ಜಾಕಿ ನಿರ್ದೇಶನದ ‘ಶೋಕಿವಾಲ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಹಳ್ಳಿ ಸೊಗಡಿನ ಕತೆಯಲ್ಲಿ ಅಜಯ್‌ ರಾವ್‌ ಮತ್ತು ‘ಸಲಗ’ ಸಿನಿಮಾ ಖ್ಯಾತಿಯ ಸಂಜನಾ ಆನಂದ್‌ ನಟಿಸಿದ್ದಾರೆ. ಇದೊಂದು ಲವ್‌ ಸ್ಟೋರಿ ಎನ್ನುವುದು ಟೀಸರ್‌ನಿಂದ ತಿಳಿದುಬರುತ್ತದೆ.

“ನನ್ನ ಮೊದಲ ಸಿನಿಮಾದ ಟೀಸರ್ ರೀಲಿಸ್ ಅಗಿದೆ. ಎಲ್ಲಾ ಕಡೆಯಿಂದಲ್ಲೂ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ.‌ ಮುಂದಿನ ದಿನಗಳಲ್ಲಿ ಚಿತ್ರದ ಮೊದಲ ವೀಡಿಯೋ ಸಾಂಗ್ ಬಿಡುಗಡೆ ಮಾಡುವ ತಯಾರಿ ನಡೆಸಿದ್ದೇವೆ. ಇದೇ ತಿಂಗಳು 29ರಂದು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ವಿತರಕರ ಕಡೆಯಿಂದಲೂ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಬಂದಿದ್ದು, ಅಜಯ್ ರಾವ್ ಅವರಿಗೆ ಹಿಂದಿನ ಸಿನಿಮಾಗಳಿಗಿಂತ ಹೆಚ್ಚು ಹೆಸರು ತಂದುಕೊಡಲಿದೆ” ಎನ್ನುತ್ತಾರೆ ‘ಶೋಕಿವಾಲ’ ಚಿತ್ರದ ನಿರ್ದೇಶಕ ಜಾಕಿ. ಕ್ರಿಸ್ಟಲ್ ಪಾರ್ಕ್ ಸಿನಿಮಾ ಬ್ಯಾನರ್‌ನಡಿ ಟಿ.ಆರ್.ಚಂದ್ರಶೇಖರ್ ಹಾಗೂ ಕಿಶೋರ್ ನಿರ್ಮಿಸಿರುವ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ.

ಜಾಕಿ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಅಜಯ್‌ ರಾವ್‌ ಹಳ್ಳಿ ಹೈದನಾಗಿ ಕಾಣಿಸಿಕೊಂಡಿದ್ದಾರೆ. ಮಹಾಲಕ್ಷ್ಮಿಪುರದಲ್ಲಿರುವ ವರನಟ ಡಾ.ರಾಜಕುಮಾರ್‌ ಪ್ರತಿಮೆ ಬಳಿ ಚಿತ್ರತಂಡದವರು ಟೀಸರ್‌ ಬಿಡುಗಡೆಗೊಳಿಸಿದರು. ಚನ್ನಪಟ್ಟಣ, ಹೊಂಗನೂರು, ವಿರುಪಾಕ್ಷೀಪುರ, ಶ್ರೀರಂಗಪಟ್ಟಣ, ಮಂಡ್ಯ ,ಮೈಸೂರು, ತುಮಕೂರು, ಮಾಗಡಿ ಮತ್ತಿತರೆಡೆ ಸಿನಿಮಾಗೆ ಚಿತ್ರೀಕರಣ ನಡೆದಿದೆ. ಶರತ್ ಲೋಹಿತಾಶ್ವ, ಗಿರೀಶ್ ಶಿವಣ್ಣ, ತಬಲಾ ನಾಣಿ, ಮುನಿರಾಜ್, ಪ್ರಮೋದ್ ಶೆಟ್ಟಿ, ಅರುಣ ಬಾಲರಾಜ್, ನಾಗರಾಜಮೂರ್ತಿ ಮುಖ್ಯಪಾತ್ರಗಳಲ್ಲಿದ್ದಾರೆ. ಜಯಂತ ಕಾಯ್ಕಿಣಿ, ನಾಗೇಂದ್ರ ಪ್ರಸಾದ್‌, ಚೇತನ್‌ ಕುಮಾರ್‌ ರಚನೆಯ ಹಾಡುಗಳಿಗೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ನವೀನ್ ಕುಮಾರ್ ಎಸ್. ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ , ಪ್ರಶಾಂತ್ ರಾಜಪ್ಪ ಸಂಭಾಷಣೆ, ಮೋಹನ್ ನೃತ್ಯ ನಿರ್ದೇಶನ, ವಿಕ್ರಮ್ ಮೋರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

Previous article‘ಲಹರಿ’ಗೆ 48 ವರ್ಷ; ರಿಕ್ಕಿ ಕೇಜ್‌ಗೆ ಗ್ರ್ಯಾಮಿ ಗೌರವ ಸಂದ ಸಂತಸ
Next articleಕೈ ಬಿಡಿಸಿಕೊಂಡು ಹೋದ ಪ್ರೀತಿ ಉಳಿಸಿಹೋದ ಬಣ್ಣ ನೀಲಿ

LEAVE A REPLY

Connect with

Please enter your comment!
Please enter your name here