ಅವಿನಾಶ್‌ ತಿವಾರಿ ನಟನೆಯ ‘ಕಾಲಾ’ ಆಕ್ಷನ್‌ ಕ್ರೈಂ ಥ್ರಿಲ್ಲರ್‌ ವೆಬ್‌ ಸರಣಿಯ ಟೀಸರ್‌ ಬಿಡುಗಡೆಯಾಗಿದೆ. ಬಿಜೋ ನಂಬಿಯಾರ್‌ ನಿರ್ದೇಶನದ ಸರಣಿ Disneyplus Hotstarನಲ್ಲಿ ಸೆಪ್ಟೆಂಬರ್‌ 15ರಿಂದ ಸ್ಟ್ರೀಮ್‌ ಆಗಲಿದೆ.

ಬಿಜೋಯ್‌ ನಂಬಿಯಾರ್‌ ನಿರ್ದೇಶನದ ‘ಕಾಲಾ’ ಆಕ್ಷನ್‌ ಕ್ರೈಮ್ ಥ್ರಿಲ್ಲರ್ ವೆಬ್‌ ಸರಣಿಯ ಟೀಸರ್‌ ಬಿಡುಗಡೆಯಾಗಿದೆ. ಅವಿನಾಶ್ ತಿವಾರಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸರಣಿ ಅಪರಾಧ, ಅಧಿಕಾರ, ದ್ರೋಹದ ಭೂಗತ ಜಗತ್ತಿನ ಭಯಾನಕ ಅಂಶಗಳನ್ನು ತೆರೆದಿಡಲಿದೆ. Edge of the seat ಕಂಟೆಂಟ್‌ ಇದು ಎನ್ನುತ್ತಾರೆ ನಿರ್ದೇಶಕರು. ಇದು IB (Intelligence Bureau) ಅಧಿಕಾರಿಯ ಕಥೆಯನ್ನು ಹೇಳಲಿದೆ. ಕ್ರಿಮಿನಲ್ ಭೂಗತ ಜಗತ್ತಿನ ಆಳದಲ್ಲಿ ಹುದುಗಿರುವ ಅಪಾಯಕಾರಿ ಕ್ರಿಮಿನಲ್‌ಗಳ ಯೋಜನೆಯನ್ನು ಭಗ್ನಗೊಳಿಸುವ ಅಧಿಕಾರಿಯ ಸಾಹಸವನ್ನು ಟೀಸರ್‌ನಲ್ಲಿ ತೋರಿಸಲಾಗಿದೆ. ಸರಣಿಯ ಸೃಷ್ಟಿಕರ್ತ ಬಿಜೋಯ್‌ ”ಹಣ ಜಗತ್ತನ್ನು ಆಳುತ್ತದೆ. ‘ಕಾಲಾ’ದ ನೆರಳಿನಲ್ಲಿ ಅದರ ರಹಸ್ಯ ಅಡಗಿದೆ” ಎಂದಿದ್ದಾರೆ. ರೋಹನ್ ವಿನೋದ್ ಮೆಹ್ರಾ, ನಿವೇತಾ ಪೇತುರಾಜ್, ತಾಹೆರ್ ಶಬ್ಬೀರ್, ಹಿತೇನ್ ತೇಜ್ವಾನಿ ಸರಣಿಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. T-Series ನಿರ್ಮಿಸಿರುವ ಈ ಸರಣಿಯು 2023ರ ಸೆಪ್ಟೆಂಬರ್ 15ರಿಂದ Disney+ Hotstarನಲ್ಲಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here