ವೆಂಕಟ್‌ ಪ್ರಭು ನಿರ್ದೇಶನದ ‘GOAT’ (Greatest Of All Times) ತಮಿಳು ಸಿನಿಮಾದ ಸ್ಪೆಷಲ್‌ ಟೀಸರ್‌ ರಿಲೀಸ್‌ ಆಗಿದೆ. ಚಿತ್ರದ ಹೀರೋ ವಿಜಯ್‌ ಇಂದು 50ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಹೀರೋ ಬರ್ತ್‌ಡೇಗೆಂದು ಚಿತ್ರತಂಡ ಈ ಟೀಸರ್‌ ಬಿಡುಗಡೆ ಮಾಡಿದೆ.

ಕಾಲಿವುಡ್‌ನ ಜನಪ್ರಿಯ ನಟ ವಿಜಯ್‌ ಇಂದು 50ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಜನ್ಮದಿನಕ್ಕೆಂದು ‘GOAT’ ತಮಿಳು ಚಿತ್ರತಂಡ ವಿಶೇಷ ಟೀಸರ್‌ ರಿಲೀಸ್‌ ಮಾಡಿದೆ. ಕಾಲಿವುಡ್‌ನ ಬಹುನಿರೀಕ್ಷಿತ Sci-fi ಆಕ್ಷನ್‌ ಸಿನಿಮಾದಲ್ಲಿ ವಿಜಯ್‌ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ. ಟೀಸರ್‌ನಲ್ಲಿ ಆಕ್ಷನ್‌ ಸನ್ನಿವೇಶಗಳಿವೆ. ವಿದೇಶದಲ್ಲಿ ಚಿತ್ರೀಕರಣ ನಡೆದಿದ್ದು, ಹಿನ್ನೆಲೆ ಸಂಗೀತ ಸನ್ನಿವೇಶದ ಥ್ರಿಲ್‌ ಹೆಚ್ಚಿಸಿದೆ. ‘It’s time to see the unseen’ ಎನ್ನುವ ಕ್ಯಾಪ್ಶನ್‌ನೊಂದಿಗೆ ಆರಂಭವಾಗುವ ಟೀಸರ್‌ ‘Happy Birthday The GOAT’ ಎನ್ನುವ ಒಕ್ಕಣಿಯೊಂದಿಗೆ ಮುಕ್ತಾಯವಾಗುತ್ತದೆ. ಪ್ರಶಾಂತ್‌, ಪ್ರಭುದೇವ, ಅಜ್ಮಲ್‌ ಅಮೀರ್‌, ವೈಭವ್‌, ಮೀನಾಕ್ಷಿ ಚೌಧರಿ, ಸ್ನೇಹಾ, ಮೋಹನ್‌, ಲೈಲಾ, ಜಯರಾಂ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್‌ 5ರಂದು ಸಿನಿಮಾ ತೆರೆಗೆ ಬರಲಿದೆ.

LEAVE A REPLY

Connect with

Please enter your comment!
Please enter your name here