ವಿಜಯ್‌ ಸೇತುಪತಿ, ಸಮಂತಾ ರುತ್‌ ಪ್ರಭು ಮತ್ತು ನಯನತಾರಾ ಅಭಿನಯದ ‘ಕಾಥು ವಾಕುಲ ರೆಂಡು ಕಾದಲ್‌’ ತಮಿಳು ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ವಿಘ್ನೇಶ್‌ ಶಿವನ್‌ ನಿರ್ದೇಶನದ ಸಿನಿಮಾ ಏಪ್ರಿಲ್‌ 28ರಂದು ತೆರೆಕಾಣಲಿದೆ.

ಖತೀಜಾ (ಸಮಂತಾ ರುತ್‌ ಪ್ರಭು) ಮತ್ತು ಕಣ್ಮಣಿ (ನಯನತಾರಾ) ಇಬ್ಬರು ಸುಂದರ ಯುವತಿಯರೆದುರು ಕಣ್ಗಳಲ್ಲಿ ನೀರು ತುಂಬಿಕೊಂಡು ನಿಂತಿದ್ದಾನೆ ಹೀರೋ ರ್ಯಾಂಬೋ (ವಿಜಯ್‌ ಸೇತುಪತಿ). ಇಬ್ಬರೂ ಆತನ ಪ್ರೇಯಸಿಯರು! ಅವರಿಬ್ಬರೂ ತನಗೇಕೆ ಸ್ಪೆಷಲ್‌, ಅವರಿಲ್ಲದೆ ತನಗೆ ಬದುಕಲು ಸಾಧ್ಯವೇ ಇಲ್ಲ ಎಂದು ಕನ್ಫ್ಯೂಸ್‌ ಆಗಿ ಅವರಿಗೆ ಕನ್ವಿನ್ಸ್‌ ಮಾಡುತ್ತಿದ್ದಾನೆ ಅವನು. ವಿಘ್ನೇಶ್‌ ಶಿವನ್‌ ನಿರ್ದೇಶನದ ‘ಕಾಥು ವಾಕುಲ ರೆಂಡು ಕಾದಲ್‌’ ರೊಮ್ಯಾಂಟಿಕ್‌ – ಕಾಮಿಡಿ ತಮಿಳು ಸಿನಿಮಾದ ಟೀಸರ್‌ ಹೀಗೆ ಶುರುವಾಗುತ್ತದೆ. ವಿಜಯ್‌ ಸೇತುಪತಿ ಮತ್ತು ನಯನತಾರಾ ಅವರಿಗೆ ಈ ಹಿಂದೆ ವಿಘ್ನೇಶ್‌ ಶಿವನ್‌ ‘ನಾನುಂ ರೌಡಿ ಧಾನ್‌’ (2015) ನಿರ್ದೇಶಿಸಿದ್ದರು. ಈ ಸಿನಿಮಾ ಕಾಲಿವುಡ್‌ನಲ್ಲಿ ಆ ವರ್ಷದ ಬ್ಲಾಕ್‌ ಬಸ್ಟರ್‌ ಚಿತ್ರಗಳಲ್ಲೊಂದು ಎನಿಸಿಕೊಂಡಿತ್ತು. ‘ಕಾಥು ವಾಕುಲ ರೆಂಡು ಕಾದಲ್‌’ ಚಿತ್ರದಲ್ಲಿ ಎರಡನೇ ಬಾರಿ ಅವರಿಗೆ ಜೊತೆಯಾಗಿದ್ದಾರೆ ವಿಘ್ನೇಶ್‌. 7 ಸ್ಕ್ರೀನ್‌ ಸ್ಟುಡಿಯೋ ಮತ್ತು ವಿಘ್ನೇಶ್‌ – ನಯನತಾರಾ ದಂಪತಿ ನಿರ್ಮಾಣದ ಈ ಸಿನಿಮಾ ಏಪ್ರಿಲ್‌ 28ರಂದು ತೆರೆಗೆ ಬರಲಿದೆ.

Previous articleಮಾಫಿಯಾ ಕಂಟೆಟ್‌ನ ‘ಮೇಲೊಬ್ಬ ಮಾಯಾವಿ’; ತೆರೆಗೆ ಸಿದ್ಧವಾದ ಸಂಚಾರಿ ವಿಜಯ್‌ ಸಿನಿಮಾ
Next article‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’; ಸಿನಿಮಾ ಪ್ರೊಮೋಷನ್‌ಗೆ ವಿನೂತನ ಆಲೋಚನೆ

LEAVE A REPLY

Connect with

Please enter your comment!
Please enter your name here