‘ಭಾಗ್ಯಲಕ್ಷ್ಮಿ’ ಧಾರಾವಾಹಿ ಯಶಸ್ಸಿನ ಹಿನ್ನೆಲೆಯಲ್ಲಿ ಕಲರ್ಸ್ ಕನ್ನಡ ವಾಹಿನಿ ‘ನಾನು ಭಾಗ್ಯ’ ಶೀರ್ಷಿಕೆಯಡಿ ಅಭಿಯಾನವೊಂದನ್ನು ಆರಂಭಿಸಿದೆ. ಈ ಮುಖೇನ ಸಮಾಜದ ಒತ್ತಡಗಳನ್ನು ಮೀರಿ ತಮ್ಮ ಕನಸನ್ನು ಬೆಂಬತ್ತುವಂತೆ ಹೆಣ್ಣುಮಕ್ಕಳನ್ನು ಉತ್ತೇಜಿಸುವುದು ಕಲರ್ಸ್ ಕನ್ನಡದ ಉದ್ದೇಶ. ಇದಕ್ಕಾಗಿ ಪ್ರೊಮೊ ಹಾಡೊಂದನ್ನು ಸಹ ನಿರ್ಮಿಸಲಾಗಿದೆ. ಪ್ರದ್ಯುಮ್ನ ರಚನೆಯ ಈ ಹಾಡಿಗೆ ಗಿರಿಧರ್‌ ದಿವಾನ್‌ ಸಂಗೀತ ಸಂಯೋಜಿಸಿದ್ದಾರೆ.

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮಿ’ ಧಾರಾವಾಹಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಸೀರಿಯಲ್‌ ಏಳುನೂರನೇ ಸಂಚಿಕೆಯ ಹೊಸ್ತಿಲಲ್ಲಿದೆ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದರೂ, ತನಗೊದಗಿದ ಪರಿಸ್ಥಿತಿಯನ್ನು ಎದುರಿಸುತ್ತಾ ಕೆಚ್ಚು, ಮಹತ್ವಾಕಾಂಕ್ಷೆಗಳ ಹಾದಿ ತುಳಿದ ಭಾಗ್ಯಳ ಪಯಣ ವೀಕ್ಷಕರಿಗೆ ತಟ್ಟಿದೆ. ಧಾರಾವಾಹಿ ಯಶಸ್ಸಿನ ಹಿನ್ನೆಲೆಯಲ್ಲಿ ಕಲರ್ಸ್ ಕನ್ನಡ ವಾಹಿನಿ ‘ನಾನು ಭಾಗ್ಯ’ ಶೀರ್ಷಿಕೆಯಡಿ ಅಭಿಯಾನವೊಂದನ್ನು ಆರಂಭಿಸಿದೆ. ಈ ಮುಖೇನ ಸಮಾಜದ ಒತ್ತಡಗಳನ್ನು ಮೀರಿ ತಮ್ಮ ಕನಸನ್ನು ಬೆಂಬತ್ತುವಂತೆ ಹೆಣ್ಣುಮಕ್ಕಳನ್ನು ಉತ್ತೇಜಿಸುವುದು ಕಲರ್ಸ್ ಕನ್ನಡದ ಉದ್ದೇಶ. ಇದಕ್ಕಾಗಿ ಪ್ರೊಮೊ ಹಾಡೊಂದನ್ನು ಸಹ ನಿರ್ಮಿಸಲಾಗಿದೆ. ಪ್ರದ್ಯುಮ್ನ ರಚನೆಯ ಈ ಹಾಡಿಗೆ ಗಿರಿಧರ್‌ ದಿವಾನ್‌ ಸಂಗೀತ ಸಂಯೋಜಿಸಿದ್ದಾರೆ.

ಧಾರಾವಾಹಿಯಲ್ಲಿ ಭಾಗ್ಯ ತನ್ನ ಬದುಕಿನ ನಿರ್ಣಾಯಕ ತಿರುವಿನಲ್ಲಿ ನಿಂತಿದ್ದಾಳೆ. ಇಲ್ಲಿಂದ ಮುಂದಕ್ಕೆ ಕತೆ ಭಾರೀ ಬದಲಾವಣೆ ಕಾಣಲಿದೆ. ಆರಂಭದಲ್ಲಿ ತನ್ನ ಗಂಡನ ಸಾಂಪ್ರದಾಯಿಕ ಮನೆಗೆ ತಕ್ಕ ಸೊಸೆಯಾಗಲು ಹೆಣಗಿದ ಭಾಗ್ಯಳ ಪ್ರೀತಿ ಮತ್ತು ತಾಳ್ಮೆ ಅವಳ ಅತ್ತೆ ಕುಸುಮಳ ಮನಗೆದ್ದಿದ್ದವು. ಅದೇ ಉತ್ಸಾಹದಲ್ಲಿ ಎರಡು ಮಕ್ಕಳಾದ ಮೇಲೂ ಮತ್ತೆ ಶಾಲೆಗೆ ಸೇರಿ ಹತ್ತನೇ ಕ್ಲಾಸಿನ ಪರೀಕ್ಷೆಯನ್ನೂ ಮುಗಿಸಿದ ಭಾಗ್ಯ ತನ್ನ ಕುಟುಂಬ ಹಾಗೂ ಮಕ್ಕಳ ಗೌರವ ಗಳಿಸಿದಳು. ಫೈವ್‌ಸ್ಟಾರ್‌ ಹೋಟೆಲಿನಲ್ಲಿ ಮುಖ್ಯ ಶೆಫ್ ಆಗಿ ಕೆಲಸ ಶುರುಮಾಡಿದಾಗಲಂತೂ ಅವಳ ಪಯಣ ಹೊಸ ಮಜಲಿಗೇರಿತ್ತು.

ಇದೀಗ ಭಾಗ್ಯ ತನ್ನ ಕುಟುಂಬದ ತಳಪಾಯವನ್ನೇ ಅಲುಗಾಡಿಸುವಂಥ ಸತ್ಯಕ್ಕೆ ಮುಖಾಮುಖಿಯಾಗಿದ್ದಾಳೆ. ತನ್ನ ಗಂಡ ತಾಂಡವನ ಮೋಸ ಬಟಾಬಯಲಾಗಿ ಕಂಗೆಟ್ಟ ಅವಳಿಗೆ ಸಂಸಾರದಲ್ಲಿ ಉಳಿಯಬೇಕೋ ಬೇಡವೊ ಅನ್ನುವ ಪ್ರಶ್ನೆ ಎದುರಾಗಿತ್ತು. ಸಂಸಾರದೊಳಗೇ ಇದ್ದು ತನ್ನನ್ನು ತಾನು ಮರಳಿ ಕಂಡುಕೊಳ್ಳುವ ಕೆಚ್ಚಿನ ನಿರ್ಧಾರ ತೆಗೆದುಕೊಂಡಿರುವ ಭಾಗ್ಯಳ ಇದುವರೆಗೆ ಕಂಡಿರದ ಹೊಸ ಮುಖದ ಪರಿಚಯ ವೀಕ್ಷಕರಿಗೆ ಮುಂಬರುವ ಸಂಚಿಕೆಗಳಲ್ಲಿ ಆಗಲಿದೆ. ತನ್ನನ್ನು ತಾನು ಸಂಪೂರ್ಣವಾಗಿ ಬದಲಾಯಿಸಿಕೊಂಡು ತನ್ನ ಮುಂದಿನ ಹೆಜ್ಜೆಗಳನ್ನು ದೃಢವಾಗಿ ಇಡಲಿರುವ ಸ್ವತಂತ್ರ ಭಾಗ್ಯಳನ್ನು ಅವರು ನೋಡಲಿದ್ದಾರೆ ಎನ್ನುವುದು ಮಾಹಿನಿ ಹೇಳಿಕೆ. ಭಾಗ್ಯಳ ಈ ದಿಟ್ಟ ತಿರುವಿನ ಕ್ಷಣವನ್ನು ಸಂಭ್ರಮಿಸಲು ಕಲರ್ಸ್ ಕನ್ನಡ ‘ನಾನು ಭಾಗ್ಯ’ ಅನ್ನುವ ಅಭಿಯಾನವೊಂದನ್ನು ಆರಂಭಿಸಿದೆ. ಈ ಅಭಿಯಾನಕ್ಕೆಂದೇ #IAMBHAGYA ಅನ್ನುವ ಹ್ಯಾಷ್ ಟ್ಯಾಗ್ ಆರಂಭಿಸಲಾಗಿದೆ. ಭಾಗ್ಯಳ ಮುಂದಿನ ಹೆಜ್ಜೆಗಳು ಅವಳನ್ನು ಎಲ್ಲಿಗೆ ಕರೆದೊಯ್ಯಲಿವೆ ಎಂದು ನೋಡಬೇಕು.

LEAVE A REPLY

Connect with

Please enter your comment!
Please enter your name here