ಈ ವರ್ಷದ ಬಹುನಿರೀಕ್ಷಿತ ಹಿಂದಿ ಚಿತ್ರಗಳಲ್ಲೊಂದಾದ ‘Emergency’ ಟೀಸರ್ ಬಿಡುಗಡೆಯಾಗಿದೆ. ನಟಿ ಕಂಗನಾ ರನಾವತ್ ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ ಚಿತ್ರವಿದು. ಈ ವರ್ಷ ಇದು ಪ್ರಮುಖ ರಾಜಕೀಯ ಚಿತ್ರವಾಗಲಿದೆ ಎಂದೇ ಸಿನಿಮಾ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ನವೆಂಬರ್ 24ರಂದು ಸಿನಿಮಾ ತೆರೆಕಾಣಲಿದೆ.
ನಟಿ ಕಂಗನಾ ರನಾವತ್ ನಿರ್ದೇಶಿಸಿ, ನಿರ್ಮಿಸಿ, ನಟಿಸಿರುವ ಹಿಂದಿ ಚಿತ್ರ ‘Emergency’ (ತುರ್ತು ಪರಿಸ್ಥಿತಿ) ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ಅನ್ನು ಕಂಗನಾ ಟ್ವಿಟರ್ನಲ್ಲಿ ಹಂಚಿಕೊಂಡು, ’25th June marks #48thanniversaryofEmergency watch #Emergency come alive on big screens on 24th November 2023…’ ಎಂದು ಬರೆದಿದ್ದಾರೆ. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಬಯೋಪಿಕ್ ಸಿನಿಮಾದಲ್ಲಿ ಕಂಗನಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಅನುಪಮ್ ಖೇರ್, ಮಹಿಮಾ ಚೌಧರಿ, ವಿಶಾಕ್ ನಾಯರ್ ಮತ್ತು ಶ್ರೇಯಸ್ ತಲ್ಪಾಡೆ ಇತರೆ ಪ್ರಮುಖ ಪಾತ್ರಧಾರಿಗಳು. ತುರ್ತು ಪರಿಸ್ಥಿತಿಯು ದೇಶದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಘಟನೆ. 1975ರಲ್ಲಿ ತುರ್ತು ಪರಿಸ್ಥಿತಿ (Emergency) ಘೋಷಣೆ ಮಾಡಿದಾಗ ದೇಶದಲ್ಲಿ ಬದಲಾಗಿದ್ದ ಪರಿಸ್ಥಿತಿ ಹಾಗೂ ದೇಶ ಯಾವ ಸ್ಥಿತಿಗೆ ತಲುಪಿತ್ತು ಎಂಬುದು ಈ ಸಿನಿಮಾದ ಕತೆ. ಟೀಸರ್ನಲ್ಲಿ ನಟಿ ಕಂಗನಾ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನೇ ಹೋಲುತ್ತಾರೆ ಎಂದು ಅವರ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ 48 ವರ್ಷಗಳ ನಂತರ ಅದೇ ದಿನಾಂಕ ನವೆಂಬರ್ 24ರಂದು ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
25th June marks #48thanniversaryofEmergency watch #Emergency come alive on big screens on 24th November 2023…#Emergency #Emergency1975 #DarkDaysOfEmergency #EmergencyOn24thNov pic.twitter.com/gfTvsAsY1Q
— Kangana Ranaut (Modi Ka Parivar) (@KanganaTeam) June 25, 2023