ಕಮಲ ಹಾಸನ್‌ ನಟನೆಯ ಬಹುನಿರೀಕ್ಷಿತ ‘ಇಂಡಿಯನ್‌ 2’ ತಮಿಳು ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಪ್ರತಿಭಾವಂತ ಕಲಾವಿದರು, ಭಿನ್ನ ಶೇಡ್‌ಗಳಲ್ಲಿ ಕಮಲ ಹಾಸನ್‌, ಭರಪೂರ ಆಕ್ಷನ್‌ ಸನ್ನಿವೇಶಗಳು ಟ್ರೇಲರ್‌ನಲ್ಲಿ ಕಾಣಿಸುತ್ತವೆ. ಇದೇ ಜುಲೈ 12ರಂದು ಸಿನಿಮಾ ತೆರೆಗೆ ಬರುತ್ತಿದೆ.

ಶಂಕರ್‌ ನಿರ್ದೇಶನದಲ್ಲಿ ಕಮಲ ಹಾಸನ್‌ ಮಹತ್ವಾಕಾಂಕ್ಷೆಯ ಸಿನಿಮಾ ‘ಇಂಡಿಯನ್‌ 2’ ಬಿಡುಗಡೆ ದಿನಗಳು ಹತ್ತಿರವಾಗುತ್ತಿವೆ. ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಕಮಲ್‌ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ಕಮಲ್‌ ಅಲ್ಲದೆ ಸಿದ್ದಾರ್ಥ್‌, ಬಾಬ್ಬಿ ಸಿಂಹ, ಸಮುದ್ರಕನಿ, ನೆಡುಮಡಿ ವೇಣು ಸೇರಿದಂತೆ ಚಿತ್ರದಲ್ಲಿ ಹಲವು ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ. ಕಮಲ ಹಾಸನ್‌ ಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು, ಇದು ಮತ್ತೊಂದು ಆಕ್ಷನ್‌ ಧಮಾಕಾ ಸಿನಿಮಾ ಆಗಲಿದೆ ಎನ್ನುವ ಸೂಚನೆ ನೀಡುತ್ತದೆ ಟ್ರೇಲರ್‌. ಭ್ರಷ್ಟಾಚಾರ, ನಿರುದ್ಯೋಗ, ಅಸಮಾನತೆಯ ಸಮಸ್ಯೆಗಳ ವಿರುದ್ಧ ಕಮಲ್ ಹಾಸನ್ ಸೇನಾಪತಿಯಾಗಿ ಸಮರ ಸಾರಿದ್ದಾರೆ. ಆಕ್ಷನ್ ಸೀಕ್ವೆನ್ಸ್ ಜೊತೆಗೆ ದೇಶಭಕ್ತಿಯ ಕತೆ ಹೇಳುತ್ತಿದ್ದಾರೆ ನಿರ್ದೇಶಕ ಶಂಕರ್‌. ಅನಿರುದ್ಧ್‌ ರವಿಚಂದರ್ ಸಿನಿಮಾಗೆ ಸಂಗೀತ ಸಂಯೋಜಿಸಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ನಿರ್ಮಾಣದ ಸಿನಿಮಾ ಇದೇ ಜುಲೈ 12ರಂದು ಮೂಲ ತಮಿಳು ಸೇರಿದಂತೆ ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here