ಹಿತೇಶ್‌ ಭಾಟಿಯಾ ನಿರ್ದೇಶನದ ಹಿಂದಿ ಸರಣಿಗೆ ‘ಡಬ್ಬಾ ಕಾರ್ಟೆಲ್‌’ ಎಂದು ನಾಮಕರಣವಾಗಿದೆ. ಫರ್ಹನ್‌ ಅಖ್ತರ್‌ ಮತ್ತು ರಿತೇಷ್‌ ಸಿಧ್ವಾನಿ ನಿರ್ಮಾಣದ ಸರಣಿಯ ಪ್ರಮುಖ ಪಾತ್ರಗಳಲ್ಲಿ ಶಬಾನಾ ಅಜ್ಮಿ, ನಿಮಿಷಾ ಸಜಯನ್‌, ಶಾಲಿನಿ ಪಾಂಡೆ, ಅಂಜಲಿ ಆನಂದ್‌ ಮತ್ತು ಜ್ಯೋತಿಕಾ ನಟಿಸಿದ್ದಾರೆ. ಸದ್ಯದಲ್ಲೇ Netflixನಲ್ಲಿ ಸರಣಿ ಸ್ಟ್ರೀಮ್‌ ಆಗಲಿದೆ.

ಶಬಾನಾ ಅಜ್ಮಿ, ನಿಮಿಷಾ ಸಜಯನ್, ಶಾಲಿನಿ ಪಾಂಡೆ, ಅಂಜಲಿ ಆನಂದ್, ಮತ್ತು ಜ್ಯೋತಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ನೂತನ ಹಿಂದಿ ಸರಣಿಗೆ ‘ಡಬ್ಬಾ ಕಾರ್ಟೆಲ್’ ಶೀರ್ಷಿಕೆಯನ್ನಿಡಲಾಗಿದ್ದು, ಸರಣಿಯನ್ನು ಹಿತೇಶ್ ಭಾಟಿಯಾ ನಿರ್ದೇಶಿಸುತ್ತಿದ್ದಾರೆ. ಸರಣಿಯು ಘೊಷಣಾ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಮುಂಬಯಿಯ ಥಾಣಾ ಪ್ರದೇಶದಲ್ಲಿ ಶಬಾನಾ ಅಜ್ಮಿ, ಶಾಲಿನಿ ಪಾಂಡೆ ಮತ್ತು ಅಂಜಲಿ ಆನಂದ್ ಸೇರಿದಂತೆ ಜನರ ಗುಂಪೊಂದು ಟಿಫಿನ್ ವಿತರಣಾ ವ್ಯಾಪಾರದ ಮೂಲಕ ಡ್ರಗ್ ವಿತರಣಾ ವ್ಯವಹಾರವನ್ನು ನಡೆಸುತ್ತಿದೆ ಎಂದು ವಿಡಿಯೋ ಸೂಚಿಸುತ್ತದೆ. ಅವರೆಲ್ಲರೂ ತಮ್ಮ ರಹಸ್ಯಗಳನ್ನು ಮರೆಮಾಚಲು ಪ್ರಯತ್ನ ಪಡುತ್ತಿರುವುದನ್ನು ಸಹ ಕಾಣಬಹುದು. ಈ ಕುರಿತು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿರುವ Netflix India, ‘ಡಬ್ಬಾ ಕಾರ್ಟೆಲ್’ ಶೀಘ್ರದಲ್ಲೇ Netflixನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ’ ಎಂದು ಬರೆದುಕೊಂಡಿದೆ. ಈ ಸರಣಿಯನ್ನು Excel Entertainment ಬ್ಯಾನರ್‌ ಅಡಿಯಲ್ಲಿ ಫರ್ಹನ್‌ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ನಿರ್ಮಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here