KRG Studios ಮತ್ತು TVF ಮೋಷನ್‌ ಪಿಕ್ಚರ್ಸ್‌ ಸಹಯೋಗದ ಮೊದಲ ಕನ್ನಡ ಸಿನಿಮಾ ‘ಪೌಡರ್‌’ ಟೀಸರ್‌ ಬಿಡುಗಡೆಯಾಗಿದೆ. ಜನಾರ್ಧನ್‌ ಚಿಕ್ಕಣ್ಣ ನಿರ್ದೇಶನದ ಈ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಕಾಮಿಡಿ ಸಿನಿಮಾ ಎನ್ನುವ ಸೂಚನೆ ಕೊಡುವ ಸಿನಿಮಾ ಜುಲೈ 12ರಂದು ತೆರೆಕಾಣಲಿದೆ.

ಜನಾರ್ಧನ್‌ ಚಿಕ್ಕಣ್ಣ ನಿರ್ದೇಶನದ ‘ಪೌಡರ್‌’ ಸಿನಿಮಾದ ಚಿತ್ರೀಕರಣ ಸದ್ದಿಲ್ಲದೆ ಪೂರ್ಣಗೊಂಡಿದ್ದು, ಟೀಸರ್‌ ಬಿಡುಗಡೆಯಾಗಿದೆ. ಇಬ್ಬರು ಯುವಕರು ಒಂದು ನಿಗೂಢವಾದ ಪೌಡರ್‌ ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಚಿತ್ರದ ವಸ್ತು. ಯುವಕರು ಈ ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ? ಅವರ ಎಲ್ಲಾ ಕನಸುಗಳು ನನಸಾಗುವುವೇ? ಪೌಡರ್‌ ಹಿಂದಿನ ಪವರ್‌ ಅವರಿಗೆ ತಿಳಿಯುವುದೇ? ಈ ಪ್ರಶ್ನೆಗಳಿಗೆ ಉತ್ತರ ಪಡೆಯಲು ಜುಲೈ 12ರಂದು ತೆರೆಕಾಣಲಿರುವ ಸಿನಿಮಾ ವೀಕ್ಷಿಸಬೇಕು. ಟ್ರೇಲರ್‌ ಕೂಡ ಸಾಕಷ್ಟು ಎನರ್ಜಟಿಕ್‌ ಆಗಿದ್ದು, ಭರಪೂರ ಕಾಮಿಡಿ ಸೀನ್‌ಗಳು ಚಿತ್ರದಲ್ಲಿರುವ ಸೂಚನೆ ನೀಡುತ್ತದೆ.

KRG Studios ಮತ್ತು TVF ಮೋಷನ್‌ ಪಿಕ್ಚರ್ಸ್‌ ಸಹಯೋಗದಲ್ಲಿ ತಯಾರಾಗಿರುವ ಮೊದಲ ಚಿತ್ರವಿದು. TVF ಮೋಷನ್‌ ಪಿಕ್ಚರ್ಸ್‌ನ ಅರ್ನಭ್‌ ಕುಮಾರ್‌ ಮಾತನಾಡಿ, ‘ಯುವ ಸಿನಿಪ್ರೇಕ್ಷಕರಿಗೆ ಹೊಸ ರೀತಿಯ ಕಥೆಗಳನ್ನು, ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಚಿತ್ರಗಳನ್ನು ನೀಡುವುದು ನಮ್ಮ ಮುಖ್ಯ ಗುರಿ. ಈ ನಿಟ್ಟಿನಲ್ಲಿ ಪೌಡರ್ ಸಿನಿಮಾ KRG Studios ಜೊತೆ ನಮ್ಮ ಸಹಯೋಗದ ಚೊಚ್ಚಲ ಪ್ರಯತ್ನ. ಚಿತ್ರವನ್ನು ನೋಡಿ ಪ್ರೇಕ್ಷಕರು ತಮ್ಮ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ ಎಂಬ ಭರವಸೆ ನಮಗಿದೆ. ಮುಂಬರುವ ದಿನಗಳಲ್ಲಿ ಇದೇ ರೀತಿಯ ಇನ್ನಷ್ಟು ವಿಭಿನ್ನ ಕಥೆಗಳನ್ನು ಈ ಸಹಯೋಗದ ಮೂಲಕ ಮುಂದಿಡಲು ಬಯಸುತ್ತೇವೆ’ ಎಂದಿದ್ದಾರೆ. ಅವರ ಬ್ಯಾನರ್‌ನಡಿ ಈ ಹಿಂದೆ ಮಡ್ಗಾನ್‌ ಎಕ್ಸ್‌ಪ್ರೆಸ್‌, ಫುಕ್ರೇ, ಗೋ ಗೋವಾ ಗಾನ್‌, ಡೆಲ್ಲಿ ಬೆಲ್ಲಿ ಸೇರಿದಂತೆ ಹಲವು ಹಾಸ್ಯ ಪ್ರಧಾನ ಹಿಂದಿ ಸಿನಿಮಾಗಳು ತಯಾರಾಗಿವೆ.

LEAVE A REPLY

Connect with

Please enter your comment!
Please enter your name here