ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ತೆಲುಗು ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ನಾಯಕ- ನಾಯಕಿ. ಟ್ರೇಲರ್‌ನಲ್ಲಿ ಕಾಲೇಜು ವಿದ್ಯಾರ್ಥಿ, ಪೊಲೀಸ್ ಅಧಿಕಾರಿ, ಐಎಎಸ್ ಅಧಿಕಾರಿ, ಚುನಾವಣಾ ಅಧಿಕಾರಿ, ರೈತ, ಕೃಷಿ ಸಮುದಾಯದ ರಾಜಕೀಯ ಪ್ರತಿನಿಧಿ ಹೀಗೆ ಹಲವು ಅವತಾರಗಳಲ್ಲಿ ರಾಮ್ ಚರಣ್‌ರನ್ನು ನೋಡಬಹುದು.
ಬಹುನಿರೀಕ್ಷಿತ ತೆಲುಗು ಚಿತ್ರ ‘ಗೇಮ್ ಚೇಂಜರ್’ ಟ್ರೇಲರ್ ಬಿಡುಗಡೆಯಾಗಿದೆ. ಸಂಕ್ರಾತಿಗೆ ತೆರೆಕಾಣಲಿರುವ ಚಿತ್ರದಲ್ಲಿ ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ನಾಯಕ- ನಾಯಕಿ. ತಂದೆ ಮತ್ತು ಮಗನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಮ್ ಚರಣ್ ಭ್ರಷ್ಟಾಚಾರದ ವಿರುದ್ಧ ಹೋರಾಡುವ ನಾಯಕ. ಟ್ರೇಲರ್‌ನಲ್ಲಿ ಕಾಲೇಜು ವಿದ್ಯಾರ್ಥಿ, ಪೊಲೀಸ್ ಅಧಿಕಾರಿ, ಐಎಎಸ್ ಅಧಿಕಾರಿ, ಚುನಾವಣಾ ಅಧಿಕಾರಿ, ರೈತ, ಕೃಷಿ ಸಮುದಾಯದ ರಾಜಕೀಯ ಪ್ರತಿನಿಧಿ ಹೀಗೆ ಹಲವು ಅವತಾರಗಳಲ್ಲಿ ರಾಮ್ ಚರಣ್‌ರನ್ನು ನೋಡಬಹುದು. ಟ್ರೇಲರ್ ನೋಡಿದರೆ ‘ಒಕೆ ಒಕ್ಕಡು’ (ಮುಧಲ್ವನ್) ಮತ್ತು ‘ಭಾರತೀಯುಡು’ (ಇಂಡಿಯನ್) ನಂತಹ ಐಕಾನಿಕ್ ಚಲನಚಿತ್ರಗಳನ್ನು ನಿರ್ಮಿಸಿದ ಶಂಕರ್ ಅವರ ಮ್ಯಾಜಿಕ್ ಇಲ್ಲಿಯೂ ಇರುತ್ತೆ ಎಂಬ ಭರವಸೆ ಮೂಡುತ್ತದೆ.
ಥಮನ್ ಅವರ ಹಿನ್ನೆಲೆ ಸಂಗೀತದೊಂದಿಗೆ, ‘ಗೇಮ್ ಚೇಂಜರ್’ ರಾಮ್ ಚರಣ್ ಆಕ್ಷನ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಎಸ್ ಎಸ್ ರಾಜಮೌಳಿ ಉಪಸ್ಥಿತರಿದ್ದ ವಿಶೇಷ ಸಮಾರಂಭದಲ್ಲಿ ಟ್ರೇಲರ್ ಬಿಡುಗಡೆಯಾಗಿದೆ. ಸಿನಿಮಾದಲ್ಲಿ ರಾಮ್ ಚರಣ್ ಜತೆ ಎಸ್ ಜೆ ಸೂರ್ಯ, ಕಿಯಾರಾ ಅಡ್ವಾಣಿ, ಜಯರಾಮ್, ಸಮುಥಿರಕನಿ, ಅಂಜಲಿ, ಸುನಿಲ್, ವೆನ್ನೆಲಾ ಕಿಶೋರ್ ಮತ್ತು ಶ್ರೀಕಾಂತ್ ತಾರಾಗಣದಲ್ಲಿದ್ದಾರೆ. ದಿಲ್ ರಾಜು ನಿರ್ಮಾಣದ ‘ಗೇಮ್ ಚೇಂಜರ್’ ಜನವರಿ 10ರಂದು ಬಿಡುಗಡೆಯಾಗಲಿದ್ದು, ಸಂಕ್ರಾಂತಿ ರಜಾದಿನಗಳಿಗೆ ತೆಲುಗು ಚಿತ್ರರಂಗದಲ್ಲಿ ಹ್ಯಾಟ್ರಿಕ್ ಬಿಡುಗಡೆಗೆ ನಾಂದಿ ಹಾಡಲಿದೆ. ನಂದಮೂರಿ ಬಾಲಕೃಷ್ಣ-ಬಾಬಿ ಕೊಲ್ಲಿ ಅವರ ‘ಡಾಕು ಮಹಾರಾಜ್’ ಜನವರಿ 12ರಂದು ತೆರೆಗೆ ಬರಲಿದ್ದು, ಅನಿಲ್ ರವಿಪುಡಿ-ವೆಂಕಟೇಶ್ ಅವರ ‘ಸಂಕ್ರಾಂತಿಕಿ ವಸ್ತುನಾಂ’ ಜನವರಿ 14 ರಂದು ಬಿಡುಗಡೆಯಾಗಲಿದೆ.