ಬಾಲಿವುಡ್‌ ನಟ ಬಾಬ್ಬಿ ಡಿಯೋಲ್‌ ‘ಕಂಗುವಾ’ ತಮಿಳು ಚಿತ್ರದೊಂದಿಗೆ ಕಾಲಿವುಡ್‌ಗೆ ಬರುತ್ತಿದ್ದಾರೆ. ಚಿತ್ರದಲ್ಲಿನ ಅವರ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಶಿವ ನಿರ್ದೇಶನದ ಈ ಕಾಲ್ಪನಿಕ – ಐತಿಹಾಸಿಕ ಚಿತ್ರದ ನಾಯಕನಟನಾಗಿ ಸೂರ್ಯ ನಟಿಸುತ್ತಿದ್ದಾರೆ.

‘ಕಂಗುವಾ’ ಚಿತ್ರತಂಡ ಚಿತ್ರದ ನಟ ಬಾಬ್ಬಿ ಡಿಯೋಲ್‌ ಕ್ಯಾರಕ್ಟರ್‌ ಪೋಸ್ಟರ್‌ ಬಿಡುಗಡೆ ಮಾಡಿದೆ. ಈ ಕಾಲ್ಪನಿಕ – ಐತಿಹಾಸಿಕ ಚಲನಚಿತ್ರವನ್ನು ಶಿವ ನಿರ್ದೇಶಿಸುತ್ತಿದ್ದು, ಸೂರ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇದು ಬಾಬಿ ಡಿಯೋಲ್‌ ಅವರ ಮೊದಲ ತಮಿಳು ಸಿನಿಮಾ ಆಗಿದ್ದು, Studio Green ತನ್ನ X ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡು, ‘ಕಠೋರ, ಬಲಶಾಲಿಯಾದ ನಮ್ಮ ‘ಉಧಿರನ್’ ಬಾಬಿ ಡಿಯೋಲ್ ಸರ್ ಅವರಿಗೆ ಜನ್ಮದಿನದ ಶುಭಾಶಯಗಳು’ ಎಂದು ಕ್ಯಾಪ್ಶನ್‌ ನೀಡಿದೆ. ಸೂರ್ಯ ಅಭಿನಯದ ಮೊದಲ Pan India ಸಿನಿಮಾ ಇದಾಗಿದ್ದು, ಚಿತ್ರದ ಪ್ರೋಮೋ ಮತ್ತು ಪೋಸ್ಟರ್‌ಗಳು ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿವೆ. ಚಿತ್ರವು ಹಳ್ಳಿಗಾಡಿನ ದೃಶ್ಯಗಳನ್ನು ಹೆಚ್ಚಾಗಿ ಹೊಂದಿದ್ದು, ಸಿನಿಮಾ ವಿಶ್ವದಾದ್ಯಂತ 38 ಭಾಷೆಗಳಲ್ಲಿ 3Dಯಲ್ಲಿ ಬಿಡುಗಡೆಯಾಗಲಿದೆ.

ಸಿನಿಮಾವನ್ನು Studio Green ಬ್ಯಾನರ್‌ ಅಡಿಯಲ್ಲಿ ನಿರ್ಮಿಸಲಾಗುತ್ತಿದ್ದು, ಈ ನಿರ್ಮಾಣ ಸಂಸ್ಥೆಯು ಉನ್ನತ ವಿತರಣಾ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಚಿತ್ರವನ್ನು 2024ರ ಆರಂಭದಲ್ಲಿ ವಿಶ್ವದಾದ್ಯಂತ ಬಿಡುಗಡೆ ಮಾಡಲು ಸಹ ನಿರ್ಧರಿಸಲಾಗಿದೆ. ಸಿನಿಮಾದಲ್ಲಿ ದಿಶಾ ಪಟಾನಿ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ವೆಟ್ರಿ ಪಳನಿಸಾಮಿ ಛಾಯಾಗ್ರಹಣ, ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆ, ನಿಶಾದ್ ಯೂಸೂಫ್‌ ಸಂಕಲನ, ಮದನ್‌ ಕರ್ಕಿ ಸಂಭಾಷಣೆ ಚಿತ್ರಕ್ಕಿದೆ. ಸಿನಿಮಾ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here