ಜಿಯೋ ಬೇಬಿ ನಿರ್ದೇಶನದ ‘ಕಾದಲ್ – ದಿ ಕೋರ್’ ಮಲಯಾಳಂ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಮಮ್ಮೂಟಿ ಮತ್ತು ಜ್ಯೋತಿಕಾ ಅಭಿನಯದ ಕೋರ್ಟ್‌ – ಡ್ರಾಮಾ ಜಾನರ್‌ ಸಿನಿಮಾ ಇದೇ ನವೆಂಬರ್‌ 23ರಂದು ತೆರೆಗೆ ಬರುತ್ತಿದೆ.

ಮಮ್ಮೂಟಿ ಮತ್ತು ಜ್ಯೋತಿಕಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಕೋರ್ಟ್‌ – ಡ್ರಾಮಾ ‘ಕಾದಲ್ – ದಿ ಕೋರ್’ ಮಲಯಾಳಂ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ‘ದಿ ಗ್ರೇಟ್ ಇಂಡಿಯನ್ ಕಿಚನ್’ ಸಿನಿಮಾ ಖ್ಯಾತಿಯ ಜಿಯೋ ಬೇಬಿ (Jeo Baby) ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಟ್ರೇಲರ್‌, ಮಧ್ಯವಯಸ್ಕ ದಂಪತಿಗಳಾದ ಮ್ಯಾಥ್ಯೂ ದೇವಸ್ಸಿ (ಮಮ್ಮುಟ್ಟಿ) ಮತ್ತು ಓಮನಾ (ಜ್ಯೋತಿಕಾ) ಅವರ ಮಾತುಕತೆಯ ಸುತ್ತ ಸುತ್ತುತ್ತದೆ. ಯಾವುದೋ ರಾಜಕೀಯ ಗಲಭೆಯಲ್ಲಿ ಮ್ಯಾಥ್ಯೂ ದೇವಸ್ಸಿ ಸಿಲುಕಿಕೊಂಡಿರುತ್ತಾನೆ. ಇದರಿಂದ ದಂಪತಿಗಳ ಮಧ್ಯೆ ಅಂತವೇರ್ಪಟ್ಟಿರುತ್ತದೆ. ಈ ಕಾರಣದಿಂದ ಒಬ್ಬರಿಗೊಬ್ಬರು ಮಾತು ಬಿಟ್ಟಿರುತ್ತಾರೆ.

ಸಿನಿಮಾಗೆ ಆದರ್ಶ್ ಸುಕುಮಾರನ್ ಮತ್ತು ಪಾಲ್ಸನ್ ಸ್ಕಾರಿಯಾ ಚಿತ್ರಕಥೆ ರಚಿಸಿದ್ದು, ಚಿತ್ರದಲ್ಲಿ ಲಾಲು ಅಲೆಕ್ಸ್, ಮುತ್ತುಮಣಿ, ಚಿನ್ನು ಚಾಂದಿನಿ, ಸುಧಿ ಕೋಝಿಕ್ಕೋಡ್, ಅನಘಾ ಅಕ್ಕು, ಜೋಸಿ ಸಿಜೋ ಮತ್ತು ಆದರ್ಶ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. Mammootty Kampany ಬ್ಯಾನರ್‌ ಅಡಿಯಲ್ಲಿ ಚಿತ್ರ ನಿರ್ಮಿಸಲಾಗಿದೆ. ಸಾಲು ಕೆ ಥಾಮಸ್ ಛಾಯಾಗ್ರಹಣ, ಫ್ರಾನ್ಸಿಸ್ ಲೂಯಿಸ್ ಸಂಕಲನ, ಮ್ಯಾಥ್ಯೂಸ್ ಪುಲಿಕನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಈ ತಂಡ ಜಿಯೋ ಅವರ ‘ದಿ ಗ್ರೇಟ್ ಇಂಡಿಯನ್ ಕಿಚನ್‌’ ಚಿತ್ರದಲ್ಲಿಯೂ ಕಾರ್ಯನಿರ್ವಹಿಸಿದೆ. ಇದೇ ನವೆಂಬರ್‌ 23ರಂದು ಸಿನಿಮಾ ತೆರೆಕಾಣುತ್ತಿದೆ.

LEAVE A REPLY

Connect with

Please enter your comment!
Please enter your name here