ಸ್ಯಾಂಡಲ್‌ವುಡ್‌ ಸಂಭಾಷಣೆಕಾರ ಯುವಧೀರ ‘ಗುಡ್‌ ಗುಡ್ಡರ್‌ ಗುಡ್ಡೆಸ್ಟ್‌’ ಚಿತ್ರದೊಂದಿಗೆ ನಿರ್ದೇಶಕರಾಗುತ್ತಿದ್ದಾರೆ. ಅವರೇ ಹೀರೋ ಆಗಿ ನಟಿಸುತ್ತಿದ್ದು, ಆದ್ಯಾ ಪ್ರಿಯಾ ಚಿತ್ರದ ನಾಯಕಿ.

ಕಳೆದ ಹದಿನೈದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಂಭಾಷಣೆಕಾರನಾಗಿ ಗುರುತಿಸಿಕೊಂಡಿರುವ ಯುವಧೀರ, ‘ಗುಡ್ ಗುಡ್ಡರ್ ಗುಡೆಸ್ಟ್’ ಸಿನಿಮಾ ಮೂಲಕ ನಿರ್ದೇಶನಕ್ಕಿಳಿದಿದ್ದಾರೆ. ಚಿತ್ರಕ್ಕೆ ಮುಹೂರ್ತ ನೆರವೇರಿದ್ದು, ZEE ಕನ್ನಡದ ಡಿಕೆಡಿ ಶೋ ವಿನ್ನರ್ ಚೈತ್ರಾಲಿ ಕ್ಲ್ಯಾಪ್ ಮಾಡಿದರೆ, ಭರತನಾಟ್ಯದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಅಂಧ ಕಲಾವಿದ ಬೂಸೆ ಗೌಡ ಕ್ಯಾಮೆರಾಗೆ ಚಾಲನೆ ನೀಡಿದರು. ನಿರ್ದೇಶಕ ಯುವಧೀರ ಮಾತನಾಡಿ, “ಕಳೆದ ಹದಿನೈದು ವರ್ಷಗಳಿಂದ ಸಿನಿಮಾಗಳಲ್ಲಿ ಸಂಭಾಷಣೆಕಾರನಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಮಿಂಚು, ಜಾನಿ ಜಾನಿ ಎಸ್ ಪಪ್ಪಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ಇದು ನನ್ನ ಮೊದಲ ನಿರ್ದೇಶನ ಸಿನಿಮಾ. ಒಂದೇ ಕಥೆ ಮೂರು ಟ್ರ್ಯಾಕ್‌ನಲ್ಲಿ ನಡೆಯುತ್ತದೆ. ಇದು ಯಾವ ಜಾನರ್ ಸಿನಿಮಾ ಅನ್ನೋದು ವರ್ಗೀಕೃತ ಮಾಡುವುದು ಕಷ್ಟ. ಹೀಗಾಗಿ ಇದು ಮಲ್ಟಿಪಲ್ ಜಾನರ್‌ ಸಿನಿಮಾ” ಎಂದರು.

ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ನಟ ಸುಚೇಂದ್ರ ಪ್ರಸಾದ್ ಮಾತನಾಡಿ, “ಇವರು ಇಟ್ಟಿರುವ ಶೀರ್ಷಿಕೆ ವ್ಯಾಕರಣ ಬದ್ಧವಲ್ಲ. ಹಾಗೇಯೇ ಸಿನಿಮಾ ಕೂಡ ಎಲ್ಲ ವ್ಯಾಕರಣವನ್ನು ಮುರಿಯಲಿದೆ. ಇದು ನಿಜ ಜೀವನದ ಕೆಲವು ಪ್ರಸಂಗ ತಳುಕು ಹಾಕಿ ಕತೆ ರೆಡಿ ಮಾಡಿದ್ದಾರೆ. ಒಳ್ಳೆ ಕಥಾಹಂದರವನ್ನು ತಯಾರಿಸಿದ್ದಾರೆ” ಎಂದು ನಿರ್ದೇಶಕರನ್ನು ಪ್ರಶಂಸಿದರು. ಯುವಧೀರ ನಿರ್ದೇಶನದ ಜೊತೆಗೆ ತಾವೇ ಈ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು, ಇವರಿಗೆ ಜೋಡಿಯಾಗಿ ಆದ್ಯಾ ಪ್ರಿಯಾ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಸೋನುಗೌಡ, ಪ್ರಮೋದ್ ಶೆಟ್ಟಿ, ಗೋಪಾಲ್ ಕೃಷ್ಣ ದೇಶಪಾಂಡೆ, ಸುಚೇಂದ್ರ ಪ್ರಸಾದ್, ವಿ.ಮನೋಹರ್ ತಾರಾಬಳಗದಲ್ಲಿದ್ದಾರೆ. ಸುರೇಶ್‌ ಬಿ. ನಿರ್ಮಾಣದ ಚಿತ್ರಕ್ಕೆ ಸಂದೀಪ್‌ ಹೊಲ್ಲೂರಿ ಛಾಯಾಗ್ರಹಣ, ಶಶಾಂಕ್‌ ಶೇಷಗಿರಿ ಸಂಗೀತ, ಕಿರಣ್‌ ಸಂಕಲನ ಇರಲಿದೆ.

Previous articleನಾಗರಾಜ್ ಸೋಮಯಾಜಿ ‘ಅಕಟಕಟ’ ಚಿತ್ರತಂಡಕ್ಕೆ ಶ್ವೇತಾ ಶ್ರೀನಿವಾಸ್ ಸೇರ್ಪಡೆ
Next article‘ದ ರೀಡರ್’ ಮತ್ತು ನೀರೋನ ಅತಿಥಿಗಳು

LEAVE A REPLY

Connect with

Please enter your comment!
Please enter your name here