ವಿಶ್ವಕ್‌ ಸೇನ್‌ ಅಭಿನಯದ ‘VS11’ ತೆಲುಗು ಸಿನಿಮಾದ ಶೀರ್ಷಿಕೆ ‘ಗ್ಯಾಂಗ್ಸ್‌ ಆಫ್‌ ಗೋದಾವರಿ’ ಎಂದಾಗಿದೆ. ಕ್ಯಾರಕ್ಟರ್‌ ಇಂಟ್ರಡಕ್ಷನ್‌ Glimpses ಟೀಸರ್‌ ಕೂಡ ಹೊರಬಿದ್ದಿದ್ದು, ಇದೊಂದು ಆಕ್ಷನ್‌ – ಡ್ರಾಮಾ ಎನ್ನುವ ಸೂಚನೆ ಸಿಗುತ್ತದೆ. ಕೃಷ್ಣ ಚೈತನ್ಯ ನಿರ್ದೇಶಿಸಲಿರುವ ಸಿನಿಮಾ ಇದೇ ವರ್ಷ ಡಿಸೆಂಬರ್‌ನಲ್ಲಿ ತೆರೆಕಾಣಲಿದೆ.

ಕೃಷ್ಣ ಚೈತನ್ಯ ನಿರ್ದೇಶನದಲ್ಲಿ ವಿಶ್ವಕ್‌ ಸೇನ್‌ ಹೀರೋ ಆಗಿ ನಟಿಸುತ್ತಿರುವ ಸಿನಿಮಾಗೆ ‘ಗ್ಯಾಂಗ್ಸ್‌ ಆಫ್‌ ಗೋದಾವರಿ’ ಎಂದು ನಾಮಕರಣವಾಗಿದೆ. ಅಂಜಲಿ ಮತ್ತು ನೇಹಾ ಶೆಟ್ಟಿ ಚಿತ್ರದ ಇಬ್ಬರು ನಾಯಕಿಯರು. ಮುಖ್ಯಭೂಮಿಕೆ ಕಲಾವಿದರ ಕ್ಯಾರಕ್ಟರ್‌ Glimpses ಟೀಸರ್‌ ಕೂಡ ಹೊರಬಿದ್ದಿದೆ. ಗ್ರಾಮೀಣ ಸೊಗಡಿನ ಹಿನ್ನಲೆಯ ಕಥಾನಕ. ‘ಅಣ್ಣ ನಾವು ಗೋದಾವರಿ ಜಿಲ್ಲೆಯಿಂದ ಬಂದವರು’ ಎಂದು ಟೀಸರ್‌ ಶುರುವಾಗುತ್ತದೆ. ಸಾಯಿ ಕುಮಾರ್‌ ಹಳ್ಳಿಯ ಸ್ಥಳೀಯ ನಾಯಕನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ನಾಸರ್ ಅವರು ರಾಜಕಾರಣಿಯಾಗಿ ಪಾತ್ರ ನಿರ್ವಹಿಸಿದ್ದಾರೆ. ನಟ ವಿಶ್ವಕ್‌ ಆಕ್ಷನ್‌ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶ್ವಕ್ ಸೇನ್ ತಮ್ಮ ವೃತ್ತಿಜೀವನದಲ್ಲಿ ಕೆಲವು ವಿಭಿನ್ನ ಚಿತ್ರಗಳನ್ನು ಆಯ್ಕೆ ಮಾಡುವ ಮೂಲಕ ಅಪಾರ ಜನಪ್ರಿಯತೆಯನ್ನು ಗಳಿಸಿದ್ದು, ಅವರ ‘ಗ್ಯಾಂಗ್ಸ್‌ ಆಫ್‌ ಗೋದಾವರಿ’ ಚಿತ್ರಕ್ಕಾಗಿ, ನಿರ್ಮಾಣ ಸಂಸ್ಥೆಗಳಾದ ಸಿತಾರಾ ಎಂಟರ್‌ಟೇನ್‌ಮೆಂಟ್ಸ್‌ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್‌ನೊಂದಿಗೆ ಕೈಜೋಡಿಸಿದ್ದಾರೆ. ಈ ಚಿತ್ರದಲ್ಲಿ ಸಾಯಿ ಕುಮಾರ್, ನಾಸರ್ ಮತ್ತು ಗೋಪರಾಜು ರಮಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಗೆ ನವೀನ್ ನೂಲಿ ಸಂಕಲನ ಮಾಡಿದ್ದು, ಯುವನ್ ಶಂಕರ್ ರಾಜಾ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾ ಇದೇ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here