ಅಶ್ವಿನ್‌ ವಿಜಯಮೂರ್ತಿ ನಿರ್ದೇಶನದ ‘ಆರ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಇದೊಂದು ಸ್ಪಿರಿಚ್ಯುಯೆಲ್‌ ಥ್ರಿಲ್ಲರ್‌ – ಡ್ರಾಮಾ ಎನ್ನುತ್ತಾರೆ ನಿರ್ದೇಶಕರು. ರೋಹಿತ್‌ ಮತ್ತು ದೀಪಿಕಾ ಆರಾಧ್ಯ ಅಭಿನಯದ ಸಿನಿಮಾ ಜುಲೈ 28ರಂದು ತೆರೆಕಾಣಲಿದೆ.

‘ಯುವಕನೊಬ್ಬನ ಜರ್ನಿ ಕಥೆ ಇದು. ಆ ಜರ್ನಿಯಲ್ಲಿ ಅವನು ಆಧ್ಯಾತ್ಮಿಕವಾಗಿ ಯಾವ ರೀತಿ ಸವಾಲುಗಳನ್ನು ಎದುರಿಸುತ್ತಾನೆ. ಅದು ಯಾವುದೇ ಮುಖಾಂತರವಾಗಿಯಾದರು ಬರಬಹುದು. ಹೆಣ್ಣಿನ ಮೂಲಕ, ದುಡ್ಡಿನ ಮೂಲಕ ಇಲ್ಲವೇ ಸಂಬಂಧಗಳ ಮೂಲಕವಾದರೂ ಬರಬಹುದು. ನಮ್ಮ ಜೀವನದಲ್ಲಿ ಯಾರೊಬ್ಬರಾದರೂ ಬಂದರೂ ಅವರು ತಿಳಿಸಿಕೊಡಲು ಬರ್ತಾರೆ. ಈ ಸವಾಲುಗಳನ್ನು ಎದುರಿಸಿ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಾರಾ ಅನ್ನೋದು ಕಥೆ’ ಎಂದು ತಮ್ಮ ಸಿನಿಮಾ ಕುರಿತು ಹೇಳುತ್ತಾರೆ ನಿರ್ದೇಶಕ ಅಶ್ವಿನ್‌ ವಿಜಯಮೂರ್ತಿ. ಅವರ ‘ಆರ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ದುಷ್ಟ ಶಕ್ತಿ ಮತ್ತು ದೈವ ಸಂಘರ್ಷದ ಕಥಾಹಂದರ ಎಂದು ತಮ್ಮ ಸಿನಿಮಾದ ಕತೆಯ ಎಳೆಯನ್ನು ಹೇಳುತ್ತಾರವರು.

ಇದು ಸಂಪೂರ್ಣ ಹೊಸಬರದ್ದೇ ತಂಡ ರೂಪಿಸಿರುವ ಸಿನಿಮಾ. ರೋಹಿತ್ ಹಾಗೂ ದೀಪಿಕಾ ಆರಾಧ್ಯ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಹೀರೋ ರೋಹಿತ್‌ ಅವರೇ ಕತೆ, ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ. ಆನಂದ್ ನೀನಾಸಂ ಸತ್ಯ ರಾಜ್ ನಿಖಿಲ್ ಶ್ರೀಪಾದ್ ಪ್ರತೀಕ್ ಲೋಕೇಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಬಹುತೇಕ ಚಿತ್ರೀಕರಣ ಉಡುಪಿಯಲ್ಲಿ ನಡೆದಿದ್ದು, ಆ ಭಾಗದ ಕನ್ನಡ ಬಳಕೆ ಮಾಡಲಾಗಿದೆ. ಚಿತ್ರವನ್ನು AR ಫಿಲ್ಮ್ಸ್‌ ಬ್ಯಾನರ್ ಅಡಿ ಸುಜಾತ ಚಡಗ, ಚಂದ್ರಶೇಖರ್ ಸಿ ಜಂಬಿಗಿ ನಿರ್ಮಾಣ ಮಾಡಿದ್ದಾರೆ. ಶ್ರೀಹರಿ ಛಾಯಾಗ್ರಾಹಣ, ಗಿರೀಶ್ ಹೊತ್ತೂರ್ ಸಂಗೀತ ನಿರ್ದೇಶನ, ಮಾದೇಶ್ ಸಂಕಲನ, ದೇವಿ ಪ್ರಕಾಶ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಜುಲೈ 28ರಂದು ಸಿನಿಮಾ ತೆರೆಕಾಣಲಿದೆ.

Previous articleರೋಚಕ ವಿಶ್ವ ಭೀತಿಯ ರಹಸ್ಯಕ್ಕೆ ‘ಕೀಲಿಕೈ’ – Mission: Impossible – Dead Reckoning
Next articleಶಿವರಾಜಕುಮಾರ್‌ – ಗಣೇಶ್‌ ಸಿನಿಮಾ | ಕೆ ಎಸ್‌ ರವಿಕುಮಾರ್‌ ನಿರ್ದೇಶನದ ಆಕ್ಷನ್‌ – ಥ್ರಿಲ್ಲರ್‌

LEAVE A REPLY

Connect with

Please enter your comment!
Please enter your name here