ಪತ್ರಕರ್ತ, ನಿರೂಪಕ ಗೌರೀಶ್‌ ಅಕ್ಕಿ Bigg Boss ಮನೆಯಿಂದ ಹೊರಬಂದಿದ್ದಾರೆ. ಮನೆಯಲ್ಲಿ ತಮ್ಮ ಆತ್ಮೀಯರು ಯಾರು? ಯಾರು Strong, ಯಾರು weak, ಬಿಗ್‌ಬಾಸ್‌ ವಿಜೇತರಾಗುವ ಸಾಮರ್ಥ್ಯ ಯಾರಿಗಿದೆ ಎನ್ನುವ ಹಲವು ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ. ಅವರ ಸಂದರ್ಶನದ ವೀಡಿಯೋ ಇಲ್ಲಿದೆ.

‘ಎಲ್ಲವೂ ಇತ್ತು ಅಲ್ಲಿ… ಊಟ ಇತ್ತು, ನಿದ್ರೆ ಇತ್ತು, ಆಟ ಇತ್ತು, ಸ್ಪರ್ಧಿಗಳಿದ್ದರು, ಜನ ಇದ್ರು ಎಲ್ಲಾನೂ ಇತ್ತು. ಆದ್ರೆ ಅಲ್ಲಿ ಒಂದೇ ಒಂದು ಇರ್ಲಿಲ್ಲ. ಅದು ಸ್ವಾತಂತ್ರ್ಯ! ಕಂಡೀಷನ್ಡ್ ಸ್ವಾತಂತ್ರ್ಯ ಇದೆ ಅಲ್ಲಿ. ಅದ್ರ ಬ್ಯೂಟಿನೇ ಅದು’ ಎನ್ನುತ್ತಾರೆ ಪತ್ರಕರ್ತ ಗೌರೀಶ್‌ ಅಕ್ಕಿ. Bigg Boss ಎರಡನೇ ವಾರದಲ್ಲಿ ಅವರು ಎಲಿಮಿನೇಟ್‌ ಆಗಿ ಹೊರಬಂದಿದ್ದಾರೆ. JioCinemaಗೆ ಅವರು ನೀಡಿರುವ ಸಂದರ್ಶನ ಇಲ್ಲಿದೆ..

https://jiocinema.onelink.me/fRhd/512tjg18

ಬಿಗ್‌ಬಾಸ್‌ ಜರ್ನೀ ಬಗ್ಗೆ ಗೌರೀಶ್‌ ಅಕ್ಕಿ ಹೇಳುವುದು ಹೀಗೆ – ‘ಬಿಗ್‌ಬಾಸ್‌ ಜರ್ನಿ ಮುಗಿಸಿಕೊಂಡು ಹೊರಗಡೆ ಬಂದಿದೀನಿ. ಹಾಗೆ ನೋಡಿದ್ರೆ ಚಿಕ್ಕ ಪ್ರಯಾಣವಿದು. ಆದರೆ ಸಾಕಷ್ಟು ಅನುಭವಗಳಾಗಿವೆ. ಹದಿನೈದು ದಿನಗಳ ಪ್ರಯಾಣದಲ್ಲಿ ನಾನು ನೂರಕ್ಕೆ ನೂರು ಕೊಡದಿದ್ದರೂ 99 ಶೇ. ಕೊಟ್ಟಿದ್ದೇನೆ ಎಂದುಕೊಂಡಿದ್ದೇನೆ. ಬೇಸರಕ್ಕಿಂತ ಖುಷಿಯೇ ಜಾಸ್ತಿ ಇದೆ ಅಂದುಕೊಂಡರೂ ತಪ್ಪಿಲ್ಲ. ಯಾಕೆಂದರೆ ನಾನು ನಾಮಿನೇಟ್‌ ಆದಾಗ, ಎಲ್ಲ ಲೆಕ್ಕ ಹಾಕ್ತಿದ್ದೆ. ಆಗ ಎಲ್ಲೊ ಒಂದು ಕಡೆ ಅನಿಸಿತ್ತು, ನಾನು ಹೊರಗಡೆ ಬರ್ತೀನಿ ಅಂತ’

‘ಒಂದು ವಿಷಯ ಹೇಳ್ಬೇಕು. ನಾನು ವಯಸ್ಸಲ್ಲಿ ಉಳಿದವರಿಗಿಂತ ದೊಡ್ಡವನಾಗಿದ್ದರೂ, ಮೆಂಟಲಿ, ಮೆಚ್ಯೂರ್ಡ್‌ ಆಗಿದ್ದರೂ ಕೂಡ ‘ಯಂಗ್‌ ಅಟ್ ಹಾರ್ಟ್‌’ ಅಂತಾರಲ್ಲಾ… ಆ ಥರ ಇದ್ದೀನಿ. ಕೆಲವರು ವಯಸ್ಸಲ್ಲಿ ಚಿಕ್ಕವರಿದ್ದಾಗ ಜನರೇಷನ್ ಗ್ಯಾಪ್ ಆಗತ್ತೆ. ಹಾಗಾಗಿ ಅವರ ಜೊತೆ ಬೆರೆಯಲು ಸಾಧ್ಯವಾಗ್ತಿರ್ಲಿಲ್ಲ. ಫಸ್ಟ್ ಹೋದಾಗ ಬಿಗ್‌ಬಾಸ್‌ ಬಗ್ಗೆ ಒಂದು ಒಳ್ಳೆಯ ಇಂಪ್ರೆಷನ್ ಕ್ರಿಯೇಟ್ ಆಗಲು ಸಾಧ್ಯವಾಗಿರುವುದು ಸ್ನೇಹಿತ್‌ ಅವರಿಂದ. ಎಲ್ಲರೂ ನನ್ನ ವೆಲ್‌ಕಮ್ ಮಾಡಿದ್ರು. ಆದ್ರೆ ಸ್ನೇಹಿತ್ ನನ್ನನ್ನು ಕರೆದುಕೊಂಡು ಹೋಗಿ ಇಡೀ ಬಿಗ್‌ಬಾಸ್‌ ಮನೆ ತೋರಿಸಿದರು. ಉಳಿದಂತೆ ತುಂಬ ಜನ ಇದ್ದರು. ಆದರೆ ಸ್ನೇಹಿತ್ ಯಾವಾಗಲೂ ನನ್ನ ಸ್ನೇಹಿತರಾಗಿರುತ್ತಾರೆ ಎಂದು ನನಗನಿಸುತ್ತದೆ’

‘ನಾನು ನ್ಯೂಸ್‌ ಹಿನ್ನೆಲೆಯಿಂದ ಬಂದಿರುವುದು. ನಾನು ಲೆಕ್ಕ ಹಾಕಿ ನೋಡಿದೆ, ಏಳರಿಂದ ಎಂಟು ಜನ ಸೀರಿಯಲ್‌ನವರು. ಅವರೆಲ್ಲ ಬೇರೆ ಬೇರೆ ಚಾನಲ್‌ಗಳಲ್ಲಿ ಸೀರಿಯಲ್ ಮಾಡಿಕೊಂಡು ಬಂದಿರುವುದರಿಂದ, ಅವರ ಮಧ್ಯೆ ಮಾತಾಡೋಕೆ ಸಾಮಾನ್ಯ ಸಂಗತಿಗಳು ತುಂಬ ಇರುತ್ತಿದ್ದವು. ಆಗ ನನಗೆ ‘ಲೆಫ್ಟ್‌ ಔಟ್’ ಅನ್ನೋ ಫೀಲಿಂಗ್ ಬರುತ್ತಿತ್ತು. ನಂಗೆ ತುಕಾಲಿ ಸಂತೋಷ್ ತುಂಬ ಇಷ್ಟ. ಅವರು ಮಾಡಿದ ಎಲ್ಲಾ ಫನ್ನಿ ಮೊಮೆಂಟ್‌ಗಳೂ ತುಂಬ ಇಷ್ಟವಾಯ್ತು. ತುಂಬ ಜೆನ್ಯೂನ್ ಅನಿಸಿದ್ದು ವಿನಯ್. ತಪ್ಪಾಗಲಿ, ಸರಿಯಾಗಲಿ ಅವರು ಅದಕ್ಕೆ ನಾನೇ ಕಾರಣ ಎಂದು ರೆಸ್ಪಾನ್ಸಿಬಿಲಿಟಿ ತಗೋತಿದ್ರು. ಹಾಗಾಗಿ ಅವರು ಜೆನ್ಯೂನ್ ಅನಿಸ್ತಿದ್ರು. ಭಾಗ್ಯಶ್ರೀ ಇನೋಸೆಂಟ್ ಅನಿಸಿದ್ರು. ಉಳಿದಂತೆ ಎಲ್ರೂ ಜೆನ್ಯೂನ್‌ ಅನಿಸಿದ್ರು. ಯಾರೂ ಫೇಕ್ ಅಂತ ಇರ್ಲಿಲ್ಲ. ಆದರೆ ನೀತು ಸ್ವಲ್ಪ ಸೂಪರ್‌ಸ್ಪಿಷಿಯಲ್ ಅನಿಸಿದ್ರು. ಟಾಪ್‌ 5ನಲ್ಲಿ ನನ್ನ ಪ್ರಕಾರ, ವಿನಯ್, ಸ್ನೇಹಿತ್, ನಮ್ರತಾ, ಕಾರ್ತಿಕ್ ಮತ್ತು ತನಿಷಾ ಬರಬಹುದು’

‘ನನ್ನ ಪ್ರಕಾರ, ಸ್ನೇಹಿತ್ ಒಳ್ಳೆಯ ಸ್ಪರ್ಧಿ. ಅವರೇ ಈ ಸೀಸನ್‌ಲ್ಲಿ ಬಿಗ್‌ಬಾಸ್‌ ವಿನ್ನರ್ ಆಗಬಹುದು ಅನಿಸುತ್ತದೆ. ನೀತು ಸ್ವಲ್ಪ ವೀಕ್ ಸ್ಪರ್ಧಿ. ಅವರು ಹೊರಗಡೆ ಬರಬಹುದು ಅನಿಸುತ್ತದೆ. ಸ್ಕಿಟ್‌ ಮಾಡಿದ್ದು ಬಿಗ್‌ಬಾಸ್ ಮನೆಯಲ್ಲಿ ನನಗೆ ಬೆಸ್ಟ್ ಮೆಮೊರಿ. ಸಿರಿ ಮತ್ತು ಕಾರ್ತಿಕ್ ಆಕ್ಟ್ ಮಾಡ್ತಿದ್ರು. ಅದನ್ನು ನೋಡಿ ಅವರ ಎದುರು ಕೂತಿದ್ದ ತನಿಷಾ ಅಳೋದಕ್ಕೆ ಶುರುಮಾಡಿಬಿಟ್ಟರು. ಆಗ ನಾನೂ ಎಮೋಷನಲ್ ಆದೆ. ನನಗೆ ಏನೋಪ್ಪಾ ಇಷ್ಟೊಂದು ಇಂಪ್ಯಾಕ್ಟ್ ಇದೆಯಾ ಅನಿಸಿತು’

‘ನಟನೆಯನ್ನು ಒಂದು ಹಾಬಿಯಾಗಿ ತೆಗೆದುಕೊಂಡಿದ್ದೀನಿ. ಸೀರಿಯಲ್‌ಗಳಲ್ಲಿ ಆಕ್ಟ್ ಮಾಡುವುದರ ಬಗ್ಗೆ ಗಂಭೀರವಾಗಿ ಯೋಚಿಸಿಲ್ಲ. ಸಿನಿಮಾಗಳಲ್ಲಿ ನನ್ನ ಸ್ನೇಹಿತರು, ಪರಿಚಿತರು ಕರೆದಾಗ ಹೋಗಿ ಅಭಿನಯಿಸಿದ್ದೀನಿ. ಸೀರಿಯಲ್‌ಗಳಲ್ಲಿಯೂ ಒಳ್ಳೆಯ ರೋಲ್ ಸಿಕ್ಕರೆ ನಟಿಸುತ್ತೇನೆ. ಕುಟುಂಬದವರ ಬಗ್ಗೆ ಅಭಿಪ್ರಾಯ ಹೇಳಿ ಅಂದಾಗ ನಾನು ಎಮೋಷನಲ್ ಆಗಿಬಿಟ್ಟೆ. ಯಾಕೆಂದರೆ ನಾನುನನ್ನ ಫ್ಯಾಮಿಲಿಯನ್ನು ಮಿಸ್ ಮಾಡ್ಕೋತಿನಿ ಅಂತ ಗೊತ್ತಾಗಿದ್ದು ಈಗಲೇ. ಬಿಗ್‌ಬಾಸ್ ಮನೆಯೊಳಗೆ ಬಂದಾಗಲೇ! ಸ್ವಾತಂತ್ರ್ಯಕ್ಕಿಂತ ದೊಡ್ಡ, ಮಹತ್ವದ, ಮೌಲ್ಯಯುತವಾದ ಸಂಗತಿ ಬೇರೆ ಯಾವುದೂ ಇಲ್ಲ – ಇದು ನಾನು ಬಿಗ್‌ಬಾಸ್‌ನಿಂದ ಕಲಿತ ಪಾಠ. ಯಾಕೆಂದರೆ ನಾನು ಬಿಗ್‌ಬಾಸ್‌ನಲ್ಲಿ ಕಳೆದುಕೊಂಡಿದ್ದು ಅದನ್ನೇ’

LEAVE A REPLY

Connect with

Please enter your comment!
Please enter your name here