ಇರ್ಷಾದ್‌ ಖಾನ್‌ ಚಿತ್ರಕಥೆ ಬರೆದು, ನಿರ್ದೇಶಿಸಿರುವ ‘ನಾನ್‌ ಸ್ಟಾಪ್‌ ಧಮಾಲ್‌’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಸಿನಿಮಾರಂಗದ ಒಳಹೊರಗುಗಳನ್ನು ವಿಡಂಬನೆಯ ಮೂಲಕ ನಿರೂಪಿಸುವ ಪ್ರಯತ್ನವಿದು. ಆಗಸ್ಟ್‌ 18ರಂದು ಸಿನಿಮಾ ತೆರೆಕಾಣಲಿದೆ.

ರಾಜ್‌ಪಾಲ್ ಯಾದವ್, ಅನ್ನು ಕಪೂರ್ ಮತ್ತು ಮನೋಜ್ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ನಾನ್ ಸ್ಟಾಪ್ ಧಮಾಲ್’ ಹಿಂದಿ ಕಾಮಿಡಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಚಲನಚಿತ್ರೋದ್ಯಮವನ್ನು ಹಿನ್ನೆಲೆಯಾಗಿಟ್ಟುಕೊಂಡು ಹೆಣೆದಿರುವ ಕಥಾವಸ್ತುಇದು. ಚಿತ್ರದಲ್ಲಿ ರಾಜು (ರಾಜ್‌ಪಾಲ್) ಜನಪ್ರಿಯ ನಟಿ ಶ್ರೇಯಾ ಕಪೂರ್ ಅವರ ದೊಡ್ಡ ಅಭಿಮಾನಿ. ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ಅವನ ಕನಸು. ತಾನು ಚಲನಚಿತ್ರ ನಿರ್ಮಾಪಕನಾದರೆ ನಟಿಯನ್ನು ಭೇಟಿಯಾಗಬಹುದು ಎಂದು ಯೋಜಿಸುತ್ತಾನೆ. ಚಿತ್ರ ನಿರ್ಮಾಣಕ್ಕೆ ಹಣ ಹೊಂದಿಸಲು ಹೆಣಗಾಡುತ್ತಿರುತ್ತಾನೆ.

ಅಮರ್(ಮನೋಜ್) ಒಬ್ಬ ಅವಕಾಶ ವಂಚಿತ ಚಲನಚಿತ್ರ ಬರಹಗಾರನಾಗಿದ್ದು, ಅವನು ತಮ್ಮ ಯೋಜನೆಗೆ ಬೆಂಬಲ ನೀಡುವ ಹೂಡಿಕೆದಾರರನ್ನು ಹುಡುಕುತ್ತಿರುತ್ತಾನೆ. ಸತೀಂದರ್ (ಅನ್ನು) ಜನಪ್ರಿಯ ತಾರೆಗಳೊಂದಿಗೆ ಕೆಲಸ ಮಾಡುವ ದೊಡ್ಡ ಕನಸುಗಳನ್ನು ಹೊತ್ತ ಚಲನಚಿತ್ರ ನಿರ್ದೇಶಕನಾಗಿ ಕಾಣಿಸಿಕೊಂಡಿದ್ದಾರೆ. ಈ ಮೂವರ ಹಾಸ್ಯ ಸಂಭಾಷಣೆಯನ್ನು ಸಿನಿಮಾದ ಟ್ರೈಲರ್‌ ಒಳಗೊಂಡಿದೆ. ಚಿತ್ರದಲ್ಲಿ ಜಾರ್ಜಿಯಾ ಆಂಡ್ರಿಯಾನಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೇಯಸ್ ತಲ್ಪಾಡೆ ಮತ್ತು ಶೀನಾ ಬಜಾಜ್‌ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇರ್ಷಾದ್‌ ಖಾನ್‌ ಚಿತ್ರಕಥೆ ಬರೆದು, ನಿರ್ದೇಶಿಸಿರುವ ಸಿನಿಮಾವನ್ನು ಟ್ರಿಯೋಮ್‌ ಫಿಲ್ಮ್ಸ್ ಬ್ಯಾನರ್‌ ನಿರ್ಮಿಸಿದೆ. ಆಗಸ್ಟ್‌ 18ರಂದು ಸಿನಿಮಾ ತೆರೆಕಾಣಲಿದೆ.

Previous article‘The Soul Of Sathya’ ಟೀಸರ್‌ | ಸಾಯಿ ಧರಮ್‌ ತೇಜ್‌ ನಟನೆಯ ತೆಲುಗು ಕಿರುಚಿತ್ರ
Next article‘ಗ್ಯಾಂಗ್ಸ್‌ ಆಫ್‌ ಗೋದಾವರಿ’ | ವಿಶ್ವಕ್‌ ಸೇನ್‌ ನೂತನ ತೆಲುಗು ಸಿನಿಮಾ

LEAVE A REPLY

Connect with

Please enter your comment!
Please enter your name here