ನಟ ಶಿವಕಾರ್ತಿಕೇಯನ್‌ ನಿರ್ಮಾಣದ ‘ಕೊಟ್ಟುಕ್ಕಾಲಿ’ ತಮಿಳು ಸಿನಿಮಾ ಬರ್ಲಿನ್ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಪಿ ಎಸ್‌ ವಿನೋತ್‌ ರಾಜ್‌ ನಿರ್ದೇಶಿಸಿರುವ ಚಿತ್ರವಿದು.

ಸೂರಿ ಮತ್ತು ಅನ್ನಾ ಬೆನ್ ಮುಖ್ಯಭೂಮಿಕೆಯಲ್ಲಿರುವ ‘ಕೊಟ್ಟುಕ್ಕಾಲಿ’ ಸಿನಿಮಾ ವಿಶ್ವ ಸಿನಿಮಾ ವಿಭಾಗದಲ್ಲಿ ಆಯ್ಕೆಯಾದ ನಂತರ 74ನೇ ಬರ್ಲಿನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು, ಮೊದಲ ಬಾರಿಗೆ ಈ ಚಿತ್ರೋತ್ಸವದಲ್ಲಿ ಪ್ರದರ್ಶಗೊಂಡ ತಮಿಳು ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಪಿ.ಎಸ್ ವಿನೋತ್‌ರಾಜ್ ನಿರ್ದೇಶಿಸಿದ್ದಾರೆ. ನಟ ಶಿವಕಾರ್ತಿಕೇಯನ್ ನಿರ್ಮಾಣದ ಚಿತ್ರವಿದು. ಶಿವಕಾರ್ತಿಕೇಯನ್‌ ಈ ಬಗ್ಗೆ, ‘ಗೌರವಾನ್ವಿತ ಬರ್ಲಿನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಮ್ಮ ‘ಕೊಟ್ಟುಕ್ಕಾಲಿ’ ವಿಶ್ವ ಪ್ರೀಮಿಯರ್ ಆಗಿದೆ. ಇದು ಅತ್ಯಂತ ಹೆಮ್ಮೆಯ ಸಂಗತಿ’ ಎಂದು ಬರೆದಿದ್ದಾರೆ.https://x.com/Siva_Kartikeyan/status/1735291175899406632?s=20

ಚಿತ್ರವನ್ನು The Little Wave Productions ಬ್ಯಾನರ್‌ ಅಡಿಯಲ್ಲಿ ಶಿವಕಾರ್ತಿಕೇಯನ್ ನಿರ್ಮಿಸಿದ್ದಾರೆ. ಬಿ ಶಕ್ತಿವೇಲ್ ಛಾಯಾಗ್ರಹಣ, ಗಣೇಶ್ ಶಿವ ಚಿತ್ರದ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಸುರೇನ್ ಜಿ ಮತ್ತು ಎಸ್ ಅಳಗಿಯಾ ಕೂತನ್ ಚಿತ್ರದ ಧ್ವನಿ ವಿನ್ಯಾಸಕರು. ಗಣೇಶ್ ಶಿವ ಸಂಕಲನ ನಿರ್ವಹಿಸಿದ್ದಾರೆ. ಪಿ ಎಸ್‌ ವಿನೋತ್ ರಾಜ್‌ ನಿರ್ದೇಶನದ ‘ಕೂಜಂಗಲ್’ ಚಲನಚಿತ್ರವು 94ನೇ ಅಕಾಡೆಮಿ ಅವಾರ್ಡ್ಸ್‌ನಲ್ಲಿ ಭಾರತೀಯ ಚಿತ್ರಗಳ ವಿಭಾಗದಲ್ಲಿ ಪ್ರವೇಶ ಪಡೆದು ‘ಅತ್ಯುತ್ತಮ ಅಂತರಾಷ್ಟ್ರೀಯ ವೈಶಿಷ್ಟ್ಯ ಚಲನಚಿತ್ರ’ವಾಗಿ ಆಯ್ಕೆಯಾಗಿತ್ತು.

LEAVE A REPLY

Connect with

Please enter your comment!
Please enter your name here