ಶಿವರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ‘ಭಜರಂಗಿ 2’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಅದ್ಧೂರಿ ಮೇಕಿಂಗ್‌, ವಿಕ್ಷಿಪ್ತ ಪಾತ್ರಗಳ ಮೂಲಕ ನಿರ್ದೇಶಕ ಹರ್ಷ ಸೀಕ್ವೆಲ್‌ನಲ್ಲಿ ಮತ್ತಷ್ಟು ರಂಗು ತುಂಬುವ ಸಾಹಸ ಮಾಡಿದ್ದಾರೆ.

ಹರ್ಷ ನಿರ್ದೇಶನದ ಬಹುನಿರೀಕ್ಷಿತ ‘ಭಜರಂಗಿ 2’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಸುದೀರ್ಘ ಅವಧಿಯ ಚಿತ್ರೀಕಣರದಿಂದ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಚಿತ್ರವಿದು. ಮುಂದಿನ ವಾರ ಸಿನಿಮಾ ತೆರೆಗೆ ಬರಲಿದೆ. ಕೋವಿಡ್ ನಂತರದ ದಿನಗಳಲ್ಲಿ ಬಿಡುಗಡೆಯಾಗುತ್ತಿರುವ ಮೂರನೇ ದೊಡ್ಡ ಸಿನಿಮಾ ಎನ್ನುವುದರ ಜೊತೆಗೆ ಶಿವರಾಜಕುಮಾರ್ ಮಹತ್ವಾಕಾಂಕ್ಷೆಯ ಪ್ರಯೋಗವೂ ಹೌದು. ಟ್ರೈಲರ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಹಾಗಾಗಿ ಬಿಡುಗಡೆಯಾದ 20 ನಿಮಿಷಗಳಲ್ಲಿ ಲಕ್ಷ ವ್ಯೂಸ್‌ ದಾಟಿತ್ತು. ಸಾಕಷ್ಟು ರಿಚ್‌ನೆಸ್ ಇದ್ದು ಮೇಕಿಂಗ್‌ ಕುರಿತಂತೆ ಹರ್ಷ ವಿಶೇಷ ಕಾಳಜಿ ವಹಿಸಿರುವುದು ಸ್ಪಷ್ಟವಾಗುತ್ತದೆ.

ಸಂಸ್ಕೃತ ಶ್ಲೋಕವೊಂದರ ಮೂಲಕ ಆರಂಭವಾಗುವ ಟ್ರೈಲರ್‌ನಲ್ಲಿ ಒಂದೊಂದೇ ಪಾತ್ರಗಳ ಪರಿಚಯ ಸಿಗುತ್ತದೆ. ಹೀರೋ ಎಂಟ್ರಿಗೆ ಭರ್ಜರಿ ಹಿನ್ನೆಲೆ ಸಂಗೀತವೇನಿಲ್ಲ. ‘ದುಷ್ಟ ಶಿಕ್ಷೆ, ಶಿಷ್ಟ ರಕ್ಷಣೆ’ಯ ಸಂದೇಶಕ್ಕೆ ಕನ್ನಡಿ ಹಿಡಿಯುವಂತಹ ಸನ್ನಿವೇಶಗಳನ್ನು ಕಾಣಬಹುದು. ಒಟ್ಟಾರೆ ಟ್ರೈಲರ್‌ ಸಿನಿಮಾ ಕುರಿತಂತೆ  ನಿರೀಕ್ಷೆಯನ್ನಂತೂ ಹುಟ್ಟುಹಾಕಿದೆ. ಟ್ರೈಲರ್‌ನಲ್ಲಿ ತೋರಿಸಿರುವ ವೈಭವ ಸಿನಿಮಾದಲ್ಲೂ ಇರುತ್ತದೆಯೇ ಎಂದು ನೋಡಬೇಕು. ಜಯಣ್ಣ – ಭೋಗೇಂದ್ರ ನಿರ್ಮಾಣದ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ, ಸ್ವಾಮಿ ಗೌಡ ಛಾಯಾಗ್ರಹಣ, ದೀಪು ಎಸ್.ಕುಮಾರ್ ಸಂಕಲನ, ರವಿ ಸಂತೇಹಕ್ಲು ಕಲಾ ನಿರ್ದೇಶನ, ರವಿ ವರ್ಮ ಮತ್ತು ವಿಕ್ರಂ ಮೋರ್ ಸಾಹಸ ಸಂಯೋಜನೆ, ಪ್ರಕಾಶ್ ಗೋಕಾಕ್ ಮೇಕಪ್ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here