ಕುತೂಹಲಕಾರಿಯಾದ ಚಿತ್ರಕಥೆ, ಪ್ರೇಕ್ಷಕರನ್ನು ನಗಿಸುವ ಮತ್ತು ಭಾವನಾತ್ಮಕವಾಗಿಸುವ ಸಂಭಾಷಣೆ ಮತ್ತು ಪರಿಣಾಮಕಾರಿಯಾಗಿ ದೃಶ್ಯಗಳನ್ನು ಕಟ್ಟಿರುವುದು ಚಿತ್ರದ ಸಾಮರ್ಥ್ಯ. ಸಿನಿಮಾದ ಎಲ್ಲಾ ವಿಭಾಗಗಳಲ್ಲೂ ಪ್ರತಿಯೊಬ್ಬರೂ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ. ‘ಮತ್ತೆ ಮದುವೆ’ ಸಿನಿಮಾ ನಮ್ಮನ್ನು ಚಿಂತನೆಗೆ ಒಳಪಡಿಸುತ್ತದೆ.

ಅಯ್ಯೋ,  ನನ್ನ ಕತೆ ಕೇಳಿದ್ರೆ ನೀನು ಖಂಡಿತ ಸಿನಿಮಾ ಮಾಡಬಹುದು! – ಈ ಮೇಲಿನ ಮಾತುಗಳನ್ನು ಅನೇಕ ಸಂದರ್ಭಗಳಲ್ಲಿ ನಾನೂ ಹಾಗೂ ನನ್ನ ಹಾಗೆ ಅನೇಕರು ಕೇಳಿರುತ್ತೇವೆ. ಆದರೆ ಸಿನಿಮಾ ಮಾಡುವ ಧೈರ್ಯ ಮಾಡಿರಲ್ಲ! ನಾನು ಈಗಾಗಲೇ ಕೇಳಿರುವುದನ್ನ, ನೋಡಿರುವುದನ್ನ ಯಾರು ಸಿನಿಮಾ ಮಾಡ್ತಾರೆ?

ಆದರೆ, ನಾವು ನೀವು ಇತ್ತೀಚಿಗೆ ಮಾಧ್ಯಮಗಳಲ್ಲಿ ಕೇಳಿದ್ದ, ನೋಡಿದ್ದ ಮೂರು ಜನ ಸೆಲೆಬ್ರಿಟಿಗಳ ಮತ್ತು ಮತ್ತೊಬ್ಬರ ನಡುವೆ ನಡೆದ ಘಟನೆಯನ್ನು ಆಧಾರವಾಗಿಟ್ಟುಕೊಂಡು ಮಾಡಿರುವ ಸಿನಿಮಾ ‘ಮತ್ತೆ ಮದುವೆ’ ಅತ್ಯಂತ ಹೆಚ್ಚು ವೈರಲ್ ಆದ ದೃಶ್ಯಗಳನ್ನು ಸಿನಿಮಾ ಮಾಧ್ಯಮಕ್ಕೆ ಸಮರ್ಪಕವಾಗಿ ಅಳವಡಿಸುವುದು
ನಿರ್ದೇಶಕನಿಗೆ ನಿಜಕ್ಕೂ ಸವಾಲು ಮತ್ತು ಆ ಸವಾಲನ್ನು ಇಲ್ಲಿ ಅಷ್ಟೇ ಸಮರ್ಥವಾಗಿ ನಿಭಾಯಿಸಿದ್ದಾರೆ ನಿರ್ದೇಶಕ ಎಂ ಎಸ್‌ ರಾಜು.

ಕೇಳಿದ್ದು ಸುಳ್ಳಾಗಬಹುದು
ನೋಡಿದ್ದು ಸುಳ್ಳಾಗಬಹುದು
ನಿಧಾನಿಸಿ ಯೋಚಿಸಿದಾಗ
ನಿಜವು ತಿಳಿವುದು
ನಿಧಾನಿಸಿ ಯೋಚಿಸಿದಾಗ
ನಿಜವು ತಿಳಿವುದು

ಮೇಲಿನ ಸಾಲುಗಳು 1980ರಲ್ಲಿ ಬಿಡುಗಡೆಯಾದ  ‘ರಾಮ ಲಕ್ಮಣ’ ಸಿನಿಮಾದ ಹಾಡಿನ ಪಲ್ಲವಿ, ಆಗ ನನಗೆ  11 ವರ್ಷ, ಚಿಕ್ಕನಾಯಕನಹಳ್ಳಿ ಮಹಾಲಕ್ಷ್ಮೀ ಟೆಂಟ್‌ನಲ್ಲಿ ನೋಡಿದ್ದೆ. ಅಂದಿನಿಂದ ಇಂದಿನವರೆಗೂ,  ಸುಮಾರು 43 ವರ್ಷಗಳ ಕಾಲ ನಾನು ಮೆಲುಕು ಹಾಕುತ್ತಿರುವ ಮತ್ತು ನನ್ನ ಮೇಲೆ ಪ್ರಭಾವ ಬೀರಿದ ಹಾಡು ಇದು. ಈ ಹಾಡಿನ ಆಶಯ ನಾವು, ನೀವು ಕೇಳಿದ್ದಕ್ಕೆ ಮತ್ತು ನೋಡಿದ್ದಕ್ಕೆ ಮತ್ತೊಂದು ಆಯಾಮ ಇದೆ ಎನ್ನುವುದೇ ಹಾಗಿದೆ. ಮತ್ತೆ ಮದುವೆ ಸಿನಿಮಾದ ಮೂಲಕ ಇಂಥದ್ದೊಂದು ಆಶಯವನ್ನು ಮತ್ತೆ ನಾವುಗಳು ಮೆಲುಕು ಹಾಕುವಂತೆ ಮಾಡಿದೆ. ಕುತೂಹಲಕಾರಿಯಾದ ಚಿತ್ರಕಥೆ, ಪ್ರೇಕ್ಷಕರನ್ನು ನಗಿಸುವ ಮತ್ತು ಭಾವನಾತ್ಮಕವಾಗಿಸುವ ಸಂಭಾಷಣೆ ಮತ್ತು ಪರಿಣಾಮಕಾರಿಯಾಗಿ ದೃಶ್ಯಗಳನ್ನು ಕಟ್ಟಿರುವುದು ಈ ಚಿತ್ರಕ್ಕೆ ಆತ್ಮವಾದರೆ, ಪವಿತ್ರ ಲೋಕೇಶ್‌ರವರ ಉತ್ತಮ ಅಭಿನಯ ಹೃದಯ ಇದ್ದ ಹಾಗೆ ಎಂಬ ಭಾವನೆ ನನ್ನದು. ಸಿನಿಮಾದ ಎಲ್ಲಾ ವಿಭಾಗಗಳಲ್ಲೂ ಪ್ರತಿಯೊಬ್ಬರೂ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ. ಮತ್ತೆ ಮದುವೆ ಸಿನಿಮಾ ನಮ್ಮನ್ನು ಚಿಂತನೆಗೆ ಒಳಪಡಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಮತ್ತು ಎಲ್ಲರೂ ನೋಡಬೇಕಾದ ಸಿನಿಮಾ.

Previous articleಪ್ರವಾಹವನ್ನು ಎದುರಿಸಿದ ಕೇರಳದ ಜನಸಾಮಾನ್ಯರ ಕತೆ – 2018
Next articleನೈಜ ಕ್ರೈಂ ಘಟನೆಗಳನ್ನು ಆಧರಿಸಿದ ‘ಹತ್ಯ’ | ಚಿತ್ರನಿರ್ಮಾಣ ನಿರ್ವಾಹಕ ಗಂಗು ನಿರ್ದೇಶನ

LEAVE A REPLY

Connect with

Please enter your comment!
Please enter your name here