ನಟ ಕಮಲ ಹಾಸನ್‌ ತಮ್ಮ Raaj Kamal Films International ಯೂಟ್ಯೂಬ್‌ ಚಾನೆಲ್‌ನಲ್ಲಿ ತಾವು ನಟಿಸಿ, ನಿರ್ಮಿಸಿ, ನಿರ್ದೇಶಿಸಿದ್ದ ‘ಹೇ ರಾಮ್‌’ ತಮಿಳು – ಹಿಂದಿ ದ್ವಿಭಾಷಾ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಕಮಲ್‌ ತಮ್ಮ ರಾಜ್‌ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಬ್ಯಾನರ್‌ನಡಿ ಈ ಚಿತ್ರ ನಿರ್ಮಿಸಿದ್ದರು. ಚಿತ್ರದ ಪ್ರಮುಖ ಪಾತ್ರದಲ್ಲಿ ಶಾರುಖ್‌ ಖಾನ್‌ ನಟಿಸಿದ್ದಾರೆ.

ಮಹಾತ್ಮಾ ಗಾಂಧಿ ತತ್ವಾದರ್ಶಗಳ ಹಿನ್ನೆಲೆಯ ಕಥಾಹಂದರದ ‘ಹೇ ರಾಮ್‌’ ತಮಿಳು – ಹಿಂದಿ ದ್ವಿಭಾಷಾ ಸಿನಿಮಾ ಇದೀಗ ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಕಮಲ ಹಾಸನ್‌ ನಟಿಸಿ, ನಿರ್ಮಿಸಿ, ನಿರ್ದೇಶಿಸಿದ್ದ ಚಿತ್ರವಿದು. ಸ್ವಾಂತ್ರ್ಯೋತ್ಸವದ ಅಂಗವಾಗಿ ಕಮಲ್‌ ತಮ್ಮ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್‌ YouTube ಚಾನಲ್‌ನಲ್ಲಿ ಚಿತ್ರವನ್ನು ಮರುಬಿಡುಗಡೆ ಮಾಡಿದ್ದಾರೆ. ‘ಹೇ ರಾಮ್’ ಚಿತ್ರವು ಭಾರತದ ವಿಭಜನೆ ಮತ್ತು ನಾಥೂರಾಮ್ ಗೋಡ್ಸೆಯಿಂದ ಆದ ಮಹಾತ್ಮ ಗಾಂಧಿಯವರ ಹತ್ಯೆಯ ಪರ್ಯಾಯ ಇತಿಹಾಸವನ್ನು ಬಿಚ್ಚಿಡುತ್ತದೆ. ಕಮಲ್ ಹಾಸನ್ ಅವರು ಸಾಕೇತ್ ರಾಮ್ ಪಾತ್ರದಲ್ಲಿ ನಟಿಸಿದ್ದಾರೆ. ಬಾಪುವನ್ನು ಹತ್ಯೆ ಮಾಡಲು ಸಾಕೇತ್‌ ರಾಮ್‌ ಯೋಜನೆ ರೂಪಿಸುತ್ತಾನೆ. ಆದರೆ ಬಾಪುವಿನ ಪ್ರೀತಿ ಮತ್ತು ಅಹಿಂಸಾ ಮನೋಭಾವದ ಬೋಧನೆಗಳ ಬಗ್ಗೆ ತಿಳಿದುಕೊಂಡಾಗ ಆ ನಿರ್ಧಾರದಿಂದ ಹಿಂದೆ ಸರಿಯುತ್ತಾನೆ. ಆದರೆ ನಾಥೂರಾಂ ಗೋಡ್ಸೆ ಗಾಂಧೀಜಿಯನ್ನು ಹತ್ಯೆ ಮಾಡುತ್ತಾನೆ. ಈ ವಿಷಯದ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಮಾಹಿತಿ ಹಂಚಿಕೊಂಡ ಕಮಲ್‌, ‘ಬಾಪು ಗೌರವಾರ್ಥವಾಗಿ ಚಿತ್ರವನ್ನು ಮರುಬಿಡುಗಡೆ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಶಾರುಖ್ ಖಾನ್, ಹೇಮಾ ಮಾಲಿನಿ, ರಾಣಿ ಮುಖರ್ಜಿ, ಗಿರೀಶ್ ಕಾರ್ನಾಡ್, ನಾಸಿರುದ್ದೀನ್ ಶಾ, ಓಂ ಪುರಿ, ವಿಕ್ರಮ್ ಗೋಖಲೆ, ಸೌರಭ್ ಶುಕ್ಲಾ, ನಾಸರ್, ವಸುಂಧರಾ ದಾಸ್, ಅಬ್ಬಾಸ್, ಅತುಲ್ ಕುಲಕರ್ಣಿ, ಸೌಕಾರ್ ಜಾನಕಿ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇಳಯರಾಜ ಸಂಗೀತ ಸಂಯೋಜನೆ, ರೇಣು ಸಲೂಜಾ ಛಾಯಾಗ್ರಹಣ ಚಿತ್ರಕ್ಕಿದೆ. February 18, 2000ರಂದು ತೆರೆಕಂಡಿದ್ದ ‘ಹೇ ರಾಮ್’ ಮೂರು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿತ್ತು. ಚಿತ್ರದ HD ಆವೃತ್ತಿ ಈಗ Prime Videoದಲ್ಲಿ ಲಭ್ಯವಿದೆ.

LEAVE A REPLY

Connect with

Please enter your comment!
Please enter your name here