ಗುರುರಾಜ ಕುಲಕರ್ಣಿ ನಿರ್ಮಾಣ, ನಿರ್ದೇಶನದ ‘ಅಮೃತ ಅಪಾರ್ಟ್‌ಮೆಂಟ್ಸ್‌’ ಚಿತ್ರದ ‘ಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವು’ ಲಿರಿಕಲ್ ಸಾಂಗ್ ಬಿಡುಗಡೆಯಾಗಿದೆ.  ಕೆ.ಕಲ್ಯಾಣ್‌ ರಚನೆಯ ಈ ಗೀತೆಗೆ ಎಸ್‌.ಡಿ.ಅರವಿಂದ್ ಸಂಗೀತ ಸಂಯೋಜಿಸಿದ್ದಾರೆ.

“ಗಂಡ-ಹೆಂಡತಿಯ ಮಧ್ಯೆ ಮುನಿಸು ಕರಗುವ ಸನ್ನಿವೇಶಕ್ಕೆ ತಕ್ಕಂತೆ, ಇಡೀ ಸಿನೆಮಾದ ಕಥೆಯ ಸಾರಾಂಶವನ್ನು ಹೇಳುವಂತಹ, ಪ್ರೇಕ್ಷನ ಮನ ತಟ್ಟುವಂತಹ ಒಂದು ವಿಶೇಷ ಹಾಡಿನ ಅವಶ್ಯಕತೆ ಇತ್ತು. ಈ ಥರದ ಒಂದು ವಿನೂತನ ಗೀತೆಗೆ ಪ್ರೇಮಕವಿ ಕೆ.ಕಲ್ಯಾಣರವರೇ ಸೂಕ್ತ ಎಂದು ನಾನು ಅವರ ಬಳಿ ಹೋದೆ. ಯುವಪ್ರೇಮಿಗಳ ಪ್ರೀತಿ, ಪ್ರೇಮ, ಮುನಿಸು, ತಲ್ಲಣಗಳ ಭಾವಕ್ಕೆ ತಕ್ಕಂತೆ ಗೀತೆಯ ಸಾಲುಗಳನ್ನು ಕೆ.ಕಲ್ಯಾಣ ಬರೆದಿದ್ದಾರೆ. ಅದಕ್ಕೆ ಪೂರಕವಾಗಿ ಸಂಗೀತ ನಿರ್ದೇಶಕ ಎಸ್.ಡಿ.ಅರವಿಂದ ಕೇಳುಗರನ್ನು ಮೋಡಿ ಮಾಡುವ ಸಂಗೀತ ನೀಡಿದ್ದಾರೆ” ಎನ್ನುತ್ತಾರೆ ‘ಅಮೃತ ಅಪಾರ್ಟ್‌ಮೆಂಟ್‌’ ಚಿತ್ರದ ನಿರ್ದೇಶಕ ಗುರುರಾಜ ಕುಲಕರ್ಣಿ. ಈ ಹಾಡು ಈಗ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ಈ ಯುಗಳ ಗೀತೆಗೆ ವಾಣಿ ಹರಿಕೃಷ್ಣ ಮತ್ತು ಅಜಯ ವಾರಿಯರ್ ದನಿಯಾಗಿದ್ದಾರೆ. ತಿಂಗಳ ಹಿಂದೆ ಚಿತ್ರದ ‘ನಾವು ಬಂದೇವಾ’ ಹಾಡು ಬಿಡುಗಡೆಯಾಗಿತ್ತು. ಉತ್ತರ ಕರ್ನಾಟಕದ ಬನಹಟ್ಟಿ ಮೂಲದವರಾದ ಪ್ರೊ.ಬಿ.ಆರ್. ಪೋಲಿಸಪಾಟೀಲ ಅವರ ಸಾಹಿತ್ಯ ಈ ಹಾಡಿಗಿತ್ತು. ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬರುವ ವಲಸಿಗರ ಕುರಿತ ದೇಸಿ ಸೊಗಡಿನ ಪದಗಳ ಈ ಗೀತೆ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಮತ್ತೊಂದು ಭಿನ್ನ ಹಾಡು ರಿಲೀಸ್ ಆಗಿದೆ. ‘ಅಮೃತ ಅಪಾರ್ಟಮೆಂಟ್ಸ್‌’ ರೊಮ್ಯಾಂಟಿಕ್‌ – ಥ್ರಿಲ್ಲರ್ ಸಿನಿಮಾ ಇದೇ ತಿಂಗಳ ಕೊನೆಯ ವಾರದಲ್ಲಿ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here