ಪ್ರವೀಣ್‌ ಅವ್ಯಕ್ತ ನಿರ್ದೇಶನದಲ್ಲಿ ರಾಜವರ್ಧನ್‌ ನಟಿಸಿರುವ ‘ಹಿರಣ್ಯ’ ಸಿನಿಮಾದ ‘ಪದೇ ಪದೇ’ ಮೆಲೋಡಿ ಹಾಡು ಬಿಡುಗಡೆಯಾಗಿದೆ. ಪ್ರಮೋದ್‌ ಮರವಂತೆ ರಚಿಸಿರುವ ಗೀತೆಗೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದು, ಸಂಜಿತ್‌ ಹೆಗ್ಡೆ ಹಾಡಿದ್ದಾರೆ.

‘ಬಿಚ್ಚುಗತ್ತಿ’ ಸಿನಿಮಾ ಖ್ಯಾತಿಯ ರಾಜವರ್ಧನ್‌ ನಟನೆಯ ‘ಹಿರಣ್ಯ’ ಸಿನಿಮಾದ ಮೆಲೋಡಿ ಹಾಡು ಬಿಡುಗಡೆಯಾಗಿದೆ. ಪ್ರಮೋದ್‌ ಮರವಂತೆ ರಚಿಸಿರುವ ಗೀತೆಗೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದು, ಸಂಜಿತ್‌ ಹೆಗ್ಡೆ ಹಾಡಿದ್ದಾರೆ. ಕಿರುಚಿತ್ರಗಳನ್ನು ಮಾಡಿರುವ ಪ್ರವೀಣ್‌ ಅವ್ಯಕ್ತ ಅವರಿಗೆ ಇದು ಸ್ವತಂತ್ರ ನಿರ್ದೇಶನದ ಮೊಲದ ಸಿನಿಮಾ. Bigg Boss ಖ್ಯಾತಿಯ ದಿವ್ಯಾ ಸುರೇಶ್‌ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ಹುಲಿ ಕಾರ್ತಿಕ್‌, ಅರವಿಂದ ರಾವ್‌, ದಿಲೀಪ್‌ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ರಿಹಾನಾ ಸಿನಿಮಾದ ನಾಯಕನಟಿ. ‘ವೇದಾಸ್ ಇನ್ಫಿನಿಟಿ ಪಿಚ್ಚರ್ಸ್‌’ ಬ್ಯಾನರ್‌ನಡಿ ವಿಘ್ನೇಶ್ವರ್ ಮತ್ತು ವಿಜಯ್ ಕುಮಾರ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ಯೋಗೇಶ್ವರನ್‌ ಆರ್‌ ಛಾಯಾಗ್ರಹಣ, ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ. ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿರುವ ಸಿನಿಮಾ ಸದ್ಯದಲ್ಲೇ ಥಿಯೇಟರ್‌ಗೆ ಬರಲಿದೆ.

LEAVE A REPLY

Connect with

Please enter your comment!
Please enter your name here