78ನೇ ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ಗೆ ಇಂದಿನಿಂದ (ಮೇ 13) ಚಾಲನೆ ಸಿಕ್ಕಿದೆ. ರೆಡ್‌ ಕಾರ್ಪೆಟ್‌ ಆಕರ್ಷಣೆ ಜೊತೆ ಈ ಬಾರಿ ನಾಲ್ಕು ಭಾರತೀಯ ಸಿನಿಮಾಗಳು ಚಿತ್ರೋತ್ಸದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಈ ಚಿತ್ರಗಳ ಕುರಿತ ಕಿರುಟಿಪ್ಪಣಿ ಇಲ್ಲಿದೆ.

ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ಗೆ ತನ್ನದೇ ಆದ ಇತಿಹಾಸವಿದೆ. ಈ ಬಾರಿ ಭಾರತದ ನಾಲ್ಕು ಸಿನಿಮಾಗಳು ಸಿನಿಹಬ್ಬದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಜನಪ್ರಿಯ ತಾರೆಯರ ಸಿನಿಮಾ, ದಶಕಗಳ ಹಿಂದಿನ ಕ್ಲಾಸಿಕ್‌, ವಿದ್ಯಾರ್ಥಿಯೊಬ್ಬರು ನಿರ್ದೇಶಿಸಿದ ಕಿರುಚಿತ್ರ ಮತ್ತು ನಿರ್ದೇಶಕರೊಬ್ಬರ ಚೊಚ್ಚಲ ನಿರ್ದೇಶನದ ಸಿನಿಮಾ ಈ ಜಾಗತಿಕ ವೇದಿಕೆಯಲ್ಲಿ ಸ್ಕ್ರೀನ್‌ ಆಗಲಿವೆ. ಹಲವು ಬಾಲಿವುಡ್‌ ತಾರೆಯರು ರೆಡ್‌ ಕಾರ್ಪೆಟ್‌ ಮೇಲೆ ನಡೆದಾಡಿ ಗಮನ ಸೆಳೆಯುತ್ತಿದ್ದಾರೆ. ಕಾನ್ಸ್‌ನಲ್ಲಿ ಪ್ರದರ್ಶನಗೊಳ್ಳುತ್ತಿರುವ ನಾಲ್ಕು ಭಾರತೀಯ ಸಿನಿಮಾಗಳಿವು….

Homebound | ನೀರಜ್‌ ಗಾಯ್ವನ್‌ ನಿರ್ದೇಶನದ ‘ಹೋಮ್‌ ಬೌಂಡ್‌’, ಭರವಸೆಯ ಹಿಂದಿ ಸಿನಿಮಾ. Un Certain Regard ವಿಭಾಗದಲ್ಲಿ ಈ ಸಿನಿಮಾ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಜಾಹ್ನವಿ ಕಪೂರ್‌, ಇಶಾನ್‌ ಖಟ್ಟರ್‌, ವಿಶಾಲ್‌ ಜೇತ್ವಾ ಪ್ರಮುಖ ಪಾತ್ರಗಳಲ್ಲಿರುವ emotional drama ಇದು. ಅಮೆರಿಕದ ಖ್ಯಾತ ಚಿತ್ರನಿರ್ದೇಶಕ Martin Scorsese ಅವರು ಈ ಚಿತ್ರದ ಬಗ್ಗೆ ಮಾತನಾಡಿರುವುದು ವಿಶೇಷ. ಅವರ ಮೆಚ್ಚುಗೆಗೆ ಧನ್ಯವಾದ ಹೇಳಿರುವ ಚಿತ್ರದ ನಟಿ ಜಾಹ್ನವಿ ಕಪೂರ್‌, ‘An honour beyond words. Thank you, @martinscorsese_, for guiding HOMEBOUND with the grace and insight of a true master. Your support means the world to us.’ ಎಂದಿದ್ದಾರೆ.

Aranyer Din Ratri | ಭಾರತೀಯ ಸಿನಿಮಾದ ದಂತಕತೆ ಸತ್ಯಜಿತ್‌ ರೇ ನಿರ್ದೇಶನದ ‘ಅರನ್ಯೆರ್‌ ದಿನ್‌ ರಾತ್ರಿ’ restored version ಕಾನ್ಸ್‌ನಲ್ಲಿ ಪ್ರದರ್ಶನಗೊಳ್ಳುತ್ತಿದೆ. 1970ರಲ್ಲಿ ತೆರೆಕಂಡಿದ್ದ ಬೆಂಗಾಲಿ ಚಿತ್ರವಿದು. ಕಾಡಿನ ಟ್ರಿಪ್‌ಗೆಂದು ತೆರಳುವ ನಗರದ ನಾಲ್ವರು ಸ್ನೇಹಿತರು, ಅಲ್ಲಿ ಅವರು ಎದುರುಗೊಳ್ಳುವ ಅನಿರೀಕ್ಷಿತ ಘಟನಾವಳಿಗಳು ಚಿತ್ರದ ವಸ್ತು. star-stubbed event ನ ವಿಶೇಷ ಸ್ಕ್ರೀನಿಂಗ್‌ನಲ್ಲಿ ಚಿತ್ರದ ನಾಯಕಿ ಶರ್ಮಿಳಾ ಟ್ಯಾಗೂರ್‌ ಇರಲಿದ್ದಾರೆ. ಅಮೆರಿಕ ಚಿತ್ರನಿರ್ದೇಶಕ Wes Anderson, ಹಿಂದಿ ಚಿತ್ರನಟಿ ಸಿಮಿ ಗರೆವಾಲ್‌, ಚಿತ್ರದ ನಿರ್ಮಾಪಕರ ಕುಟುಂಬದಿಂದ ಪೂರ್ಣಿಮಾ ದತ್‌ ಸೇರಿದಂತೆ ಹಲವು ಸೆಲೆಬ್ರಿಟಿಗಳು ಸಿನಿಮಾ ವೀಕ್ಷಿಸಲಿದ್ದಾರೆ. ಈ ಚಿತ್ರದ ಮೂಲಕ ಜಾಗತಿಕ ಸಿನಿಮಾಗೆ ಸತ್ಯಜಿತ್‌ ರೇ ಅವರ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ.

A Doll Made Up Of Clay | ಇಥಿಯೋಪಿಯಾ ಮೂಲದ Kokob Gebrehweria Tesfay ಅವರು ಕೊಲ್ಕತ್ತಾದ ಸತ್ಯಜಿತ್‌ ರೇ ಫಿಲ್ಮ್‌ & ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ ವಿದ್ಯಾರ್ಥಿ. ಇವರು ರಚಿಸಿ – ನಿರ್ದೇಶಿಸಿರುವ A Doll Made Up Of Clay ಕಿರುಚಿತ್ರ, La Cinef ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಯುವ ಮನಸ್ಸುಗಳ perspective ಮತ್ತು ನಿರೂಪಣೆಯನ್ನು ಹೇಳುವ ಕಿರುಚಿತ್ರವನ್ನು ಪರಿಣಿತ ಸಿನಿಮಾ ತಂತ್ರಜ್ಞರು ಮೆಚ್ಚಿ ತಲೆದೂಗಿದ್ದಾರೆ.

Tanvi The Great | ಉತ್ತಮ ಅಭಿನಯದ ಮೂಲಕ ಸಿನಿಪ್ರಿಯರ ಮನಗೆದ್ದಿರುವ ಅನುಪಮ್‌ ಖೇರ್‌ Tanvi The Great ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಈ ಸಿನಿಮಾ ಕಾನ್ಸ್‌ನಲ್ಲಿ ಪ್ರೀಮಿಯರ್‌ ಆಗುತ್ತಿದೆ. ಚಿತ್ರದ ಕತೆ ಏನೆಂಬುದನ್ನು ಅವರು ಬಿಟ್ಟುಕೊಟ್ಟಿಲ್ಲ. ಆದರೆ ಇದೊಂದು ಎಮೋಷನಲ್‌ ಮತ್ತು Inspiring ಜರ್ನಿ ಎಂದಷ್ಟೇ ಹೇಳುತ್ತಾರವರು. Cannes Film Market ವಿಭಾಗದಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ. ಚಿತ್ರದ ನಿರ್ಮಾಪಕರು ಸೋಷಿಯಲ್‌ ಮೀಡಿಯಾದಲ್ಲಿ, ‘WORLD PREMIERE! Global actor @anupampkher’s directorial venture TANVI THE GREAT ready to shine on the world stage! Making its screening debut at the @mdf_cannes, this is more than a moment; it’s the beginning of a global journey’ ಎಂದು ಬರೆದುಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here