ಸುರೇಶ್‌ ಮಾರಿ ನಿರ್ದೇಶನದ ‘ಜೆ ಬೇಬಿ’ ತಮಿಳು ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಊರ್ವಶಿ ಮತ್ತು ಅಟ್ಟಕತ್ತಿ ದಿನೇಶ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಕೌಟುಂಬಿಕ ಕಥಾಹಂದರದ ಸಿನಿಮಾ ಇದೇ ಮಾರ್ಚ್‌ 8ರಂದು ತೆರೆಕಾಣುತ್ತಿದೆ.

ಊರ್ವಶಿ ಮತ್ತು ಅಟ್ಟಕತ್ತಿ ದಿನೇಶ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಕೌಟುಂಬಿಕ ಕಥಾಹಂದರ ‘ಜೆ ಬೇಬಿ’ ತಮಿಳು ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾವನ್ನು ನಿರ್ಮಾಪಕ ಸುರೇಶ್ ಮಾರಿ ನಿರ್ದೇಶಿಸಿದ್ದು, ಲೊಲ್ಲು ಸಭಾಮಾರನ್ ಪ್ರಮುಖ ಪಾತ್ರದಲ್ಲಿದ್ದಾರೆ. ನೈಜ ಕತೆ ಆಧರಿಸಿರುವ ಟ್ರೇಲರ್‌ ಊರ್ವಶಿಯನ್ನು ಪರಿಚಯಿಸುವ ಮೂಲಕ ಪ್ರಾರಂಭವಾಗುತ್ತದೆ. ಏರಿಯಾದ ‘ರೌಡಿ ಬೇಬಿ’ಯ ರೀತಿ ಎಲ್ಲರ ಮೇಲೆ ದಬ್ಬಾಳಿಕೆ ನಡೆಸಿಕೊಂಡು ಎಲ್ಲರ ದೃಷ್ಟಿಯಲ್ಲೂ ಬಾಯಿ ಬಡಕಿ ಎನ್ನುವ ರೀತಿ ಊರ್ವಶಿ ಕಾಣಿಸಿಕೊಂಡಿದ್ದಾರೆ. ಸಣ್ಣ ಸಣ್ಣ ವಿಚಾರಕ್ಕೂ ಎಲ್ಲರೊಂದಿಗೆ ಜಗಳ ಮಾಡುವ ಪಾತ್ರ ಅವರದ್ದು. ಮಕ್ಕಳು ಸಹ ಆಕೆಗೆ ಬುದ್ಧಿವಾದ ಹೇಳಿ ಸೋತಿರುತ್ತಾರೆ.

ಯಾವುದೋ ವಿಷಯಕ್ಕೆ ತೀರಾ ವಾಗ್ವಾದವಾಗಿ ಮಗ ಎಲ್ಲರೆದುರು ನಿಂದಿಸಿದಾಗ ಊರ್ವಶಿ ಮನೆ ಬಿಟ್ಟು ಹೋಗುತ್ತಾರೆ. ಮನೆ ಬಿಟ್ಟು ಹೋದ ಆಕೆಯನ್ನು ಎಲ್ಲಡೆ ಹುಡುಕಿಸಲಾಗುತ್ತದೆ. ಆದರೆ ಎಷ್ಟೇ ಹುಡುಕಿದರೂ ಆಕೆ ಸಿಗುವುದಿಲ್ಲ. ಚಲನಚಿತ್ರದಲ್ಲಿ ಕವಿತಾ ಭಾರತಿ, ಜಯ ಮೂರ್ತಿ, ಶೇಖರ್ ನಾರಾಯಣನ್, ಎಜುಮಲೈ, ಧಕ್ಷಾ, ಪಿ ಮೆಲೋಡಿ ಡೋರ್ಕಾಸ್, ಇಸ್ಮತ್ ಬಾನು ಎ, ಸಬ್ಬಿತಾ ರೋಯಿ ಮತ್ತು ಮಾಯಾಶ್ರೀ ಅರುಣ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪಾ ರಂಜಿತ್, ಅಭಯಾನಂದ್ ಸಿಂಗ್, ಪಿಯೂಷ್ ಸಿಂಗ್, ಸೌರಭ್ ಗುಪ್ತಾ, ಅದಿತಿ ಆನಂದ್ ಮತ್ತು ಅಶ್ವಿನಿ ಚೌಧರಿ ಚಿತ್ರ ನಿರ್ಮಿಸಿದ್ದಾರೆ. ಸಿನಿಮಾ ಇದೇ ಮಾರ್ಚ್‌ 8ರಂದು ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಯಂತ್ ಸೇತು ಮಾಥವನ್ ಛಾಯಾಗ್ರಹಣ, ಟೋನಿ ಬ್ರಿಟ್ಟೋ ಸಂಗೀತ ಸಂಯೋಜನೆ, ಷಣ್ಮುಗಂ ವೇಲುಸಾಮಿ ಸಂಕಲನವಿದೆ. ಸುಮಾರು 700 ಚಿತ್ರಗಳಲ್ಲಿ ನಟಿಸಿರುವ ಊರ್ವಶಿ ಅವರು ಈ ಹಿಂದೆ ಪ್ರಿಯದರ್ಶನ್ ಅವರ ‘ಅಪ್ಪಾತ’ ಚಿತ್ರದ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

LEAVE A REPLY

Connect with

Please enter your comment!
Please enter your name here