ಅವಿನಾಶ್‌ ನಿರ್ದೇಶನದ ‘ಹಗ್ಗ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಅನು ಪ್ರಭಾಕರ್‌, ಹರ್ಷಿಕಾ ಪೂಣಚ್ಚ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಹಾರರ್‌ ಚಿತ್ರವಿದು. ಇದೇ ಆಗಸ್ಟ್‌ನಲ್ಲಿ ಸಿನಿಮಾ ತೆರೆಕಾಣಲಿದೆ.

‘ಹಗ್ಗ ಶೀರ್ಷಿಕೆಯೇ ನಿಮಗೆ ವಿಶೇಷವೆನಿಸಬಹುದು. ಹಾಗೆ ನೋಡಿದರೆ ಈ ಹಗ್ಗವೇ ನಮ್ಮ ಚಿತ್ರದ ನಾಯಕ! ಹಾರಾರ್ ಜಾನರ್ ಚಿತ್ರದಲ್ಲಿ ಒಂದೊಳ್ಳೆ ಸಂದೇಶವಿದೆ’ ಎನ್ನುತ್ತಾರೆ ‘ಹಗ್ಗ’ ಚಿತ್ರದ ನಿರ್ದೇಶಕ ಅವಿನಾಶ್‌. ಮೂಲತಃ ಇಂಜಿನಿಯರ್‌ ಆದ ಅವರಿಗೆ ಸಿನಿಮಾ ಬಗ್ಗೆ ವಿಪರೀತ ಪ್ಯಾಷನ್‌. ‘ಹಗ್ಗ’ ಚಿತ್ರದ ನಿರ್ದೇಶನದ ಮೂಲಕ ಅವರ ಕನಸು ಸಾಕಾರಗೊಂಡಿದೆ. ರಾಜ್ ಭಾರದ್ವಾಜ್ ನಿರ್ಮಾಣದ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅನು ಪ್ರಭಾಕರ್, ಹರ್ಷಿಕಾ ಪೂಣಚ್ಛ, ವೇಣು ನಟಿಸಿದ್ದಾರೆ. ನಿರ್ದೇಶಕ – ನಿರ್ಮಾಪಕ ಆರ್ ಚಂದ್ರು ಮೊನ್ನೆ ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ಮಾಪಕ ಕೆ ಮಂಜು,‌ ನಿರ್ದೇಶಕ ದಯಾಳ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ನಟಿ ಅನು ಪ್ರಭಾಕರ್‌ ಚಿತ್ರದಲ್ಲಿನ ತಮ್ಮ ವಿಶೇಷ ಪಾತ್ರದಲ್ಲಿ ಮಾತನಾಡಿ, ‘ಚಿತ್ರದ ಕುರಿತು ಹೇಳಿದಾಗ ನನ್ನ ಪಾತ್ರ ಬಹಳ ಇಷ್ಟವಾಯಿತು. ಚಿತ್ರದಲ್ಲಿ ನನ್ನನ್ನು ಸೂಪರ್ ಹೀರೋ ಎಂದು ತೋರಿಸಿದ್ದಾರೆ. ಪಾತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ‌‌’ ಎಂದು ಪಾತ್ರ ಕೊಟ್ಟ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಧನ್ಯವಾದ ಹೇಳಿದರು. ‘ನನ್ನದು ಈ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರ. ಯಾವುದೋ ಒಂದು ವಿಷಯದ ಅನ್ವೇಷಣೆಗಾಗಿ ಹಳ್ಳಿಗೆ ಹೋಗುತ್ತೇನೆ. ಈ ಚಿತ್ರದಲ್ಲಿ ಜೀಪ್ ಕೂಡ ಡ್ರೈವ್ ಮಾಡಿದ್ದೇನೆ’ ಎನ್ನುವುದು ನಟಿ ಹರ್ಷಿಕಾ ಮಾತು. ಹೀರೋ ವೇಣು ಅವರಿಗೆ ಇದು ಚೊಚ್ಚಲ ಸಿನಿಮಾ. ಅಭಿನಯದ ವಿಷಯದಲ್ಲಿ ನಟ ತಬಲಾ ನಾಣಿ ಸಹಾಯ ಮಾಡಿದರು ಎಂದು ಸ್ಮರಿಸಿದರು. ಮ್ಯಾಥ್ಯೂಸ್ ಮನು ಸಂಗೀತ, ಸಿನಿಟೆಕ್ ಸೂರಿ ಛಾಯಾಗ್ರಹಣ, ಎನ್ ಎಂ ವಿಶ್ವ ಸಂಕಲನ, ಮನೋಹರ್ ಎಸ್ ಪಿ ಸಂಭಾಷಣೆ ಚಿತ್ರಕ್ಕಿದೆ. ತಬಲಾ ನಾಣಿ, ಅವಿನಾಶ್, ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಪ್ರಿಯ ಹೆಗ್ಡೆ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೇ ಆಗಸ್ಟ್‌ನಲ್ಲಿ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here