ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳಾದ ಸಿರಿ, ಕಾರ್ತಿಕ್ ಮತ್ತು ಗೌರೀಶ ಅಕ್ಕಿ ‘ಅಕ್ಕ’ ಟಾಸ್ಕ್‌ನಲ್ಲಿ ಭಾಗವಹಿಸಿದರು. ಈ ಭಾವಪೂರ್ಣ ಸ್ಕಿಟ್‌ ನೋಡಿ ಮನೆಯಲ್ಲಿನ ಸ್ಪರ್ಧಿಗಳೆಲ್ಲರ ಕಣ್ಗಳು ಒದ್ದೆಯಾದವು. JioCinemaದ ‘Live Shorts’ ಸೆಗ್‌ಮೆಂಟ್‌ನಲ್ಲಿ ಸೆರೆಯಾದ ಈ ಸ್ಕಿಟ್‌ನ ವೀಡಿಯೊ ಇಲ್ಲಿದೆ.

ಬಿಗ್‌ಬಾಸ್‌ ಮನೆಯಲ್ಲಿ ಹಲವು ರೀತಿಯ ಟಾಸ್ಕ್‌ಗಳು ನಡೆಯುತ್ತಿರುತ್ತವೆ. ಅಂಥದ್ದೊಂದು ಟಾಸ್ಕ್‌ ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಸ್ಪರ್ಧಿಗಳಾದ ಸಿರಿ, ಕಾರ್ತಿಕ್ ಮತ್ತು ಗೌರೀಶ ಅಕ್ಕಿ ಈ ಟಾಸ್ಕ್‌ನಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ JioCinemaದ ‘Live Shorts’ ಸೆಗ್‌ಮೆಂಟ್‌ನಲ್ಲಿ ಸೆರೆಯಾಗಿದೆ. ಸ್ಪರ್ಧಿಗಳು ತಮ್ಮದೇ ಹೆಸರಿನ ಪಾತ್ರಗಳಾಗಿ ಅಭಿನಯಿಸಿದ ಸ್ಕಿಟ್ ಹೆಸರು ‘ಅಕ್ಕ’. ಅಕ್ಕ ಮನೆಯಲ್ಲಿ ತನ್ನ ನೆಚ್ಚಿನ ತಮ್ಮನಿಗೆ ಕೈತುತ್ತು ತಿನ್ನಿಸುತ್ತಿದ್ದಾಳೆ. ಯಾಕೋ ಅವಳ ಮುಖದಲ್ಲಿ ನೋವಿದೆ. ಕಣ್ಣುಗಳಲ್ಲಿ ಕಂಬನಿ ಉಕ್ಕಿ ಹರಿಯುತ್ತಿದೆ.
ಸಿರಿ : ಕಾರ್ತಿಕ್… ಹುಶಾರು…
ಕಾರ್ತಿಕ್ : ಹೂ ಅಕ್ಕಾ….
ಸಿರಿ ಕಣ್ಣುಗಳಲ್ಲಿ ಕಂಬನಿ, ತುಟಿಗಳಲ್ಲಿ ನಗು ಇಟ್ಟುಕೊಂಡೇ ಕಾರ್ತಿಕ್ ನೆತ್ತಿಯನ್ನು ಅಕ್ಕರೆಯಿಂದ ಮುದ್ದಿಸುತ್ತಾಳೆ.
ಕಾರ್ತಿಕ್ : ಅಕ್ಕಾ… ನೀನು… ಅಲ್ಲ…
ಸಿರಿ : ಇನ್ನೊಂದ್ ಮಾತು… ನಿಂಗೆ ಏನೇ ಕಷ್ಟ ಬರ್ಲಿ, ನೀನೆನೇ ಸಾಧನೆ ಮಾಡು… ಈ ಅಕ್ಕ ನಿನ್ ಜೊತೆಗೆ ಯಾವಾಗ್ಲೂ ಇರ್ತಾಳೆ.
ಕಾರ್ತಿಕ್‌ ಗಟ್ಟಿಯಾಗಿ ಅಕ್ಕನನ್ನು ತಬ್ಬಿಕೊಳ್ಳುತ್ತಾನೆ.
ಕಾರ್ತೀಕ್ : ಪಲಾವ್ ತಿನ್ನಿಸ್ತೀಯಾ?
ಸಿರಿ : ಹೂಂ
ಕಾರ್ತಿಕ್ : ನಂಗೆ ನೀರುಕುಡಿಬೇಕು ಅನಿಸ್ತಿದೆ… ತಂದ್ಕೊಡ್ತೀಯಾ…
ಸಿರಿ : ಅಪ್ಪ, ಅಮ್ಮ ಹುಶಾರು….
ಸಿರಿ ಎದ್ದು ಹೊರಡುತ್ತಾಳೆ.
ಕಾರ್ತಿಕ್ : ಅಕ್ಕಾ… ಅದು…
ಅಷ್ಟರೊಳಗೆ ಮನೆಯೊಳಗೆ ಗೌರೀಶ್ ಬರುತ್ತಾನೆ.
ಗೌರೀಶ : ಬಾಗಿಲು ಯಾಕೆ ಓಪನ್ ಇದೆ?
ಕಾರ್ತಿಕ್ ಕಾಣಿಸುತ್ತಾನೆ.
ಗೌರೀಶ : ಕಾರ್ತಿಕ್… ನೀನ್ಯಾವಾಗ ಬಂದೆ…
ಕಾರ್ತೀಕ್ : ಬಾವಾ…
ಗೌರೀಶ : ಬೆಳಗಿಂದ ನಿನ್ನ ಫೋನ್‌ಗೆ ಟ್ರೈ ಮಾಡ್ತಿದೀನಿ. ಸ್ವಿಚ್‌ಆಫ್ ಆಗೋಗಿದೆ…
ಕಾರ್ತಿಕ್ : ಭಾವಾ ಬರ್ತಾ ದಾರೀಲಿ ಒಬ್ಬ ಕಳ್ಳ ನನ್ನ ಫೋನ್‌ನ…. ಅದ್ ಬಿಡಿ…. ಅದು ಆಮೇಲೆ ಹೇಳ್ತೀನಿ… ಅಕ್ಕ ಸಖತ್ತಾಗಿ ಪಲಾವ್ ಮಾಡಿದಾಳೆ. ನೀವು ಸುಸ್ತಾದವ್ರ ಹಾಗೆ ಕಾಣಿಸ್ತಿದೀರಾ… ಪಲಾವ್‌ ತಿನ್ನೋಣಂತೆ ಬನ್ನಿ…
ಗೌರೀಶ ಹಾಗೆಯೇ ನಿಂತುಕೊಂಡಿದ್ದಾನೆ.
ಗೌರೀಶ : ಏನಂದೆ? ಅಕ್ಕ ಪಲಾವ್ ಮಾಡಿದಾಳಾ? ಕಾರ್ತಿಕ್ ನಿಂಗೇನು ಹುಚ್ಚು ಹಿಡ್ದಿದ್ಯಾ?
ಕಾರ್ತಿಕ್ : ಯಾಕ್ ಬಾವಾ?
ಗೌರೀಶ : ಇವತ್ ಬೆಳಗಿನ ಜಾವ ಆಕ್ಸಿಡೆಂಟ್ ಆಗಿ ನಿಮ್ಮಕ್ಕ ಹೋಗ್ಬಿಟ್ಳು ಕಣೋ… ಆನ್‌ಸ್ಪಾಟ್!
ಕಾರ್ತಿಕ್‌ ನಂಬಲೇ ಸಾಧ್ಯವಾಗುವುದಿಲ್ಲ. ಹಾಗಾದ್ರೆ ಈಗಷ್ಟೇ ಕಾರ್ತಿಕ್ ಜೊತೆಗೆ ಮಾತಾಡಿದ್ದು ಯಾರು? ತುತ್ತು ತಿನ್ನಿಸಿದ್ದು ಯಾರು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಪ್ರೇಕ್ಷಕರಿಗೇ ಬಿಡುತ್ತದೆ ಈ ಸ್ಕಿಟ್‌.
ಈ ಭಾವಪೂರ್ಣ ಸ್ಕಿಟ್ ಅನ್ನು ಇಲ್ಲಿ ನೋಡಬಹುದು –

https://jiocinema.onelink.me/fRhd/elu7td2q

LEAVE A REPLY

Connect with

Please enter your comment!
Please enter your name here