ಕಿಡಿಗೇಡಿಗಳು ತಮ್ಮ ಇಮೇಲ್ ಹ್ಯಾಕ್ ಮಾಡಿ ಪರಿಚಯಸ್ಥರಿಗೆ ಹಣದ ಬೇಡಿಕೆ ಇಡುತ್ತಿರುವುದಾಗಿ ನಟ ಹಾಗೂ ಪರಿಸರವಾದಿ ಸುರೇಶ್‌ ಹೆಬ್ಳೀಕರ್‌ ದೂರಿದ್ದಾರೆ. ಜೊತೆಗೆ ಈ ರೀತಿಯ ಇಮೇಲ್ ತನ್ನ ಹೆಸರಿನಲ್ಲಿ ಯಾರಿಗಾದರೂ ಬಂದಿದ್ದರೆ ದಯವಿಟ್ಟು ಯಾರೂ ಸಹ ಹಣ ಕಳುಹಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಮಣಿಪುರ ಸಂಘರ್ಷವನ್ನು ಮುಂದಿಟ್ಟುಕೊಂಡು ಯಾರೋ ಕಿಡಿಗೇಡಿಗಳು ತಮ್ಮ ಇಮೇಲ್ ಹ್ಯಾಕ್ ಮಾಡಿ ಪರಿಚಯಸ್ಥರಿಗೆ ಹಣದ ಬೇಡಿಕೆ ಇಡುತ್ತಿರುವುದಾಗಿ ನಟ ಹಾಗೂ ಪರಿಸರವಾದಿ ಸುರೇಶ್‌ ಹೆಬ್ಳೀಕರ್‌ ದೂರಿದ್ದಾರೆ. ಜೊತೆಗೆ ಈ ರೀತಿಯ ಇಮೇಲ್ ತನ್ನ ಹೆಸರಿನಲ್ಲಿ ಯಾರಿಗಾದರೂ ಬಂದಿದ್ದರೆ ದಯವಿಟ್ಟು ಯಾರೂ ಸಹ ಹಣ ಕಳುಹಿಸಬೇಡಿ ಎಂದು ಮನವಿ ಮಾಡಿದ್ದಾರೆ. ‘ಇಕೋ ವಾಚ್’ ಎಂಬ ಸಂಸ್ಥೆಯನ್ನು ಸುರೇಶ್‌ ಹೆಬ್ಳೀಕರ್‌ ನಡೆಸುತ್ತಿದ್ದು, ವಿದೇಶದಲ್ಲಿರುವ ತಮ್ಮ ಅನೇಕ ಸ್ನೇಹಿತರಿಗೆ ಇಮೇಲ್ ರವಾನಿಸಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ‘ನನ್ನ ಸ್ನೇಹಿತರೊಬ್ಬರು ಮೆಸೇಜ್ ಮಾಡಿ ನೀನು ಹಣ ಬೇಕೆಂದು ಇಮೇಲ್ ಮಾಡಿದ್ದೀಯಾ ಅಂತ ಕೇಳಿದ್ರು. ನಾನು ಇಲ್ಲ ಅಂತ ಹೇಳಿದೆ. ಒಂದು ಇಮೇಲ್‌ನಲ್ಲಿ ನಿನ್ನ ಜೊತೆ ಏನೋ ಮಾತನಾಡಬೇಕು ಅಂತಿತ್ತು. ಇನ್ನೊಂದು ಇಮೇಲ್‌ನಲ್ಲಿ ಮಣಿಪುರದ ಸಂಘರ್ಷ ವಿಚಾರವಾಗಿ ಸರ್ಕಾರ ಯಾವುದೇ ರೀತಿಯಾಗಿ ಸ್ಪಂದಿಸುತ್ತಿಲ್ಲ. ಹಾಗಾಗಿ ಅಲ್ಲಿನ ಜನರಿಗೆ ಪರಿಹಾರವನ್ನು ನೀಡಬೇಕೆಂದಿರುವೆ ಅದಕ್ಕೆ ನಿಮ್ಮಿಂದ ಸಾಧ್ಯವಾದಷ್ಟು ಹಣ ಕೊಡಿ ಎಂದೆಲ್ಲಾ ಹ್ಯಾಕರ್ಸ್‌ ಕಥೆ ಕಟ್ಟಿ ನನ್ನ ಹೆಸರಿನಲ್ಲಿ ಸಂದೇಶ ರವಾನಿಸಿದ್ದರು. ಈ ರೀತಿಯಾಗಿ ನನ್ನ ಸ್ನೇಹಿತರಿಗೆ ಸಂಬಂಧಿಕರಿಗೆ ನನ್ನ ಹೆಸರಿನಲ್ಲಿ ಇಮೇಲ್ ರವಾನೆಯಾಗಿದೆ’ ಎಂದು ತಿಳಿಸಿದ್ದಾರೆ.

‘ನನ್ನ ಹೆಸರಿನಿಂದ ಅಥವಾ ‘ಇಕೋ ವಾಚ್’ ಹೆಸರಿನಿಂದ ಇಮೇಲ್ ಬಂದಲ್ಲಿ ಅದಕ್ಕೆ ದಯವಿಟ್ಟು ಪ್ರತಿಕ್ರಿಯೆ ನೀಡಬೇಡಿ. ಅದು ಫೇಕ್. ನಾನು ಯಾರಲ್ಲೂ ಅನುದಾನ ಕೇಳಿಲ್ಲ ಆ ರೀತಿಯ ಕೆಲಸನೂ ಮಾಡಲ್ಲ. ಮಣಿಪುರಕ್ಕೆ ಹೋಗಿ ಹಣ ಕೊಡೋದು ಅದೆಲ್ಲಾ ನನ್ನ ಕೈಯಿಂದ ಮಾಡುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಈ ರೀತಿಯ ಇಮೇಲ್ ಏನಾದರೂ ನಿಮಗೆ ಬಂದಲ್ಲಿ ಅದಕ್ಕೆ ರೆಸ್ಪಾಂಡ್ ಮಾಡಬೇಡಿ ನಾನು ಈ ಬಗ್ಗೆ ದೂರು ದಾಖಲಿಸುತ್ತೇನೆ ಯಾರೂ ಹಣ ಹಾಕಲು ಹೋಗಬೇಡಿ’ ಎಂದು ಮನವಿ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here