ ಪ್ರಶಸ್ತಿಗಳನ್ನು ನೀಡಲಾಯ್ತು. ‘ಪಾತಾಳ್‌ ಲೋಕ್‌’ ಸೀಸನ್‌ 2 (ಅತ್ಯುತ್ತಮ ಸರಣಿ – ಕ್ರಿಟಿಕ್‌), ನಾಗೇಶ್‌ ಕುಕುನೂರ್‌ (ದಿ ಹಂಟ್‌: ದಿ ರಾಜೀವ್‌ ಗಾಂಧಿ ಅಸಾಸಿನೇಷನ್‌ ಕೇಸ್‌, ಅತ್ಯುತ್ತಮ ನಿರ್ದೇಶನ), ಅನುಭವ್‌ ಸಿನ್ಹಾ (IC 814: ದಿ ಕಂದಹಾರ್‌ ಹೈಜಾಕ್‌, ಅತ್ಯುತ್ತಮ ನಿರ್ದೇಶನ – ಕ್ರಿಟಿಕ್‌), ಜೈದೀಪ್‌ ಅಹ್ಲವಾತ್‌ (ಪಾತಾಳ್‌ ಲೋಕ್‌ ಸೀಸನ್‌ 2, ಅತ್ಯುತ್ತಮ ನಟ), ಮೋನಿಕಾ ಪನ್ವಾರ್‌ (ಖಾಫ್‌, ಅತ್ಯುತ್ತಮ ನಟಿ) ಪ್ರಶಸ್ತಿ ಪಡೆದುಕೊಂಡರು.

ಕಾಮಿಡಿ ವೆಬ್‌ ಸರಣಿ ವಿಭಾಗಗಳಲ್ಲಿ ‘ರಾತ್‌ ಜವಾನ್‌ ಹೈ’ ಅತ್ಯುತ್ತಮ ಸರಣಿ ಪ್ರಶಸ್ತಿ ಪಡೆದಿದೆ. ಬರುನ್‌ ಸೋಬ್ತಿ (ರಾತ್‌ ಜವಾನ್‌ ಹೈ, ಅತ್ಯುತ್ತಮ ನಟ) ಮತ್ತು ಸ್ಪರ್ಷ್‌ ಶ್ರೀವಾಸ್ತವ್‌ (ದುಪಾಹಿಯಾ, ಅತ್ಯುತ್ತಮ ನಟ), ಅನನ್ಯ ಪಾಂಡೆ (ಕಾಲ್‌ ಮಿ ಬೇ, ಅತ್ಯುತ್ತಮ ನಟಿ), ವಿನಯ್‌ ಪಾಠಕ್‌ (ಗ್ರಾಮ್‌ ಚಿಕಿತ್ಸಾಲಯ್‌, ಅತ್ಯುತ್ತಮ ಪೋಷಕ ನಟ), ರೇಣುಕಾ ಶಹಾನೆ (ದುಪಾಹಿಯಾ, ಅತ್ಯುತ್ತಮ ನಟಿ) ಗೌರವ ಪಡೆದಿದ್ದಾರೆ.

Non-fiction original ವಿಭಾಗದಲ್ಲಿ ನಮ್ರತಾ ರಾವ್‌ (ಆಂಗ್ರಿ ಯಂಗ್‌ಮೆನ್‌), ಅತ್ಯುತ್ತಮ ಕತೆ ವಿಭಾಗದಲ್ಲಿ ಸ್ಮಿತಾ ಸಿಂಗ್‌ (ಖಾಫ್‌) ಮತ್ತು ಸುದೀಪ್‌ ಶರ್ಮ (ಪಾತಾಳ್‌ ಲೋಕ್‌ ಸೀಸನ್‌ 2), best original screenplay ವಿಭಾಗದಲ್ಲಿ ಸುದೀಪ್‌ ಶರ್ಮ ಮತ್ತು ತಂಡ (ಪಾತಾಳ್‌ ಲೋಕ್‌ ಸೀಸನ್‌ 2), best adapted screenplay ವಿಭಾಗದಲ್ಲಿ ಸತ್ಯಾನ್ಶು ಸಿಂಗ್‌ ಮತ್ತು ಅರ್ಕೇಶ್‌ ಅಜಯ್‌ (ಬ್ಲಾಕ್‌ ವಾರಂಟ್‌), ಅತ್ಯುತ್ತಮ ಸಂಭಾಷಣೆ ಅನುಭವ್‌ ಸಿನ್ಹಾ ಮತ್ತು ತ್ರಿಶಾಂತ್‌ ಶ್ರೀವಾಸ್ತವ (IC 814: ದಿ ಕಂದಹಾರ್‌ ಹೈಜಾಕ್‌), ಅತ್ಯುತ್ತಮ ಛಾಯಾಗ್ರಹಣ ವಿಭಾಗದಲ್ಲಿ ಪಂಕಜ್‌ ಕುಮಾರ್‌ (ಖಾಫ್‌) ಪ್ರಶಸ್ತಿ ಗಳಿಸಿದ್ದಾರೆ.

LEAVE A REPLY

Connect with

Please enter your comment!
Please enter your name here