‘ಅನಿರೀಕ್ಷಿತ’ ಚಿತ್ರದ ಛಾಯಾಗ್ರಾಹಣಕ್ಕಾಗಿ ಜೀವನ್ ಗೌಡ ಅವರಿಗೆ ಕೇರಳದ 7ನೇ ಆರ್ಟ್ ಇಂಡಿಪೆಂಡೆಂಟ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಹಾಗೂ ಅಮೇರಿಕಾದ ನ್ಯೂ ಜೆರ್ಸಿಯಲ್ಲಿ ನಡೆದ ಸ್ಟಾರ್ ಹಾಲಿವುಡ್ ಅವಾರ್ಡ್ಸ್ ಅಂತರರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಲಭಿಸಿದೆ.
ಸಿನಿಮಾದ ಛಾಯಾಗ್ರಾಹಕರನ್ನು ಸಿನಿಮಾದ ಕಣ್ಣು ಎಂದು ಹೇಳಲಾಗುತ್ತದೆ. ಅಲ್ಲದೆ ಛಾಯಾಗ್ರಾಹಕನನ್ನು ಚಿತ್ರದ ಎರಡನೇ ನಿರ್ದೇಶಕ ಎಂದೂ ಕೆಲವರು ಕರೆಯೋದುಂಟು. ಚಿತ್ರದ ನಿರ್ದೇಶಕ ಮತ್ತು ಛಾಯಾಗ್ರಾಹಕರ ನಡುವೆ ಒಳ್ಳೆಯ ಹೊಂದಾಣಿಕೆ ಇದ್ದರೆ ಸಿನಿಮಾ ಚೆನ್ನಾಗಿ ಬರುತ್ತೆ ಅನ್ನೋ ನಂಬಿಕೆಯೂ ಸಿನಿಮಾರಂಗದಲ್ಲಿದೆ. ಇಷ್ಟೆಲ್ಲ ಯಾಕೆ ಹೇಳಬೇಕಾಯಿತು ಅಂದರೆ ಪ್ರತೀ ಸಿನಿಮಾಗಳಿಗೆ ಛಾಯಾಗ್ರಹಣ ಎಂಬುದು ತುಂಬಾ ಜವಾಬ್ದಾರಿಯ ವಿಭಾಗ. ಅದನ್ನು ನಿಭಾಯಿಸುವುದರ ಜೊತೆಗೆ ಬೆಳಕು ಮತ್ತು ಕತ್ತಲಿನ ನಡುವೆ ಹೊಂದಾಣಿಕೆ ತೋರಿಸಿ, ಜನರಿಗೆ ವಿಶೇಷ ಎನ್ನಿಸುವಂತೆ ಮಾಡೋದು ಛಾಯಾಗ್ರಾಹಕನ ಕೈಚಳಕ. ಎಸ್.ಕೆ. ಟಾಕೀಸ್ ಬ್ಯಾನರ್ ಅಡಿಯಲ್ಲಿ, ಹಿರಿಯ ನಟ ಮತ್ತು ಮಿಮಿಕ್ರಿ ಕಲಾವಿದ ದಯಾನಂದ್ ಅವರು ಮೊಟ್ಟಮೊದಲ ಬಾರಿಗೆ ನಿರ್ದೇಶಿಸಿ, ನಟಿಸಿರುವ, ಸಂತೋಷ್ ಕೊಡೆಂಕಿರಿಯವರ ಕ್ರಿಯೇಟಿವ್ ಡೈರೆಕ್ಷನ್ ಇರುವ, ‘ಅನಿರೀಕ್ಷಿತ’ ಕನ್ನಡ ಚಿತ್ರಕ್ಕೆ ಈಗ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಬಂದಿದೆ.
ಛಾಯಾಗ್ರಾಹಕರಾದ ಜೀವನ್ ಗೌಡ ಅವರಿಗೆ ಕೇರಳದ 7ನೇಆರ್ಟ್ ಇಂಡಿಪೆಂಡೆಂಟ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಹಾಗೂ ಅಮೇರಿಕಾದ ನ್ಯೂ ಜೆರ್ಸಿಯಲ್ಲಿ ನಡೆದ ಸ್ಟಾರ್ ಹಾಲಿವುಡ್ ಅವಾರ್ಡ್ಸ್ ಅಂತರರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಬಂದಿದೆ. ಈ ಚಿತ್ರಕ್ಕೆ ಗುರುಕಿರಣ್ ಸಂಗೀತ, ನೆಲ್ಲೋಲಿ ರಾಜಶೇಖರ್ ಸಂಭಾಷಣೆ, ರಘು ಅವರ ಸಂಕಲನ ಇದೆ. ವಿಶೇಷ ಎಂದರೆ ಕಳೆದ ವರ್ಷ ಮತ್ತು ಈ ವರ್ಷದ ಲಾಕ್‌ಡೌನ್‌ನಲ್ಲಿ ಎಲ್ಲರೂ ಸುಮ್ಮನೆ ಖಾಲಿ ಕೂತಿದ್ದರೆ, ಹೆಚ್ಚಾಗಿ ಮನೆಯೊಳಗೇ ನಡೆಯುವ ಕಥಾವಸ್ತು ಇರೋ ಸಬ್ಜೆಕ್ಟ್ ತೆಗೆದುಕೊಂಡು ಈ ತಂಡ ಲಾಕ್ ಡೌನ್ ಸಂದರ್ಭದಲ್ಲಿ ಈ ಸಿನಿಮಾ ಮಾಡಿದೆ. ಅಷ್ಟೂ ದಿನಗಳಲ್ಲಿ ಕೇವಲ 13 ತಂತ್ರಜ್ಞರು ಸೇರಿ ಮಾಡಿದ ‘ಅನಿರೀಕ್ಷಿತ’ ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಲಿದೆ.
Hi