ಶಂಕರ್‌ ನಿರ್ದೇಶನದಲ್ಲಿ ರಾಮ್‌ ಚರಣ್‌ ನಟಿಸುತ್ತಿರುವ ‘ಗೇಮ್‌ ಚೇಂಜರ್‌’ ತೆಲುಗು ಸಿನಿಮಾದ ರಿಲೀಸ್‌ ಡೇಟ್‌ ಘೋಷಣೆಯಾಗಿದೆ. ಮೂರು ವರ್ಷದ ಹಿಂದೆ ಘೋಷಣೆಯಾಗಿದ್ದ ಸಿನಿಮಾ ಕಾರಣಾಂತರಗಳಿಂದ ವಿಳಂಬವಾಗುತ್ತಿದೆ. ಕಿಯಾರಾ ಅಡ್ವಾನಿ ಈ ಸಿನಿಮಾದ ನಾಯಕಿ.

ರಾಮ್ ಚರಣ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಗೇಮ್‌ ಚೇಂಜರ್‌’ ತೆಲುಗು ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದೆ. ಶಂಕರ್‌ ನಿರ್ದೇಶನದ ಚಿತ್ರ ಮೂರು ವರ್ಷಗಳ ಹಿಂದೆ ಘೋಷಣೆಯಾಗಿತ್ತು. ಚಿತ್ರದಲ್ಲಿ ರಾಮ್ ಚರಣ್ ಅವರಿಗೆ ಜೋಡಿಯಾಗಿ ಕಿಯಾರಾ ಅಡ್ವಾನಿ ಅಭಿನಯಿಸುತ್ತಿದ್ದಾರೆ. ಸುನೀಲ್, ಶ್ರೀಕಾಂತ್ ಇತರೆ ಪ್ರಮುಖ ಪಾತ್ರಧಾರಿಗಳು. ರಾಮ್ ಚರಣ್ ಮತ್ತು ಕಿಯಾರಾ ಐಎಎಸ್ ಅಧಿಕಾರಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಡಿಸೆಂಬರ್ 25, 2024ರ ಕ್ರಿಸ್‌ಮಸ್‌ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಹೈದರಾಬಾದ್‌ನಲ್ಲಿ ಶೂಟಿಂಗ್‌ ನಡೆಯುತ್ತಿದ್ದು, ಶೇ 30ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ನಿರ್ದೇಶಕ ಶಂಕರ್ ಅವರು ಕಮಲ ಹಾಸನ್ ಅವರ ‘ಇಂಡಿಯನ್ 2’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಈ ಕಾರಣದಿಂದಾಗಿಯೇ ‘ಗೇಮ್ ಚೇಂಜರ್’ ವಿಳಂಬವಾಗುತ್ತಿದೆ ಎನ್ನಲಾಗಿದೆ.

ರಾಮ್ ಚರಣ್ ಸಹ ಬುಚ್ಚಿ ಬಾಬು ಸನಾ ಅವರೊಂದಿಗೆ ನೂತನ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಮತ್ತು ಸಾಧ್ಯವಾದಷ್ಟು ಬೇಗ ಈ ಚಿತ್ರದ ಚಿತ್ರೀಕರಣವನ್ನು ಆರಂಭಿಸುವ ನಿರೀಕ್ಷೆಯಿದೆ. ಚಿತ್ರದಲ್ಲಿ ರಾಮ್‌ ಚರಣ್‌ ಅವರಿಗೆ ನಾಯಕಿಯಾಗಿ ಜಾಹ್ನವಿ ಕಪೂರ್ ನಟಿಸಲಿದ್ದಾರೆ ಮತ್ತು ಈ ಸಿನಿಮಾ ಕ್ರೀಡಾ ಕಥಾಹಂದರವಾಗಿದೆ. ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಚಿತ್ರ Mythri Movie Makers ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ವಾಗುತ್ತಿದ್ದು, ಪ್ರೀ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ.

LEAVE A REPLY

Connect with

Please enter your comment!
Please enter your name here