ಅಡ್ವೆಂಚರಸ್‌ ಶೋ ‘Ranveer Vs Wild’ ಟೀಸರ್‌ ಬಿಡುಗಡೆಯಾಗಿದೆ. ದಕ್ಷಿಣ ಅಮೆರಿಕದ ಕಾಡಿನಲ್ಲಿ ಸಾಹಸಿಗ ಬೇರ್‌ ಗ್ರಿಲ್ಸ್‌ ಜೊತೆ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಕಾಣಿಸಿಕೊಂಡಿದ್ದಾರೆ. ಕಾಡು ಪ್ರಾಣಿಗಳೊಂದಿಗೆ ಉತ್ಸಾಹದಿಂದ ಮುಖಾಮುಖಿಯಾಗಿರುವ ರಣವೀರ್‌ ಸಾಹಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬ್ರಿಟೀಷ್‌ ಅಡ್ವೆಂಚರರ್‌ ಬೇರ್‌ ಗ್ರಿಲ್ಸ್‌ ಮತ್ತು ಬಾಲಿವುಡ್‌ ನಟ ರಣವೀರ್‌ ಸಿಂಗ್‌ ನೆಟ್‌ಫ್ಲಿಕ್ಸ್‌ ವಿಶೇಷ ಶೋ ‘Ranveer Vs Wild’ ಟೀಸರ್‌ ಬಿಡುಗಡೆಯಾಗಿದೆ. ದಕ್ಷಿಣ ಅಮೆರಿಕದ ಕಾಡಿನಲ್ಲಿ ಕರಡಿ, ತೋಳಗಳೊಂದಿಗಿನ ರಣವೀರ್‌ ಸಿಂಗ್‌ ತಮ್ಮ ಎಂದಿನ ಉತ್ಸಾಹ, ಎನರ್ಜಿಯೊಂದಿಗೆ ಕಾಣಿಸಿಕೊಂಡಿರುವುದು ಟ್ರೈಲರ್‌ನಲ್ಲಿ ಕಂಡುಬರುತ್ತದೆ. “Jungle mein Mangal! Ranveer VS Wild, an interactive special packed with thrilling adventures is COMING SOON on @netflix_in.” ಎಂದು ನಟ ರಣವೀರ್‌ ಇನ್‌ಸ್ಟಾಗ್ರಾಮ್‌ನಲ್ಲಿ ಟೀಸರ್‌ ಹಂಚಿಕೊಂಡಿದ್ದಾರೆ. ಸದ್ಯದಲ್ಲೇ ಈ ಶೋ ಸ್ಟ್ರೀಮ್‌ ಆಗುವ ದಿನಾಂಕ ಘೋಷಣೆಯಾಗಲಿದೆ. ಕಾಡು ಪ್ರಾಣಿಗಳ ಜೊತೆ ಕಾಣಿಸಿಕೊಂಡಿರುವ ರಣವೀರ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೇರ್‌ ಗ್ರಿಲ್ಸ್‌ ಈ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ, ನಟರಾದ ಅಜಯ್‌ ದೇವಗನ್‌, ಅಕ್ಷಯ್‌ ಕುಮಾರ್‌, ರಜನೀಕಾಂತ್‌, ವಿಕ್ಕಿ ಕೌಶಾಲ್‌ ಅವರೊಂದಿಗೆ ಈ ಶೋ ಹೋಸ್ಟ್‌ ಮಾಡಿದ್ದರು.

LEAVE A REPLY

Connect with

Please enter your comment!
Please enter your name here