ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ‘ಗೌರಿ’ ಸಿನಿಮಾದ ‘ಧೂಲ್‌ ಎಬ್ಬಿಸಾವ…’ ಹಾಡನ್ನು ಹುಬ್ಬಳ್ಳಿಯಲ್ಲಿ ರಿಲೀಸ್‌ ಮಾಡಲಾಗಿದೆ. ಶಿವು ಬೆರ್ಗಿ ಅವರು ರಚಿಸಿ, ಸಂಗೀತ ಸಂಯೋಜಿಸಿರುವ ಹಾಡು ಇದು. ಅನಿರುದ್ಧ ಶಾಸ್ತ್ರಿ ಮತ್ತು ಅನನ್ಯ ಭಟ್‌ ಹಾಡಿರುವ ಹಾಡಿಗೆ ಭಜರಂಗಿ ಮೋಹನ್‌ ನೃತ್ಯ ಸಂಯೋಜನೆಯಿದೆ.

ಸಮರ್ಜಿತ್‌ ಲಂಕೇಶ್‌ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿರುವ ‘ಗೌರಿ’ ಸಿನಿಮಾದ ‘ಧೂಳ್‌ ಎಬ್ಬಿಸಾವ…’ ಹಾಡನ್ನು ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಹುಬ್ಬಳ್ಳಿ ಜವಾರಿ ಭಾಷೆಯಲ್ಲಿರುವ ಹಾಡಿಗೆ ಸಮರ್ಜಿತ್‌ ಮತ್ತು ಸಂಜನಾ ಆನಂದ್‌ ಹೆಜ್ಜೆ ಹಾಕಿದ್ದಾರೆ. ವಿದೇಶಿ ನೃತ್ಯಗಾರ್ತಿಯರು ಇವರೊಂದಿಗೆ ಕುಣಿದಿದ್ದಾರೆ. ಶಿವು ಬೆರ್ಗಿ ಅವರು ರಚಿಸಿ, ಸಂಗೀತ ಸಂಯೋಜಿಸಿರುವ ಹಾಡು ಇದು. ಅನಿರುದ್ಧ ಶಾಸ್ತ್ರಿ ಮತ್ತು ಅನನ್ಯ ಭಟ್‌ ಹಾಡಿರುವ ಹಾಡಿಗೆ ಭಜರಂಗಿ ಮೋಹನ್‌ ನೃತ್ಯ ಸಂಯೋಜನೆಯಿದೆ. ನೈಜ ಘಟನೆ ಆಧರಿಸಿದ ಚಿತ್ರ ತೆರೆಗೆ ಸಿದ್ಧವಾಗಿದ್ದು, ನಿರ್ದೇಶಕ ಇಂದ್ರಜಿತ್‌ ವಿಶಿಷ್ಟ ರೀತಿಯಲ್ಲಿ ಪ್ರೊಮೋಷನ್‌ ನಡೆಸುತ್ತಿದ್ದಾರೆ.

ಬೆಂಗಳೂರು, ಚಿಕ್ಕಮಗಳೂರು ಸೇರಿ ರಾಜ್ಯದ ವಿವಿಧೆಡೆ ಚಿತ್ರೀಕರಣ ಮಾಡಲಾಗಿದೆ. ಅಕಾಲಿಕವಾಗಿ ಅಗಲಿದ ಅಕ್ಕ ಗೌರಿ ಅವರ ಮೇಲಿನ ಅಭಿಮಾನದಿಂದ ಇಂದ್ರಜಿತ್ ಲಂಕೇಶ್ ಅವರು ಈ ಚಿತ್ರಕ್ಕೆ ಅಕ್ಕನ ಹೆಸರಿಟ್ಟಿದ್ದಾರೆ. ‘ಪುಟ್ಟಗೌರಿ’ ಸೀರಿಯಲ್‌ ಖ್ಯಾತಿಯ ಸಾನ್ಯಾ ಅಯ್ಯರ್ ಈ ಚಿತ್ರದ ಮೂಲಕ ನಾಯಕನಟಿಯಾಗಿ ಸ್ಯಾಂಡಲ್‌ವುಡ್‌ ಪ್ರವೇಶ ಮಾಡುತ್ತಿದ್ದಾರೆ. ಪ್ರಿಯಾಂಕ ಉಪೇಂದ್ರ, ವಸುಂಧರಾ ದಾಸ್, ಲೂಸ್ ಮಾದ ಯೋಗಿ, ಅಕುಲ್ ಬಾಲಾಜಿ, ಸಿಹಿ ಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ಕಾಂತಾರ ಖ್ಯಾತಿಯ ಮಾಲತಿ ಸುಧೀರ್, ಕೆಜಿಎಫ್ ಖ್ಯಾತಿಯ ಸಂಪತ್ ಮೈತ್ರೇಯ, ಚಂದುಗೌಡ ಚಿತ್ರದಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here