ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ 35ನೇ ಚಿತ್ರ ‘ಮಾಫಿಯಾ’ ನವೆಂಬರ್ ಒಂದರಿಂದ ಚಿತ್ರೀಕರಣ ಶುರು ಮಾಡಲಿದೆ. ಈ ಚಿತ್ರವನ್ನು ‘ಮಮ್ಮಿ’ ಸಿನಿಮಾ ಖ್ಯಾತಿಯ ಲೋಹಿತ್ ನಿರ್ದೇಶಿಸುತ್ತಿದ್ದಾರೆ.

‘ಇನ್ಸ್ಪೆಕ್ಟರ್ ವಿಕ್ರಂ’ ಚಿತ್ರದ ನಂತರ ಮತ್ತೊಮ್ಮೆ ಪೊಲೀಸ್ ಆಫೀಸರ್ ಪಾತ್ರದಲ್ಲಿ ಖಾಕಿ ಧರಿಸಲಿದ್ದಾರೆ ಪ್ರಜ್ವಲ್ ದೇವರಾಜ್. ಮಫ್ತಿಯಲ್ಲಿರುವ ಪೊಲೀಸ್ ಆಗಿದ್ದರೂ ಈತ ಹೇಗೆ ಮಾಫಿಯಾದ ಕರಾಳ ಜಗತ್ತಿನ ಕಬಂಧ ಬಾಹುಗಳಲ್ಲಿ ಸಿಕ್ಕಿಬೀಳುತ್ತಾನೆ. ಮತ್ತು ಅದರಿಂದ ಹೇಗೆ ಹೊರಬರುತ್ತಾನೆ ಅನ್ನೋದು ಚಿತ್ರದ ತಿರುಳು. ಈ ಹಿಂದೆ ನಟ ಶಿವರಾಜ್ ಕುಮಾರ್ ಈ ಚಿತ್ರದ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದರು. ಅಂದಹಾಗೆ ಈ ಚಿತ್ರ ತಮಿಳಿನಲ್ಲೂ ನಿರ್ಮಾಣವಾಗಲಿದ್ದು ತಮಿಳು ಚಿತ್ರದ ಪೋಸ್ಟರ್ ಅನ್ನು ನಟ ಆರ್ಯ ಮತ್ತು ವಿಜಯ್ ಸೇತುಪತಿ ಬಿಡುಗಡೆ ಮಾಡಿದ್ದರು. ಇದಕ್ಕೂ ಮೊದಲು ಈ ಚಿತ್ರವನ್ನು ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ನಿರ್ದೇಶಕ ಗುರುದತ್ ಗಾಣಿಗ ನಿರ್ದೇಶನ ಮಾಡಬೇಕಿತ್ತು. ಆದರೆ ಈಗ ಈ ಅವಕಾಶ ಲೋಹಿತ್ ಅವರ ಪಾಲಾಗಿದೆ.

ನವಂಬರ್ 1 ರಿಂದ ‘ಮಾಫಿಯಾ’ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಮೈಸೂರು ಮತ್ತು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರದ ಪ್ರಮುಖ ದೃಶ್ಯಗಳು ಮತ್ತು ಕ್ಲೈಮ್ಯಾಕ್ಸ್ ಸೇರಿದಂತೆ ಚಿತ್ರದ ಶೇಕಡಾ 35ರಷ್ಟು ಚಿತ್ರೀಕರಣ ಇದೇ ರಾಮೋಜಿ ರಾವ್ ಸ್ಟುಡಿಯೋದಲ್ಲಿ ನಡೆಯಲಿದೆ. ಪ್ರಜ್ವಲ್ ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಲಿದ್ದಾರೆ. ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ. ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ಜೆಬಿನ್ ಜಾಕಬ್ ಈ ಚಿತ್ರದ ಛಾಯಾಗ್ರಹಕರು.

Previous article‘ಅನಿರೀಕ್ಷಿತ’ ಪ್ರಶಸ್ತಿ; ಜೀವನ್ ಗೌಡ ಅತ್ಯುತ್ತಮ ಛಾಯಾಗ್ರಾಹಕ
Next articleಬಾಲಿವುಡ್ ಸ್ಟಾರ್‌ಗಳ ಪತ್ನಿಯರು ಕೊಕೇನ್ ಸೇವಿಸುತ್ತಿದ್ದರು!; ನಟಿ, ಮಾಡೆಲ್ ಶೆರ್ಲಿನ್ ಚೋಪ್ರಾ ಹೇಳಿಕೆ

LEAVE A REPLY

Connect withPlease enter your comment!
Please enter your name here