‘ಮನೆಯವ್ರು ಬರ್ತಿದಾರೆ’ ಎಂದು ನಮ್ರತಾ ಕುಣಿದಾಡಿದ್ದಾರೆ. ನಮ್ರತಾ ಅವರ ತಾಯಿ, ವರ್ತೂರ್ ಅವರ ತಾಯಿ ಬಿಗ್‌ಬಾಸ್ ಮುಖ್ಯದ್ವಾರದಿಂದ ಬಂದಿರುವುದು ಪ್ರೋಮೊದಲ್ಲಿ ಜಾಹೀರಾಗಿದೆ. ಮತ್ತೆ ಯಾವೆಲ್ಲ ಸದಸ್ಯರ ಮನೆಯವರು ಬಿಗ್‌ಬಾಸ್ ಮನೆಗೆ ಭೇಟಿ ಕೊಟ್ಟಿದ್ದಾರೆ?

ನಿರೂಪಕ ಸುದೀಪ್ ಇಲ್ಲದೆ ಈ ವಾರಾಂತ್ಯ ಕಳೆದು ಹೊಸ ವಾರ ಶುರುವಾಗಿದೆ. ನಿನ್ನೆ ಕ್ರಿಸ್ಮಸ್‌ ಹಬ್ಬದಂದು ಎಲ್ಲಾ ಸ್ಪರ್ಧಿಗಳು ಕುಣಿದು ಕುಪ್ಪಳಿಸಿದ್ದರು. ಈಗ ಹೊಸ ಉತ್ಸಾಹದೊಂದಿಗೆ, ಅಗ್ರೆಸಿವ್ ಅಲ್ಲದೆ ಸೌಹಾರ್ಧಯುತವಾಗಿ ಆಡುವ ಸಂಕಲ್ಪದೊಂದಿಗೆ ಮನೆಮಂದಿ ಕಣಕ್ಕಿಳಿದಿದ್ದಾರೆ. ಈ ಸಂದರ್ಭದಲ್ಲಿ ಬಿಗ್‌ಬಾಸ್, ಮನೆಮಂದಿಗೆ ಹೊಸದೊಂದು ಸಿಹಿಯಾದ ಸರ್ಪೈಸ್ ನೀಡಿದ್ದಾರೆ. ಅದೇನೆಂಬುದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ. ಬಿಗ್ ಬಾಸ್ ಮನೆಯ ಸದಸ್ಯರು ಮನೆಯ ಚಟುವಟಿಕೆಗಳಲ್ಲಿ ನಿರತರಾಗಿರುವಾಗ, ಸದಸ್ಯರು ಕುಟುಂಬದವರು ಮನೆಯೊಳಗೆ ಬರುವ ಸೂಚನೆ ಸಿಕ್ಕಿದೆ.

ಇದನ್ನು ಮೊದಲು ಊಹಿಸಿದ್ದು ಮನೆಯ ಕ್ಯಾಪ್ಟನ್ ನಮ್ರತಾ. ‘ಮನೆಯವ್ರು ಬರ್ತಿದಾರೆ’ ಎಂದು ಕುಣಿದಾಡಿದ್ದಾರೆ. ನಮ್ರತಾ ಅವರ ತಾಯಿ, ವರ್ತೂರ್ ಅವರ ಅಮ್ಮ ಬಿಗ್‌ಬಾಸ್ ಮುಖ್ಯದ್ವಾರದಿಂದ ಬಂದಿರುವುದು ಪ್ರೋಮೊದಲ್ಲಿ ಜಾಹೀರಾಗಿದೆ. ಮತ್ತೆ ಯಾವೆಲ್ಲ ಸದಸ್ಯರ ಮನೆಯವರು ಬಿಗ್‌ಬಾಸ್ ಮನೆಗೆ ಭೇಟಿ ಕೊಟ್ಟಿದ್ದಾರೆ? ಮನೆಯವರನ್ನು ನೋಡಿ ಸದಸ್ಯರ ರಿಯಾಕ್ಷನ್ ಹೇಗಿತ್ತು? ಇಂದು ರಾತ್ರಿ ಬಿಗ್‌ಬಾಸ್‌ ಶೋನಲ್ಲಿ ಇವೆಲ್ಲವೂ ಬಹಿರಂಗವಾಗಲಿದೆ.

LEAVE A REPLY

Connect with

Please enter your comment!
Please enter your name here