ಲಿಖಿತ್‌ ಶೆಟ್ಟಿ ನಟನೆಯ ‘ಫುಲ್‌ ಮೀಲ್ಸ್‌’ ತಂಡದಿಂದ ಚಿತ್ರದ ಮೇಕಿಂಗ್‌ ವೀಡಿಯೋ ಬಿಡುಗಡೆಯಾಗಿದೆ. ಚಿತ್ರದ ನಿರ್ದೇಶಕ ವಿನಾಯಕ್‌ ಹುಟ್ಟುಹಬ್ಬಕ್ಕೆ ಚಿತ್ರತಂಡದ ಉಡುಗೊರೆಯಿದು. ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ಚಿತ್ರದ ಇಬ್ಬರು ನಾಯಕಿಯರು. ಸದ್ಯ ಸಿನಿಮಾ ಕೊನೆಯ ಹಂತದ ಡಬ್ಬಿಂಗ್‌ನಲ್ಲಿದೆ.

ಲಿಖಿತ್‌ ಶೆಟ್ಟಿ ನಟಿಸಿ, ನಿರ್ಮಿಸುತ್ತಿರುವ ‘ಫುಲ್‌ ಮೀಲ್ಸ್‌’ ತಂಡದಿಂದ ಚಿತ್ರದ ಮೇಕಿಂಗ್‌ ವೀಡಿಯೋ ರಿಲೀಸ್‌ ಆಗಿದೆ. ಚಿತ್ರದ ನಿರ್ದೇಶಕ ಎನ್‌ ವಿನಾಯಕ್‌ ಹುಟ್ಟುಹಬ್ಬಕ್ಕೆಂದು ಈ ವೀಡಿಯೋ ಬಿಡುಗಡೆ ಮಾಡಿ ಶುಭ ಕೋರಲಾಗಿದೆ. ಸಿನಿಮಾಗೆ ಕೊನೆಯ ಹಂತದ ಡಬ್ಬಿಂಗ್ ಕೆಲಸ ನಡೆಯುತ್ತಿದ್ದು, ಆದಷ್ಟು ಶೀಘ್ರದಲ್ಲಿ ಸಿನಿಮಾ ತೆರೆಗೆ ತರುವುದು ಚಿತ್ರತಂಡದ ಯೋಜನೆ. ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ವಿನಾಯಕ್‌ ಈ ಹಿಂದೆ ಹಲವು ಕಿರುಚಿತ್ರ ಮತ್ತು ಮ್ಯೂಸಿಕ್ ವೀಡಿಯೋಗಳ ಮೂಲಕ ಗುರುತಿಸಿಕೊಂಡಿದ್ದರು. ಕಿರುಚಿತ್ರ ಮತ್ತು ಮ್ಯೂಸಿಕ್ ವೀಡಿಯೋಗಳಿಗಾಗಿ ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾರೆ.

‘ವಿನಾಯಕ್‌ ಸೃಜನಶೀಲ ವ್ಯಕ್ತಿ. ಖಂಡಿತ ಕನ್ನಡಕ್ಕೆ ಅವರೊಬ್ಬ ಭರವಸೆಯ ಚಿತ್ರನಿರ್ದೇಶಕ’ ಎನ್ನುತ್ತಾರೆ ನಟ, ನಿರ್ಮಾಪಕ ಲಿಖಿತ್‌ ಶೆಟ್ಟಿ. ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರ ಹೊಂದಿರುವ ‘ಫುಲ್‌ ಮೀಲ್ಸ್‌’ ಸಿನಿಮಾ ತಂಡ ಸಾಕಷ್ಟು ವಿಷಯಗಳನ್ನು ಒಳಗೊಂಡಿದೆ. ಪ್ರೇಕ್ಷಕರು ಸಿನಿಮಾವನ್ನು ಇಷ್ಟಪಡುತ್ತಾರೆ ಎನ್ನುವುದು ಚಿತ್ರತಂಡದ ವಿಶ್ವಾಸ. ಹರೀಶ್ ಗೌಡ ಸಂಭಾಷಣೆ, ಮನೋಹರ್ ಜೋಷಿ ಛಾಯಾಗ್ರಹಣ, ಗುರು ಕಿರಣ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ಚಿತ್ರದ ಇಬ್ಬರು ನಾಯಕಿಯರು. ರಂಗಾಯಣ ರಘು, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಸೂರಜ್ ಲೋಕ್ರೆ, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ನಾಗೇಂದ್ರ ಅರಸ್, ಮೂಗು ಸುರೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here