ಸಿದ್ದಾರ್ಥ್‌ ಆನಂದ್‌ ನಿರ್ದೇಶನದ ‘ಫೈಟರ್‌’ ಸಿನಿಮಾ ಓಟಿಟಿಯಲ್ಲಿ ಬರಲು ಸಜ್ಜಾಗಿದೆ. Netflix ದುಬಾರಿ ಮೊತ್ತಕ್ಕೆ ಚಿತ್ರವನ್ನು ಖರೀದಿಸಿದ್ದು, ಸದ್ಯದಲ್ಲೇ ಸ್ಟ್ರೀಮಿಂಗ್‌ ದಿನಾಂಕ ಘೋಷಣೆಯಾಗಲಿದೆ. ಹೃತಿಕ್‌ ರೋಷನ್‌, ದೀಪಿಕಾ ಪಡುಕೋಣೆ, ಅನಿಲ್‌ ಕಪೂರ್‌ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಫೈಟರ್‌’ ಸಿನಿಮಾ OTTಯಲ್ಲಿ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಜನವರಿ 25ರಂದು ಚಿತ್ರಮಂದಿರಗಳಲ್ಲಿ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ವಿಯಾಗಿದ್ದ ಸಿನಿಮಾವನ್ನು Netflix 150 ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿಸಿದೆ. ನಿಯಮಗಳ ಪ್ರಕಾರ, ಯಾವುದೇ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 4 ವಾರಗಳ ನಂತರ ಮಾತ್ರ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಬಹುದು. ‘ಫೈಟರ್’ ಸಿನಿಮಾ ಬಿಡುಗಡೆಯಾಗಿ ತಿಂಗಳಾಗಿದ್ದು, ಅತಿ ಶೀಘ್ರ OTT ಪ್ರವೇಶಿಸಲಿದೆ.

ಚಿತ್ರವು ವಾಯುಪಡೆಯ ಕುರಿತಾಗಿದೆ. ಹೃತಿಕ್‌, ದೀಪಿಕಾ ಭಾರತೀಯ ವಾಯುಪಡೆಯ ಏರ್ ಡ್ರಾಗನ್ಸ್ ಘಟಕದ ಅಧಿಕಾರಿಗಳಾಗಿ ಕಾಣಿಸಿಕೊಂಡಿದ್ದಾರೆ. ಅನಿಲ್ ಕಪೂರ್ ಕಮಾಂಡಿಂಗ್ ಆಫೀಸರ್ ರಾಕಿ ಪಾತ್ರ ನಿರ್ವಹಿಸಿದ್ದಾರೆ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ದೀಪಿಕಾ ಮತ್ತು ಹೃತಿಕ್ ರೋಷನ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ತಲಾತ್ ಅಜೀಜ್ (ಹೃತಿಕ್ ರೋಷನ್ ಅವರ ತಂದೆಯ ಪಾತ್ರ) ಕರಣ್ ಸಿಂಗ್ ಗ್ರೋವರ್, ಮತ್ತು ಅಕ್ಷಯ್ ಒಬೆರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಹುಸೇನ್‌ ದಲಾಲ್‌ ರಚಿಸಿದ್ದು, Viacom18 Studios ಮತ್ತು Marflix Pictures ನಿರ್ಮಿಸಿವೆ.

LEAVE A REPLY

Connect with

Please enter your comment!
Please enter your name here