ಭಾರತದ ಖ್ಯಾತ ಸಂಗೀತ ಸಂಯೋಜಕ ಎ ಆರ್ ರೆಹಮಾನ್ ‘Song Of Hope’ ಶೀರ್ಷಿಕೆಯಡಿ ಹಾಡೊಂದನ್ನು ಸಂಯೋಜಿಸಲಿದ್ದಾರೆ. ‘ನಿಸ್ವಾರ್ಥದಿಂದ ದುಡಿಯುವ ಪ್ರತಿಯೊಬ್ಬರಿಗೂ ಈ ಹಾಡು ಅರ್ಪಣೆ’ ಎನ್ನುತ್ತಾರವರು.
ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎ ಆರ್ ರಹಮಾನ್ ‘Song Of Hope’ (ಭರವಸೆಯ ಹಾಡು) ಘೋಷಿಸಿದ್ದಾರೆ. ಬಹುಮುಖ ಪ್ರತಿಭೆ ಎ ಆರ್ ರೆಹಮಾನ್ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನ 52ನೇ ರಾಷ್ಟ್ರೀಯ ದಿನಾಚರಣೆ ಸಂದರ್ಭದಲ್ಲಿ ಈ ಘೋಷಣೆ ಮಾಡಿದ್ದಾರೆ. ‘Song Of Hope ಹಾಡನ್ನು ನಿಸ್ವಾರ್ಥದಿಂದ ದುಡಿಯುತ್ತಿರುವ ಪ್ರತಿಯೊಬ್ಬರನ್ನೂ ಗೌರವಿಸುವ ಉದ್ದೇಶ ಇಟ್ಟುಕೊಂಡು ರಚಿಸಲಾಗಿದೆ. ಜಗತ್ತಿಗೆ ಭರವಸೆಯ ಅಗತ್ಯವಿದೆ. ಸಂಗೀತ ಮನಸ್ಸಿಗೆ ಶಾಂತಿ, ತಿಳುವಳಿಕೆ ಮತ್ತು ಸಂತೋಷವನ್ನು ತರುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ ರೆಹಮಾನ್.
ಎ ಆರ್ ರೆಹಮಾನ್ ಅವರ ಈ ಹೊಸ ಹಾಡು ಭಾರತೀಯ ವಾಣಿಜ್ಯೋದ್ಯಮಿ ಡಾ ಶಂಶೀರ್ ವಯಾಲಿಲ್ ಮತ್ತು ಅಬುಧಾಬಿ ಮೂಲದ ಬುರ್ಜಿಲ್ ಹೋಲ್ಡಿಂಗ್ಸ್ ಅವರ ಸಹಕಾರಿ ಪ್ರಯತ್ನದ ಫಲವಾಗಿದೆ. ‘ಸಿಂಗಿಂಗ್ ಫಾರ್ ದಿ ಚಿಲ್ಡ್ರನ್ ಆಫ್ ಝಾಯೆದ್’ ಶೀರ್ಷಿಕೆಯ ಈ ಕಾರ್ಯಕ್ರಮ UAEಯ ಪಿತಾಮಹ ಶೇಖ್ ಜಾಯೆದ್ ಅವರ ಬೋಧನೆಗಳಿಗೆ ಗೌರವ ಸಲ್ಲಿಸಿದೆ. ಅವರು ‘ಭವಿಷ್ಯದ ಮಕ್ಕಳೇ ದೇಶದ ಶಕ್ತಿ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕಾರ್ಯಕ್ರಮವು ರೆಹಮಾನ್ ಮಾರ್ಗದರ್ಶನದಲ್ಲಿ 29 ರಾಷ್ಟ್ರಗಳ 52 ಸದಸ್ಯರನ್ನು ಒಳಗೊಂಡಿತ್ತು. ಕಾರ್ಯಕ್ರಮದಲ್ಲಿ ಯುಎಇ ರಾಷ್ಟ್ರಗೀತೆಯ ನಿರೂಪಣೆಯ ನಂತರ, ಸಂಗೀತಗಾರರು ‘ಡ್ಯಾನ್ಸ್’, ‘ಬರೊಕ್ ಫ್ಲಮೆಂಕೊ’, ‘ಔರ್ಜಾಜೇಟ್’, ‘ಎಕ್ಸ್ಟಸಿ ಆಫ್ ಗೋಲ್ಡ್’, ‘ಸ್ಪಿರಿಟ್ ಆಫ್ ರಂಗೀಲಾ’ ಸೇರಿದಂತೆ ವಿಶೇಷವಾಗಿ ಸಂಗ್ರಹಿಸಲಾದ ಹಾಡುಗಳನ್ನು ಪ್ರದರ್ಶಿಸಿದ್ದಾರೆ.