‘ಡಿಯರ್‌ ಸತ್ಯ’ ಚಿತ್ರದ ನಂತರ ನಟ ಆರ್ಯನ್‌ ತೆರೆಗೆ ಮರಳುತ್ತಿದ್ದಾರೆ. ಅವರ ನೂತನ ಸಿನಿಮಾ ‘ದಿ ಭವಾನಿ ಫೈಲ್ಸ್‌’ ಪೋಸ್ಟರ್‌ ಅನ್ನು ಅಶ್ವಿನಿ ಪುನೀತ್‌ ರಾಜಕುಮಾರ್‌ ಬಿಡುಗಡೆಗೊಳಿಸಿದರು. ಹೀರೋ ಆರ್ಯನ್‌ ಈ ಸಿನಿಮಾದ ಕ್ರಿಯೇಟಿವ್‌ ಡೈರೆಕ್ಟರ್‌ ಆಗಿಯೂ ಕೆಲಸ ಮಾಡಲಿದ್ದಾರೆ.

‘ನೂರೂ ಜನ್ಮಕೂ’ ಸಿನಿಮಾ ಖ್ಯಾತಿಯ ಆರ್ಯನ್‌ಗೆ ಬೆಳ್ಳಿತೆರೆಯಲ್ಲಿ ನಿರೀಕ್ಷಿತ ಗೆಲುವು ಸಿಗುತ್ತಿಲ್ಲ. ಕಳೆದ ವರ್ಷ ತೆರೆಕಂಡ ಅವರ ‘ಡಿಯರ್‌ ಸತ್ಯ’ ಚಿತ್ರ ಅವರ ಕೈಹಿಡಿಯಲಿಲ್ಲ. ಮೇಕಿಂಗ್‌ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದರೂ ದೊಡ್ಡ ಸಂಖ್ಯೆಯಲ್ಲಿ ಜನರು ಈ ಸಿನಿಮಾ ನೋಡಲಿಲ್ಲ. ಮರಳಿ ಯತ್ನವ ಮಾಡು ಎನ್ನುವ ಹಾಗೆ ಆರ್ಯನ್‌ ಹೊಸ ಚಿತ್ರದೊಂದಿಗೆ ತೆರೆಗೆ ಮರಳುತ್ತಿದ್ದಾರೆ. ಇಂದು ಚಿತ್ರನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರು ಆರ್ಯನ್‌ ನೂತನ ಸಿನಿಮಾ ‘ದಿ ಭವಾನಿ ಫೈಲ್ಸ್‌’ ಫಸ್ಟ್‌ಲುಕ್‌ ಅನಾವರಣಗೊಳಿಸಿ ಶುಭಹಾರೈಸಿದರು.

ಚಿತ್ರದ ಹೀರೋ ಆಗಿ ನಟಿಸುತ್ತಿರುವ ಆರ್ಯನ್‌ ಈ ಬಾರಿ ಕ್ರಿಯೇಟಿವ್‌ ಡೈರೆಕ್ಟರ್‌ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆದಿದ್ದು ಮುಂದಿನ ತಿಂಗಳು ಫಸ್ಟ್ ಲುಕ್ ಲಾಂಚ್ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿಕೊಂಡಿದೆ. 14ನೇ ಶತಮಾನದ ‘ದಿ ಭವಾನಿ ಫೈಲ್ಸ್’ ಕಥೆಯನ್ನು ಆರ್ಯನ್ ತಮ್ಮ ಸ್ನೇಹಿತರ ಜೊತೆಗೂಡಿ ನಿರ್ದೇಶಿಸುತ್ತಿದ್ದಾರೆ. ಮೋಹನ್ ಮೆನನ್, ಜೇಕಬ್ ವರ್ಗೀಸ್ ಹಾಗೂ ಆರ್ಯನ್ ಸಿನಿಮಾಗೆ ಚಿತ್ರಕಥೆ ಬರೆದಿದ್ದು, ಚೇತನ್ ಡಿಕ್ರೋಸ್ ಸ್ಟಂಟ್, ಜೋ ಕೋಸ್ಟ್ ಸಂಗೀತ ಸಂಯೋಜಿಸಿದ್ದಾರೆ. ವೈಟ್ ಹಾರ್ಸ್ ಪ್ರೊಡಕ್ಷನ್ ಮತ್ತು ವಿಂಟರ್‌ ಬ್ರಿಡ್ಜ್‌ ಸ್ಟುಡಿಯೋಸ್‌ ಜೊತೆಗೂಡಿ ಸಿನಿಮಾ ನಿರ್ಮಿಸುತ್ತಿವೆ. ಇತರೆ ಕಲಾವಿದರು ಹಾಗೂ ತಂತ್ರಜ್ಞರ ಕುರಿತು ಚಿತ್ರತಂಡ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಿದೆ.

Previous articleಪ್ರತಿಷ್ಠಿತ ಅಂತಾರಾಷ್ಟ್ರೀಯ ಸ್ಪರ್ಧೆ ‘Miss World – 2023’ಗೆ ಸಾಕ್ಷಿಯಾಗಲಿದೆ ಭಾರತ
Next article‘ಗುಂಟೂರ್‌ ಕಾರಂ’ ಶ್ರೀಲೀಲಾ ಫಸ್ಟ್‌ಲುಕ್‌ | ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಕನ್ನಡತಿ

LEAVE A REPLY

Connect with

Please enter your comment!
Please enter your name here