ದರ್ಶನ್‌ ನಟನೆಯ ‘ಕಾಟೇರ’ ಸಿನಿಮಾದ OTT ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಹೊತ್ತಿಗೂ ಥಿಯೇಟರ್‌ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಚಿತ್ರ ಓಟಿಟಿಗೂ ಬರಲಿದೆ. ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಈ ಚಿತ್ರಕ್ಕೆ ತರುಣ್‌ ಸುಧೀರ್‌ ನಿರ್ದೇಶನವಿದೆ. ಆರಾಧನಾ ಚಿತ್ರದ ನಾಯಕಿ.

ಕಳೆದ ವರ್ಷಾಂತ್ಯದಲ್ಲಿ ತೆರೆಕಂಡು ಅಭೂತಪೂರ್ವ ಯಶಸ್ಸು ಕಂಡ ದರ್ಶನ್‌ ನಟನೆಯ ‘ಕಾಟೇರ’ ಸಿನಿಮಾದ OTT ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 2023ರ ಡಿಸೆಂಬರ್‌ 29ರಂದು ಥಿಯೇಟರ್‌ಗೆ ಬಂದಿದ್ದ ಚಿತ್ರಕ್ಕೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾಗೆ ಈ ಹೊತ್ತಿಗೂ ಥಿಯೇಟರ್‌ಗಳಲ್ಲಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಈ ಮಧ್ಯೆ ಚಿತ್ರದ OTT ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಬಿಡುಗಡೆಯಾದ ಐದು ವಾರಗಳ ನಂತರ ಓಟಿಟಿಗೆ ನೀಡುವುದಾಗಿ ಚಿತ್ರದ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಒಪ್ಪಂದ ಮಾಡಿಕೊಂಡಿದ್ದರು ಎನ್ನಲಾಗಿದೆ. ಅದರಂತೆ ಫೆಬ್ರವರಿ 9ರಿಂದ ‘ಕಾಟೇರ’ ZEE5ನಲ್ಲಿ ಸ್ಟ್ರೀಮ್‌ ಆಗಲಿದೆ.

ಕಥಾವಸ್ತುವಿನ ದೃಷ್ಟಿಯಿಂದಾಗಿ ‘ಕಾಟೇರ’ ಸಿನಿಮಾ ಕನ್ನಡದ ಪ್ರಮುಖ ಪ್ರಯೋಗವಾಗಿ ದಾಖಲಾಯ್ತು. ದರ್ಶನ್‌ ಈ ಚಿತ್ರದ ಮೂಲಕ ಬೇರೆಯದ್ದೇ ಆದೊಂದು ಇಮೇಜು ಪಡೆದುಕೊಂಡರು. ಮಾಲಾಶ್ರೀ ಪುತ್ರಿ ಆರಾಧನಾಗೆ ಇದು ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲೇ ಅವರಿಗೆ ಗಟ್ಟಿಯಾದ ಪಾತ್ರವಿತ್ತು. ಜಗಪತಿ ಬಾಬು, ಅವಿನಾಶ್, ಬೀರಾದರ್, ಶೃತಿ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತರುಣ್‌ ಸುಧೀರ್‌ ನಿರ್ದೇಶನದ ಚಿತ್ರದಲ್ಲಿ ದರ್ಶನ್ ಜಮೀನ್ದಾರರ ವಿರುದ್ಧ ಹೋರಾಟ ನಡೆಸುವ ಅಕ್ಕಸಾಲಿಗನಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರವು 1970ರ ದಶಕದ ಗ್ರಾಮೀಣ ಕರ್ನಾಟಕದ ಕಥಾಹಂದರ. ಉಳುವವನೇ ಭೂಮಿಯ ಒಡೆಯ (ಜಮಿನ್ದಾರಿ ಪದ್ದತಿ)ಯಿಂದ ರೈತರು ಹೇಗೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಊರಿನ ಮುಖಡರಿಂದ ಭೂಮಿಯನ್ನು ವಶಪಡಿಸಿಕೊಳ್ಳುತ್ತಾರೆ ಎಂಬುದು ಕಥಾವಸ್ತು. ಜೊತೆಗೆ ಜಾತಿಪದ್ದತಿಯ ಎಳೆಯೂ ಇದೆ. ಈ ನಡುವೆಯೂ ರಾಜ್ಯದ 196 ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರಿಸುತ್ತಿರುವ ಸಿನಿಮಾ OTTಗೂ ಬರುತ್ತಿದೆ. ನಿರ್ದೇಶಕ ತರುಣ್‌ ಸುಧೀರ್‌ ಮತ್ತು ಜಡೇಶ್‌ ಹಂಪಿ ಚಿತ್ರಕಥೆ ರಚನೆಯಿದ್ದು, ಮಾಸ್ತಿ ಸಂಭಾಷಣೆ ರಚಿಸಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆ, ಸುಧಾಕರ್‌ ಎಸ್‌ ರಾಜ್‌ ಛಾಯಾಗ್ರಹಣ, ಕೆ ಎಮ್‌ ಪ್ರಕಾಶ್‌ ಸಂಕಲನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here