ನಟ ರಿಷಿ ‘ರಾಮನ ಅವತಾರ’ದಲ್ಲಿ ಚಿತ್ರಮಂದಿರಗಳಿಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ‘ರಾಮನ ಅವತಾರ’ ಚಿತ್ರದಲ್ಲಿ ರಿಷಿಗೆ ನಾಯಕಿಯಾಗಿ ಪ್ರಣೀತಾ ಸುಭಾಷ್‌ ನಟಿಸಿದ್ದು, ಸಿನಿಮಾದ ಬಿಡುಗಡೆ ದಿನಾಂಕ ಈಗ ಪ್ರಕಟವಾಗಿದೆ.

ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದ ನಟರಲ್ಲಿ ರಿಷಿ ಸಹ ಒಬ್ಬರು. ಸಹಜ ಅಭಿನಯದಿಂದಲೇ ಗುರುತಿಸಿಕೊಂಡಿರುವ ಈ ಕಲಾವಿದ ‘ಕವಲುದಾರಿ’, ‘ಆಪರೇಷನ್‌ ಅಲಮೇಲಮ್ಮ’ ಸಿನಿಮಾಗಳ ಮೂಲಕ ಪ್ರತಿಭಾವಂತ ನಟ ಎಂದು ಸಾಬೀತು ಮಾಡಿದರು. ಆದರೆ ಮುಂದೆ ಈ ಸಿನಿಮಾಗಳಿಂದ ಸಿಕ್ಕ ದೊಡ್ಡಮಟ್ಟದ ಯಶಸ್ಸು ಮತ್ತೆ ಸಿಗಲೇ ಇಲ್ಲ. ಹೀಗಾಗಿ ಈಗ ಒಂದು ಹಿಟ್‌ಗಾಗಿ ಕಾಯುತ್ತಿರುವ ರಿಷಿ ಹೊಸ ಗೆಟಪ್‌ನಲ್ಲಿ ಎಂಟ್ರಿ ಕೊಡೋಕೆ ಸಜ್ಜಾಗಿದ್ದಾರೆ. ಯಾವ ಪಾತ್ರವಾದರೂ ಸೈ ಎನ್ನುವ ರಿಷಿ ಹಾಸ್ಯಭರಿತ ಪಾತ್ರಗಳಲ್ಲಿ ಈ ಹಿಂದೆಯೂ ರಂಜಿಸಿದ್ದಾರೆ. ಹೀಗಾಗಿ ಈ ಸಲ ‘ರಾಮನ ಅವತಾರ’ ಸಿನಿಮಾ ಬಗ್ಗೆ ರಿಷಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.

ವಿಕಾಸ್ ಪಂಪಾಪತಿ ನಿರ್ದೇಶನದ ಚೊಚ್ಚಲ ಚಿತ್ರ ‘ರಾಮನ ಅವತಾರ’. ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದು, ಅರುಣ್ ಸಾಗರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈಗ ‘ರಾಮನ ಅವತಾರ’ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಏಪ್ರಿಲ್ ತಿಂಗಳಲ್ಲಿ ಬೆಳ್ಳಿತೆರೆಗೆ ಬರಬೇಕಿದ್ದ ಸಿನಿಮಾ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ 10ಕ್ಕೆ ರಿಲೀಸ್‌ ಆಗಲಿದೆ. ನಟ ರಿಷಿ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ. ರಾಮನ ಅವತಾರ ಸಿನಿಮಾದ ಚಿತ್ರೀಕರಣವನ್ನು ಉಡುಪಿ ಹಾಗೂ ಬೆಂಗಳೂರು ಸುತ್ತಮುತ್ತ ಮಾಡಲಾಗಿದೆ. ಟೀಸರ್ ಹಾಗೂ ಹಾಡುಗಳ ಮೂಲಕ ಈ ಸಿನಿಮಾ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿದೆ.

ಸ್ಟಾರ್ ಫ್ಯಾಬ್ ಪ್ರೊಡಕ್ಷನ್‌ ಬ್ಯಾನರ್‌ ಅಡಿ ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಅವರೇ ಈ ಸಿನಿಮಾಗೂ ಹಣ ಹೂಡಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಜಾನರ್‌ನ ಈ ಚಿತ್ರಕ್ಕೆ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶಪಾಂಡೆ ಅವರ ಛಾಯಾಗ್ರಹಣವಿದೆ. ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here