ವಂಶಿ ನಟಿಸಿ, ನಿರ್ದೇಶಿಸುತ್ತಿರುವ ‘ಫೈರ್‌ ಫ್ಲೈ’ ಈ ವರ್ಷ ದೀಪಾವಳಿಗೆ ತೆರೆಕಾಣಲಿದೆ. ನಟ ಶಿವರಾಜಕುಮಾರ್‌ ಪುತ್ರಿ ನಿವೇದಿತಾ ಅವರು ‘ಶ್ರೀ ಮುತ್ತು ಸಿನಿ ಸರ್ವೀಸಸ್‌’ ಬ್ಯಾನರ್‌ ಅಡಿ ನಿರ್ಮಿಸುತ್ತಿರುವ ಚಿತ್ರವಿದು. ಅಭಿಲಾಷ್ ಕಳತ್ತಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ.

ನಟ ಶಿವರಾಜಕುಮಾರ್ ಪುತ್ರಿ ನಿವೇದಿತಾ ನಿರ್ಮಾಣದ ಚೊಚ್ಚಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.‌ ನಿವೇದಿತಾ ಒಡೆತನದ Shri Mutthu Cine Services ಬ್ಯಾನರ್ ಅಡಿ ಮೂಡಿಬಂದಿರುವ ‘ಫೈರ್ ಫ್ಲೈ’ ದೀಪಾವಳಿ ಹಬ್ಬದಂದು ಬಿಡುಗಡೆಯಾಗಲಿದೆ. ಶಿವರಾಜಕುಮಾರ್‌ ಮತ್ತು ಗೀತಾ ಶಿವರಾಜಕುಮಾರ್ ಮಗಳ ಪ್ರಯತ್ನಕ್ಕೆ ಜೊತೆಯಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಿವೇದಿತಾ ಶಿವರಾಜಕುಮಾರ್ ಮಾತನಾಡಿ, ‘ವೆಬ್ ಸೀರೀಸ್ ಮಾಡಿದ‌ ಮೇಲೆ ಸಿನಿಮಾ ಮಾಡಬೇಕು ಅನ್ನೋ ಆಸಕ್ತಿ ಇತ್ತು. ಒಳ್ಳೆಯ ತಾಂತ್ರಿಕ ತಂಡದ ಜೊತೆ ಚಿತ್ರ ಮಾಡಿದ್ದೇವೆ. ಕತೆ ತುಂಬಾ ಸರಳವಾಗಿದ್ದರೂ, ಕತೆ ಹೇಳಿದ ರೀತಿ ತುಂಬಾ ಇಷ್ಟವಾಯ್ತು. ಹೊಸ ಪ್ರಯೋಗ ಮಾಡಿದ್ದೇವೆ. ಕೊನೆಯ ಹಂತದ ಚಿತ್ರೀಕರಣ ಶುರು ಮಾಡುತ್ತಿದ್ದೇವೆ. ದೀಪಾವಳಿಗೆ ಸಿನಿಮಾ ಬಿಡುಗಡೆಯಾಗಲಿದೆ’ ಎಂದರು.

ಚಿತ್ರದ ನಟ, ನಿರ್ದೇಶಕ ವಂಶಿ ಮಾತನಾಡಿ, ‘ಎಲ್ಲರ ಜೀವನದಲ್ಲಿಯೂ ಒಂದು ಪಾಯಿಂಟ್ ಇರುತ್ತದೆ. ನಾವು ಡೆಡ್ ಎಂಡ್ ಅಂದುಕೊಂಡಿರುತ್ತೇವೆ. ಒಂದು ಭರವಸೆ ಹಾಗೂ ಪ್ರೇರಣೆಗಾಗಿ ಕಾಯುತ್ತಾ ಇರುತ್ತೇವೆ. ಆ ಸಮಯದಲ್ಲಿ ಭರವಸೆ ಎಂಬ ಬೆಳಕು ಎಲ್ಲಿಂದಲೋ ಬರೋಲ್ಲ. ನಮ್ಮಿಂದಲೇ ಬರಬೇಕು ಎನ್ನುವುದೇ ‘ಫೈರ್ ಫ್ಲೈ’. ಅದಕ್ಕೆ ಚಿತ್ರಕ್ಕೆ ಈ ಶೀರ್ಷಿಕೆ ಇಟ್ಟಿದ್ದೇವೆ. ನಿವೇದಿತಾ ಮೇಡಂಗೆ ಧನ್ಯವಾದ. ಇದಕ್ಕಿಂತ ಮೊದಲು ಎರಡು ಮೂರು ಕತೆಗಳನ್ನು ಚರ್ಚೆ ಮಾಡಿದ್ದೆವು. ಕೊನೆಗೆ ಈ ಕತೆ ಫೈನಲ್‌ ಆಯ್ತು’ ಎಂದರು. ವಂಶಿ ಅವರು ಪುನೀತ್ ರಾಜಕುಮಾರ್ ಅವರ PRK Productions ನಿರ್ಮಾಣದ ‘ಮಯಾಬಜಾರ್’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ‘ಪೆಂಟಗನ್’ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಈಗ ಸ್ವತಂತ್ರ ನಿರ್ದೇಶಕರಾಗಿ ಮತ್ತು ಪೂರ್ಣಪ್ರಮಾಣದ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here