‘ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವʼ (IFFI) ನವೆಂಬರ್ 20ರಿಂದ ನವೆಂಬರ್ 28ರವರೆಗೆ ನಡೆಯಲಿದೆ. ಸೂಪರ್‌ಹಿಟ್‌ ‘ಕಾಂತಾರ’, ಚಿತ್ರೋತ್ಸವಗಳಲ್ಲಿ ದೊಡ್ಡ ಸದ್ದು ಮಾಡಿದ ‘ಪಿಂಕಿ ಎಲ್ಲಿ?’, ‘ಜನಪ್ರಿಯ ಸಿನಿಮಾ’ ವಿಭಾಗದಲ್ಲಿ ‘KGF2’ ಚಿತ್ರಗಳು ಸೇರಿದಂತೆ ಮತ್ತೆ ಕೆಲವು ಕನ್ನಡ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಗೋವಾ ಸಿನಿಮಾ ಉತ್ಸವ ಎಂದು ಕರೆಯಲಾಗುವ ‘ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವʼ (IFFI) ಘೋಷಣೆಯಾಗಿದ್ದು, ಸಿನಿಮಾ ಪ್ರವೇಶಕ್ಕೆ ಆಹ್ವಾನ ನೀಡಲಾಗಿದೆ. ವಿಶೇಷವೆಂದರೆ ಈ ಬಾರಿ ದಕ್ಷಿಣದ ಸಿನಿಮಾಗಳು ಹೆಚ್ಚು ಪ್ರದರ್ಶನಗೊಳ್ಳಲಿವೆ. ಈಗಾಗಲೇ ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡಿರುವ ಸಿನಿಮಾಗಳು ಸಿನಿಮೋತ್ಸವದಲ್ಲಿಯೂ ಪ್ರದರ್ಶನಗೊಳ್ಳಲಿದ್ದು, ಕೇವಲ ಕಲಾತ್ಮಕ ಅಥವಾ ಪ್ರಾದೇಶಿಕ ಸಿನಿಮಾಗಳು ಮಾತ್ರವಲ್ಲದೇ ದೊಡ್ಡ ಯಶಸ್ಸು ಕಂಡ ದಕ್ಷಿಣದ ಸಿನಿಮಾಗಳು ಸಹ ಪ್ರದರ್ಶನ ಕಾಣಲಿವೆ.

‘International Film Fest of India’ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಉತ್ಸವದಲ್ಲಿ ಜನಪ್ರಿಯ ‘ಕಾಂತಾರ’, ಚಿತ್ರೋತ್ಸವಗಳಲ್ಲಿ ದೊಡ್ಡ ಸದ್ದು ಮಾಡಿದ ‘ಪಿಂಕಿ ಎಲ್ಲಿ?’, ‘ಜನಪ್ರಿಯ ಸಿನಿಮಾ’ ವಿಭಾಗದಲ್ಲಿ ‘KGF2’ ಚಿತ್ರಗಳು ಸೇರಿದಂತೆ ಮತ್ತೆ ಕೆಲವು ಕನ್ನಡ ಸಿನಮಾಗಳು ಪ್ರದರ್ಶನಗೊಳ್ಳಲಿವೆ. ತಮಿಳಿನ ‘ಪೊನ್ನಿಯಿನ್ ಸೆಲ್ವನ್ 2’, ವೆಟ್ರಿಮಾರನ್ ನಿರ್ದೇಶನದ ‘ವಿಡುದಲೈ 1’ ಸಿನಿಮಾಗಳು, ಮಲಯಾಳಂನ ‘2018’ ಮತ್ತು ‘ನಾನ್​ದಾನ್ ಕೇಸ್ ಕುಡು’ ಸಿನಿಮಾಗಳು, ತೆಲುಗಿನ ‘RRR’ ಸಿನಿಮಾ ಪ್ರದರ್ಶನಗೊಳ್ಳಲಿವೆ.

ಹಿಂದಿಯ ‘ದಿ ವ್ಯಾಕ್ಸಿನ್‌ ವಾರ್‌’, ‘ದಿ ಕೇರಳ ಸ್ಟೋರಿ’, ‘ಗುಲ್‌ಮೊಹರ್‌’, ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳು ‘ಪನೋರಮಾ’ ವಿಭಾಗದಲ್ಲಿ ಈಗಾಗಲೇ ಪ್ರವೇಶ ಪಡೆದಿವೆ. ಜೊತೆಗೆ ಬಾಲಿವುಡ್‌ನ ಇನ್ನೂ ಕೆಲವು ಸಿನಿಮಾಗಳು ಸಹ ಇಲ್ಲಿ ಪ್ರದರ್ಶನಗೊಳ್ಳಲಿವೆ. ನವೆಂಬರ್ 20ಕ್ಕೆ ಈ ಸಿನಿಮೋತ್ಸವ ಆರಂಭವಾಗಿ ನವೆಂಬರ್ 28ಕ್ಕೆ ಮುಕ್ತಾಯಗೊಳ್ಳಲಿದೆ. ಹಾಲಿವುಡ್‌ನ ಜನಪ್ರಿಯ ನಟ, ನಿರ್ಮಾಪಕ ಮೈಖಲ್ ಡಗ್ಲಸ್ ಅವರಿಗೆ ಸಿನಿಮಾ ಉತ್ಸವದಲ್ಲಿ ‘ಸತ್ಯಜಿತ್ ರೇ’ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆಯ ಮೂಲಗಳು ಹೇಳಿವೆ.

LEAVE A REPLY

Connect with

Please enter your comment!
Please enter your name here