ಆರ್‌ ಶಂಕರ್‌ ನಿರ್ದೇಶನದಲ್ಲಿ ಕಮಲ ಹಾಸನ್‌ ನಟಿಸಿರುವ ‘ಇಂಡಿಯನ್‌ 2’ ತಮಿಳು ಸಿನಿಮಾದ ‘ಸೌರಾ’ ಹಾಡು ಬಿಡುಗಡೆಯಾಗಿದೆ. ಸುದ್ದಲ ಅಶೋಕ್ ತೇಜ ಸಾಹಿತ್ಯ ಬರೆದಿದ್ದು, ರಿತೇಶ್ ಜಿ ರಾವ್ ಮತ್ತು ಶೃತಿಕಾ ಸಮುದ್ರಾ ಹಾಡಿಗೆ ದನಿಯಾಗಿದ್ದಾರೆ. ಅನಿರುದ್ಧ್ ರವಿಚಂದರ್‌ ಸಂಗೀತ ಸಂಯೋಜನೆ ಹಾಡಿಗಿದೆ.

ಕಮಲ ಹಾಸನ್‌ ನಟನೆಯ ‘ಇಂಡಿಯನ್‌ 2’ ತಮಿಳು ಚಿತ್ರದ ಮೊಲದ ಸಾಂಗ್‌ ‘ಸೌರಾ’ ಬಿಡುಗಡೆಯಾಗಿದೆ. ಈ ಲಿರಿಕಲ್‌ ಸಾಂಗ್‌ನಲ್ಲಿ ನಿರ್ದೇಶಕರು ಕಮಲ್‌ ಪಾತ್ರವನ್ನು ಪರಿಚಯಿಸಿದ್ದಾರೆ. ಅಶೊಕ್‌ ತೇಜ ಸಾಹಿತ್ಯ, ಅನಿರುದ್ಧ್‌ ರವಿಚಂದನ್‌ ಸಂಗೀತ ಸಂಯೋಜಿಸಿರುವ ಹಾಡನ್ನು ರಿತೇಶ್‌ ಜಿ ರಾವ್‌ ಮತ್ತು ಶೃತಿಕಾ ಸಮುದ್ರಾ ಹಾಡಿದ್ದಾರೆ. ದಶಕಗಳ ಹಿಂದೆ ತೆರೆಕಂಡಿದ್ದ ‘ಇಂಡಿಯನ್’ (1996) ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆಯನ್ನು ಒಳಗೊಂಡಿತ್ತು. ಸಿನಿಮಾದಲ್ಲಿ ಕಮಲ್‌ ಹಾಸನ್‌ ದ್ವಿಪಾತ್ರ ನಿಭಾಯಿಸಿದ್ದರು. ‘ಇಂಡಿಯನ್ 2’ 1996ರ ಹಿಟ್ ಸಿನಿಮಾದ ಮುಂದುವರೆದ ಭಾಗವಾಗಿದ್ದು, ಇಲ್ಲಿಯೂ ಕಮಲ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಸೇನಾಪಾತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕತೆಯಿದು. ಕಮಲ್ ಹಾಸನ್ ಜೊತೆಗೆ ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್ , ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೋವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿವರ್ಮನ್ ಹಾಗೂ ರತ್ನವೇಲು ಛಾಯಾಗ್ರಹಣ, ಎ ಶ್ರೀಕರ್ ಪ್ರಸಾದ್ ಸಂಕಲನ ಚಿತ್ರಕ್ಕಿದೆ. ಸುಭಾಸ್ಕರನ್ ಅವರ ಲೈಕಾ ಪ್ರೊಡಕ್ಷನ್ಸ್ ಮತ್ತು ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ನಿರ್ಮಾಣದ ಸಿನಿಮಾ ಜುಲೈ 12ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here