‘ಸೂತ್ರಧಾರಿ’ ಸಿನಿಮಾದ ‘ಟ್ರೆಂಡಿಂಗಲ್‌ ಬರ್ಬೇಕಂದ್ರೆ’ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ವಿಜಯ್‌ ಈಶ್ವರ್‌ ರಚಿಸಿರುವ ಈ ಹಾಡಿಗೆ ಚಂದನ್‌ ಶೆಟ್ಟಿ ಸಂಗೀತ ಸಂಯೋಜಿಸಿ ಹಾಡಿದ್ದಾರೆ. ಮೋಹನ್‌ ಮಾಸ್ಟರ್‌ ನೃತ್ಯ ಸಂಯೋಜನೆಗೆ ಚಂದನ್‌ ಶೆಟ್ಟಿ ಮತ್ತು ಅಪೂರ್ವ ಶೆಟ್ಟಿ ಹೆಜ್ಜೆ ಹಾಕಿದ್ದಾರೆ.

ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ‘ಸೂತ್ರಧಾರಿ’ ಚಿತ್ರಕ್ಕಾಗಿ ವಿಜಯ್ ಈಶ್ವರ್ ಬರೆದಿರುವ ‘ಟ್ರೆಂಡಿಂಗಲ್ ಬರ್ಬೇಕಂದ್ರೆ ಏನ್ ಮಾಡ್ಬೇಕು’ ಎಂಬ ಹಾಡು ಇತ್ತೀಚೆಗೆ A2 music ಮೂಲಕ ಬಿಡುಗಡೆಯಾಗಿದೆ‌. ಚಂದನ್ ಶೆಟ್ಟಿ ಈ ಹಾಡಿಗೆ ಸಂಗೀತ ನೀಡಿ, ಹಾಡಿದ್ದಾರೆ. ಮೋಹನ್ ಮಾಸ್ಟರ್ ನೃತ್ಯ ನಿರ್ದೇಶಿಸಿದ್ದು, ಚಂದನ್ ಶೆಟ್ಟಿ ಹಾಗೂ ಅಪೂರ್ವ ಹೆಜ್ಜೆ ಹಾಕಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ‘ಡ್ಯಾಶ್’ ಹಾಡು ಈಗಾಗಲೇ ಹದಿನೇಳು ಮಿಲಿಯನ್ ವೀಕ್ಷಣೆಯಾಗಿ ಜನರ ಮನ ಗೆದ್ದಿದೆ. ”ಸಿನಿಮಾದ ‘ಡ್ಯಾಶ್’ ಹಾಡು ಹಿಟ್ ಆಗಿರುವ ಹಿನ್ನೆಲೆಯಲ್ಲಿ ಅದನ್ನು ಮೀರಿಸುವ ಮತ್ತೊಂದು ಹಾಡು ಕೊಡುವ ಜವಾಬ್ದಾರಿ ನನಗಿತ್ತು. ಈಗ ವಿಜಯ್ ಈಶ್ವರ್ ಬರೆದಿರುವ ಹಾಡನ್ನು ಬಿಡುಗಡೆ ಮಾಡಿದ್ದೇವೆ ಇದು ಕೂಡ ಎಲ್ಲರ ಮನ ಗೆಲ್ಲುತ್ತದೆ” ಎನ್ನುತ್ತಾರೆ ಚಂದನ್‌ ಶೆಟ್ಟಿ.

ಚಿತ್ರದ ನಿರ್ಮಾಪಕ ನವರಸನ್‌ ಮಾತನಾಡಿ, ”ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ನಮ್ಮ ಚಿತ್ರದ ಡ್ಯಾಶ್ ಸಾಂಗ್ ಭರ್ಜರಿ ಯಶಸ್ಸು ಕಂಡಿದೆ. ಇಂತಹ ಜನಪ್ರಿಯ ಹಾಡು ಬರೆದುಕೊಟ್ಟ ವಿಜಯ್ ಈಶ್ವರ್ ಅವರಿಗೆ, ಸಂಗೀತ ನೀಡಿ ಹಾಡಿ, ಅಭಿನಯಿಸಿರುವ ಚಂದನ್ ಶೆಟ್ಟಿ ಸೇರಿದಂತೆ ಇಡೀ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ. ಇನ್ನೊಂದು ಹಾಡು ಮುಗಿದರೆ, ಚಿತ್ರೀಕರಣ ಮುಕ್ತಾಯವಾಗುತ್ತದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುತ್ತೇವೆ’ ಎನ್ನುತ್ತಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೇದಿತಾ ಚಂದನ್ ಶೆಟ್ಟಿ, ನಿರ್ಮಾಪಕರಾದ ಸಂಜಯ್ ಗೌಡ, ಚೇತನ್ ಗೌಡ, ರಾಜೇಶ್, ಗೋವಿಂದರಾಜು ಹಾಗೂ ನಿರ್ದೇಶಕ ಮಹೇಶ್ ಕುಮಾರ್ ಚಿತ್ರ ಯಶಸ್ಸಿಗೆ ಶುಭ ಹಾರೈಸಿದರು.

Previous article‘ಚಂದ್ರಮುಖಿ 2’ ಆಡಿಯೋ ಬಿಡುಗಡೆ | ರಾಘವ ಲಾರೆನ್ಸ್‌ – ಕಂಗನಾ ಸಿನಿಮಾ ಸೆಪ್ಟೆಂಬರ್‌ 19ಕ್ಕೆ
Next article‘ಖುಷಿ’ ಚಿತ್ರದ ಐದನೇ ಹಾಡು ಬಿಡುಗಡೆ | ವಿಜಯ್ ದೇವರಕೊಂಡ – ಸಮಂತಾ ಸಿನಿಮಾ

LEAVE A REPLY

Connect with

Please enter your comment!
Please enter your name here