ಏಪ್ರಿಲ್‌ 14ರಂದು ಬಿಡುಗಡೆಯಾಗಿದ್ದ ‘KGF 2’ ಸಿನಿಮಾ ಇಂದಿಗೆ 100 ದಿನ ಪೂರೈಸಿದೆ. ಭಾರತದಾದ್ಯಂತ ಸಂಚಲನ ಸೃಷ್ಟಿಸಿದ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 1000 ಕೋಟಿಗೂ ಹೆಚ್ಚು ವಹಿವಾಟು ದಾಖಲಿಸಿತು. ನಿರ್ದೇಶಕ ಪ್ರಶಾಂತ್‌ ನೀಲ್‌ ವಿಶೇಷ ಟ್ರೈಲರ್‌ನೊಂದಿಗೆ ಪ್ರೇಕ್ಷಕರಿಗೆ ಧನ್ಯವಾದ ಹೇಳಿದ್ದಾರೆ.

ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ ಯಶ್‌ ಅಭಿನಯದ ‘KGF 2’ ಸಿನಿಮಾ ಇಂದಿಗೆ (ಜುಲೈ 22) ಶತದಿನ ಪೂರೈಸಿದೆ. ಏಪ್ರಿಲ್‌ 14ರಂದು ತೆರೆಕಂಡ ಚಿತ್ರ ಭಾರತೀಯ ಸಿನಿಮಾ ಸಂದರ್ಭದಲ್ಲೇ ಹಲವು ದಾಖಲೆಗಳನ್ನು ಸೃಷ್ಟಿಸಿತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಂಡ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ 1000 ಕೋಟಿ ರೂಪಾಯಿಗೂ ಅಧಿಕ ವಹಿವಾಟು ದಾಖಲಿಸಿತು. ಪ್ರಸ್ತುತ ಸಿನಿಮಾ ಅಮೇಜಾನ್‌ ಪ್ರೈಂನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಸಿನಿಮಾ ನೂರು ದಿನಗಳನ್ನು ಪೂರೈಸಿದ ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಪ್ರಶಾಂತ್‌ ನೀಲ್‌, “Thank u to each and everyone for making this happen (sic)” ಎಂದು 100ನೇ ದಿನಕ್ಕೊಂದು ಸ್ಪೆಷಲ್‌ ಟ್ರೈಲರ್‌ನೊಂದಿಗೆ ಧನ್ಯವಾದ ಅರ್ಪಿಸಿ ಟ್ವೀಟ್‌ ಮಾಡಿದ್ದಾರೆ.

https://twitter.com/prashanth_neel/status/1550359505116221441

2018ರಲ್ಲಿ ತೆರೆಕಂಡಿದ್ದ ‘KGF’ ಸರಣಿ ಸಿನಿಮಾ ‘KGF2’ ದೊಡ್ಡ ಕ್ರೇಜ್‌ ಸೃಷ್ಟಿಸಿತ್ತು. ಅಬ್ಬರದ ಪ್ರಚಾರದೊಂದಿಗೆ ತೆರೆಕಂಡ ಸಿನಿಮಾಗೆ ದೇಶದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯ್ತು. ಶ್ರೀನಿಧಿ ಶೆಟ್ಟಿ, ಪ್ರಕಾಶ್‌ ರಾಜ್‌, ಸಂಜಯ್‌ ದತ್‌, ರವೀನಾ ಟಂಡನ್‌ ಪ್ರಮುಖ ಪಾತ್ರಗಳಲ್ಲಿದ್ದರು. ‘KGF’ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ನಟ ಯಶ್‌ ಸರಣಿ ಚಿತ್ರದ ದೊಡ್ಡ ಯಶಸ್ಸಿನೊಂದಿಗೆ ಸ್ಟಾರ್‌ ಆದರು. ಈ ಚಿತ್ರದೊಂದಿಗೆ ಕನ್ನಡದ ಮಾರುಕಟ್ಟೆ ವಿಸ್ತಾರವಾಗಿದ್ದಲ್ಲದೆ, ಕನ್ನಡ ಸಿನಿಮಾ ಬಗ್ಗೆ ದೇಶದ ಜನರು ಮಾತನಾಡುವಂತಾಯ್ತು. ಇದೀಗ ಸಿನಿಮಾ ನೂರು ದಿನಗಳನ್ನು ಪೂರೈಸಿದೆ. ನಿರ್ದೇಶಕ ಪ್ರಶಾಂತ್‌ ನೀಲ್‌ ನೂತನ ಟ್ರೈಲರ್‌ನಲ್ಲಿ ‘KGF 3’ ಸರಣಿ ಸಿನಿಮಾ ಮಾಡುವ ಸೂಚನೆ ನೀಡಿದ್ದಾರೆ!

LEAVE A REPLY

Connect with

Please enter your comment!
Please enter your name here