ಆರ್‌ ರವಿಕುಮಾರ್‌ ರಚಿಸಿ, ನಿರ್ದೇಶಿಸಿರುವ ‘ಅಯಲಾನ್‌’ ತಮಿಳು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಶಿವಕಾರ್ತಿಕೇಯನ್‌ ಮತ್ತು ರಾಕುಲ್‌ ಪ್ರೀತ್‌ಸಿಂಗ್‌ ಮುಖ್ಯಭೂಮಿಕೆಯಲ್ಲಿ ನಟಿಸಿದುದ, ಎ ಆರ್‌ ರೆಹಮಾನ್‌ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಶಿವಕಾರ್ತಿಕೇಯನ್ ಮತ್ತು ರಾಕುಲ್‌ ಪ್ರೀತ್‌ ಸಿಂಗ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಫ್ಯಾಂಟಸಿ ಎಂಟರ್‌ಟೇನರ್‌ ‘ಅಯಲಾನ್’ ತಮಿಳು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಈ ವೈಜ್ಞಾನಿಕ ಚಿತ್ರವನ್ನು R ರವಿ ಕುಮಾರ್‌ ಬರೆದು, ನಿರ್ದೇಶಿಸಿದ್ದಾರೆ. A R ರೆಹಮಾನ್‌ ಸಂಗೀತ ಸಂಯೋಜಿಸಿದ್ದಾರೆ. ಸಂಶೋಧನಾ ಕೊಠಡಿಯೊಂದರಲ್ಲಿ ಅಪೋಕ್ಯಾಲಿಪ್ಸ್‌ನ ವೈಜ್ಞಾನಿಕ ಪ್ರಯೋಗ ನಡೆಯುತ್ತಿರುವುದರ ಮೂಲಕ ಟೀಸರ್‌ ಆರಂಭವಾಗುತ್ತದೆ. ‘ಏಕಕಾಲಕ್ಕೆ ಒಂದು ಚೈತನ್ಯ ಮಾತ್ರ ಮೇಲುಗೈಯಾಗಿರುತ್ತದೆ’ ಎಂದು ಸಂಶೋಧಕನೊಬ್ಬ ಹೇಳುತ್ತಾನೆ. ಆ ಸಂಶೋಧನಾ ಕೇಂದ್ರದಲ್ಲಿ ಡೈನೋಸಾರ್ ತರಹದ ದೈತ್ಯ ಜೀವಿಗಳ ಮೊಟ್ಟೆಗಳನ್ನು ಸಹ ಕಂಡುಹಿಡಿದು ಯಶಸ್ವಿಯಾಗಿರುತ್ತಾರೆ. ನಂತರ ಒಂದು ದೊಡ್ಡ ಗಗನನೌಕೆ ಭೂಮಿಯ ಮೇಲೆ ಬಂದಿಳಿಯುತ್ತದೆ. ಅನ್ಯಗ್ರಹದ ಜೀವಿ (Alien) ಅದರಿಂದ ಹೊರಬರುತ್ತದೆ. ಅದು ವಿಶೇಷ ಶಕ್ತಿಗಳನ್ನು ಹೊಂದಿದ್ದು, ವಿಜ್ಞಾನಿಗಳು ಅದರ ವಿರುದ್ಧ ಹೋರಾಡಲು ಪ್ರಯತ್ನಿಸುತ್ತಿರುವಾಗ ಶಿವಕಾರ್ತಿಕೇಯನ್ ಮತ್ತು ಅವನ ಸುತ್ತಲಿನ ಜನರು ಅದರೊಂದಿಗೆ ಸ್ನೇಹ ಬೆಳೆಸಿ ಅದನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡು ಅದರ ರಕ್ಷಣೆಗಾಗಿ ಹೋರಾಡುತ್ತಾರೆ.

24AM Studios ಬ್ಯಾನರ್ ಅಡಿ R D ರಾಜಾ ಈ ಸೈಂಟಿಫಿಕ್‌ – ಫಿಕ್ಷನ್‌ ಸಿನಿಮಾ ನಿರ್ಮಿಸಿದ್ದಾರೆ. ಕರುಣಾಕರನ್, ಯೋಗಿ ಬಾಬು, ಶರದ್ ಕೇಳ್ಕರ್, ಇಶಾ ಕೊಪ್ಪಿಕರ್, ಡೇವಿಡ್ ಬ್ರೌಟನ್, ಬಾನುಪ್ರಿಯಾ, ಬಾಲಸರವಣನ್, ಕೋತಂಡಮ್, ರಾಹುಲ್ ಮಾಧವ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೂಲ ತಮಿಳು ಸೇರಿದಂತೆ ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ 2024ರ ಸಂಕ್ರಾಂತಿಗೆ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here